ಬೆಂಗಳೂರು: ಗ್ಯಾರಂಟಿಗಳ ಸರ್ಜರಿಗೆ ಮುಂದಾಗಲು ಪ್ರಮುಖ ಕಾರಣಗಳೇನು ಎಂಬುದನ್ನು ಕಾಂಗ್ರೆಸ್ ಸರ್ಕಾರ ಬಹಿರಂಗಪಡಿಸಿದೆ. ಅನರ್ಹರ ಖಾತೆಗಳಿಗೂ ಗೃಹಲಕ್ಷ್ಮಿ (Gruhalakshmi Scheme) ಹಣ ಹೋಗುತ್ತಿದೆ. ಇದೆಲ್ಲವನ್ನೂ ಸರಿಪಡಿಸಲು ಯೋಜನೆ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಗೃಹಲಕ್ಷ್ಮಿ ಹಣ ದುರುಪಯೋಗ ತಡೆಗೆ ಡಿಕೆ ಸರ್ಕಾರದ ಹೊಸ ಹೆಜ್ಜೆಯಿಟ್ಟಿದೆ. ಸತ್ತವರ ಹೆಸರಿಗೂ ದುಡ್ಡು, ಹೆಸರೇ ಇಲ್ಲದ ಬ್ಯಾಂಕ್‌ಗೂ ಹಣ ಪಾವತಿ, ಕರ್ನಾಟಕದಲ್ಲಿ ಇಲ್ಲದೇ ಇರುವ ಬ್ಯಾಂಕ್‌ಗಳ ಖಾತೆಗೂ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ. ಗೃಹಲಕ್ಷ್ಮಿ ಆಪರೇಷನ್‌ನ ಎಕ್ಸ್‌ಕ್ಲೂಸಿವ್ ಡಿಟೈಲ್ಸ್ ‘ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ಗೃಹಲಕ್ಷ್ಮಿ ಹಣ ಪೋಲಾಗುತ್ತಿರುವುದು ಎಲ್ಲಿ? ಅಷ್ಟಕ್ಕೂ ಸರ್ಕಾರ ಜರಡಿ ಹಿಡಿಯಲು ಮುಂದಾಗಿರೋದೇಕೆ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ. ಇದನ್ನೂ ಓದಿ: ಗ್ಯಾರಂಟಿ ಕಳ್ಳಾಟಕ್ಕೆ ಬ್ರೇಕ್; ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ
ಗೃಹಲಕ್ಷ್ಮೀ ಯೋಜನೆಯಲ್ಲಿ ಸತ್ತವರ ಹೆಸರಿಗೂ ಹಣ ಜಮೆಯಾಗಿದೆ. 68,776 ಮೃತ ಮಹಿಳೆಯರ ಅಕೌಂಟ್‌ಗೆ ಹಣ ಜಮೆ ಆಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 79 ಕೋಟಿಯಷ್ಟು ಸರ್ಕಾರದ ಹಣ ಪೋಲಾಗಿದೆ. ಬರೋಬ್ಬರಿ 79,75,66,000 ರೂ. ಸತ್ತ ಮಹಿಳೆಯರ ಅಕೌಂಟ್‌ಗೆ ಜಮೆಯಾಗಿದೆ. ಮೃತಪಟ್ಟವರಿಗೆ ಜಮೆಯಾದ ಹಣ ವಾಪಸ್ ಪಡೆಯಲು ಸರ್ಕಾರ ಮುಂದಾಗಿದೆ.
ಒಟ್ಟು 92 ಬ್ಯಾಂಕ್‌ಗಳಿಗೆ ಗೃಹಲಕ್ಷ್ಮೀಯರ ಮರಣದ ನಂತರವೂ ಹಣ ಪಾವತಿಯಾಗಿದೆ. ಸತ್ತವರ ಹೆಸರಲ್ಲಿ ಹಣ ಪಡೆದಿದ್ದು ಯಾರು? ಯಾರ ಅಕೌಂಟ್‌ಗೆ ಹಣ ಜಮೆ ಆಯ್ತು? ಮೃತರಾದ್ರೂ ಹಣ ಪಡೆಯುತ್ತಿರೋದ್ಯಾರು ಎಂಬುದನ್ನು ಪರಿಶೀಲಿಸಲು ಸರ್ಕಾರ ಮುಂದಾಗಿದೆ. ಹಾಗೆಯೇ, ಮೃತರ ಹೆಸರಲ್ಲಿ ಹಣ ಪಡೆಯುತ್ತಿರುವವರ ಪತ್ತೆ ಕಾರ್ಯಕ್ಕೆ ಸರ್ಕಾರ ಇಳಿದಿದೆ. ಈಗಾಗಲೇ ಹಂತಹಂತವಾಗಿ ಹಣ ವಾಪಸ್ ಪಡೆಯುತ್ತಿದೆ.
ಗುರುತಿಸಿದ ಮೃತ ಮಹಿಳೆಯರ ಡಿಬಿಟಿ ಹಣ ಬಂದ್ ಮಾಡಲಾಗಿದೆ. ಮೃತಪಟ್ಟ ಮಹಿಳೆಯರ ಅಕೌಂಟ್‌ನ ಹಣ ಪಡೆಯಲು ಬ್ಯಾಂಕರ್ಸ್, ಬ್ಯಾಂಕ್ ಆಡಳಿತ ಮಂಡಳಿ ಜೊತೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇ-ಗರ್ವನೆನ್ಸ್ ಅಧಿಕಾರಿಗಳು ಸಭೆ ಮಾಡಿದ್ದಾರೆ. ಹಣ ಡ್ರಾ ಮಾಡದೇ ಇರುವ ಖಾತೆಗಳಿಂದ ಇಲಾಖೆ ಹಣ ವಾಪಾಸ್ ಪಡೆದಿದೆ. ಆದರೆ, ಕೆಲ ಖಾತೆಗಳಲ್ಲಿ ಹಣ ಎಟಿಎಂ ಮೂಲಕ ಡ್ರಾ ಆಗಿದೆ. ಹೊರ ರಾಜ್ಯದ ಬ್ಯಾಂಕ್‌ಗಳಿಂದ ಮಾಹಿತಿ ಬರುತ್ತಿಲ್ಲ. ಮೃತ ಗೃಹಲಕ್ಷ್ಮಿ ಫಲಾನುಭವಿಗಳ ಪತ್ತೆ ಕಾರ್ಯ ಇನ್ನೂ ನಡೆಯುತ್ತಿದೆ. ಇದನ್ನೂ ಓದಿ: ಗ್ಯಾರಂಟಿಗೆ ದುಡ್ಡಿಲ್ಲ, ಕಾಂಗ್ರೆಸ್ಸಿಗರು ಕೊಳ್ಳೆ ಹೊಡೆಯುವುದರಲ್ಲಿ ನಿಸ್ಸೀಮರು: ಡಿವಿಎಸ್ ಕಿಡಿ
