ನವದೆಹಲಿ: ನನ್ನ ಅಣ್ಣ ಬೇಡ ಎನಿಸಿದ್ದರೆ ಲವ್ವರ್ ಜೊತೆಯೇ ಓಡಿ ಹೋಗಬಹುದಿತ್ತು. ಕೊಲೆ ಯಾಕೆ ಮಾಡಿದಳು ಎಂದು ಪತ್ನಿಯಿಂದ ಹತ್ಯೆಯಾದ ರಾಜಾ ರಘುವಂಶಿ ಸಹೋದರಿ ಶ್ರಾಸ್ತಿ ಅಳಲು ತೋಡಿಕೊಂಡಿದ್ದಾರೆ.
ಸೋನಮ್ ಎಂಬಾಕೆ ತನ್ನ ಪತಿಯನ್ನು ಹನಿಮೂನ್‌ಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ಕೊಲೆಯಾದ ಉದ್ಯಮಿ ರಾಜಾ ರಘುವಂಶಿ ನೆನೆದು ಸಹೋದರಿ ಕಣ್ಣೀರಿಟ್ಟಿದ್ದಾರೆ. ಕೊಲೆಗಾರ್ತಿ ಅತ್ತಿಗೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: `ನಾ ವಿಧವೆಯಾಗ್ತೀನಿ, ನಿನ್ನನ್ನೇ ಮದ್ವೆಯಾಗ್ತೀನಿ’ ಅಂದಿದ್ಳಂತೆ ಸೋನಂ ರಘುವಂಶಿ..!
View this post on Instagram
ನನ್ನ ಸಹೋದರ, ಸೋನಮ್ ಜೊತೆ ಏಳು ಜನ್ಮಗಳ ಕಾಲ ಇರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ. ಆದರೆ, ಅವಳು ಅವನ ಜೊತೆ ಏಳು ದಿನಗಳು ಕೂಡ ಇರಲು ಸಾಧ್ಯವಾಗಲಿಲ್ಲ. ಅವನು ನಿಮಗೆ ಏನು ಮಾಡಿದ್ದ? ಯಾಕೆ ಕೊಂದಿರಿ ಎಂದು ರಾಜಾ ಸಹೋದರಿ ಪ್ರಶ್ನಿಸಿದ್ದಾಳೆ.
ನೀನು ಬೇರೆಯವರನ್ನು ಇಷ್ಟಪಟ್ಟಿದ್ದರೆ ಓಡಿಹೋಗಬಹುದಿತ್ತು. ನೀನು ಅವನನ್ನು ಏಕೆ ಕೊಂದೆ? ನೀನು ಇನ್ನೊಬ್ಬರ ಸಹೋದರನನ್ನು, ಮತ್ತೊಬ್ಬರ ಮಗನನ್ನು ಏಕೆ ಕೊಂದೆ ಎಂದು ಅಳುತ್ತಾ ಕೇಳಿದ್ದಾರೆ. ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್ ಕಿಲ್ಲರ್ಸ್.. ಫೋನ್‌ಕಾಲ್‌ನಲ್ಲೇ ಪಿನ್ ಟು ಪಿನ್ ಅಪ್ಡೇಟ್ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ
ರಾಜಾ ಮತ್ತು ಸೋನಮ್ ಮೇ 11 ರಂದು ವಿವಾಹವಾದರು. ಮೇ 20 ರಂದು ಮೇಘಾಲಯಕ್ಕೆ ಹನಿಮೂನ್‌ಗೆ ಹೋದರು. ಮೂರು ದಿನಗಳ ನಂತರ ಇಬ್ಬರೂ ನಾಪತ್ತೆಯಾಗಿದ್ದರು. ಜೂನ್ 2 ರಂದು ರಾಜಾ ಶವ ಪತ್ತೆಯಾಗಿತ್ತು. ಮಚ್ಚಿನಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆ ಆರೋಪದ ಮೇಲೆ 24 ವರ್ಷದ ಸೋನಮ್, ಆಕೆಯ ಪ್ರಿಯಕರ ರಾಜ್ ಮತ್ತು ಅವರ ಇಬ್ಬರು ಸಹಾಯಕರಾದ ಆಕಾಶ್ ರಜಪೂತ್ ಹಾಗೂ ವಿಶಾಲ್ ಸಿಂಗ್ ಚೌಹಾಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್ ಬಗ್ಗೆ ಬಿಚ್ಚಿಟ್ಟ ಅತ್ತೆ