ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದಲ್ಲಿ ರೈತರ ಪಂಪ್ ಸೆಟ್ ಕೇಬಲ್ (Pump Set Cable) ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ರಾಜಕುಮಾರ್ ಜಾದವ್, ಸಂತೋಷ ಚೆನ್ನೂರ, ರೇವಣಸಿದ್ದ ಚೆನ್ನೂರ್ ಸೇರಿದಂತೆ ಏಳೆಂಟು ಜನ ರೈತರ ಪಂಪ್ ಸೆಟ್ ಕೇಬಲ್ ಕಳುವು ಮಾಡಲಾಗಿದೆ. ಜೊತೆಗೆ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪಂಪ್ ಸೆಟ್ ಕೇಬಲ್ ಅನ್ನು ಕಳ್ಳರು ಕದ್ದೊಯ್ದಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಪತ್ನಿಯನ್ನು ಕೊಂದು ಮೋರಿಗೆಸೆದಿದ್ದ ಪತಿ ಅರೆಸ್ಟ್
ಒಂದೇ ರಾತ್ರಿ ಗ್ರಾಮದಲ್ಲಿ ಖದೀಮರಿಂದ ಕೇಬಲ್ ಕಳ್ಳತನವಾಗಿದೆ. ಲಕ್ಷಾಂತರ ಮೌಲ್ಯದ ಕೇಬಲ್ ಕಳ್ಳತನ ಮಾಡಿ ಏಸ್ಕೇಪ್ ಆಗಿದ್ದಾರೆ. ಕಳ್ಳರನ್ನ ಬಂಧಿಸುವAತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೂ ಇದೇ ರೀತಿ ಕಳ್ಳತನವಾಗಿತ್ತು. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



