ಹಾವೇರಿ: ಬ್ರಿಡ್ಜ್ ಮೇಲಿಂದ ಸರ್ವೀಸ್ ರಸ್ತೆಗೆ ವಿಆರ್‍ಎಲ್ ಬಸ್ ಪಲ್ಟಿಯಾಗಿ ಚಾಲಕ ಸೇರಿ ಇಬ್ಬರು ಸಾವನ್ನಪ್ಪಿ, ಹದಿನೈದು ಜನರು ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಬಳಿ ಇರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆದಿದೆ.
Advertisement
ಬೆಂಗಳೂರಿನಿಂದ ಗೋಕಾಕ್‍ಗೆ ಸ್ಲೀಪರ್ ಬಸ್ ಹೊರಟಿತ್ತು. ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಕ್ರೇನ್‍ನ ಸಹಾಯದಿಂದ ಬಸ್ ಅನ್ನು ಮೇಲೆತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಶಂಕರ ಮಾರಿಹಾಳ, ಸಿಪಿಐ ನಾಗಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಕದ ಸಂಭ್ರಮ – ಶಾಂತಿಧಾಮಕ್ಕೆ 25 ಲಕ್ಷ ರೂ. ವಿತರಣೆ
Advertisement
ಘಟನೆ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.