– ಆಕ್ಷೇಪಣೆಗೆ ಒಂದು ವಾರ ಅವಕಾಶ
ಬೆಂಗಳೂರು: ಹೈಸ್ಕೂಲ್‌ಗಳಲ್ಲಿ (High School) ಶಿಕ್ಷಕರ (Teachers) ಕೊರತೆ ನೀಗಿಸಲು ಉಪನ್ಯಾಸಕರ ವೃಂದ ನಿಯಮಕ್ಕೆ ಸರ್ಕಾರ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯಿಂದ 9 ಹಾಗೂ 10ನೇ ತರಗತಿಗೆ ಸರ್ಕಾರಿ ಪಿಯುಸಿ ಉಪನ್ಯಾಸಕರು (PUC Lecturers) ಪಾಠ ಮಾಡಬೇಕಿದೆ.
ಪದವಿ ಪೂರ್ವ ಶಿಕ್ಷಣ ನೇಮಕಾತಿ ನಿಯಮಗಳು -2013ಕ್ಕೆ ಸರ್ಕಾರ ಮಹತ್ವದ ತಿದ್ದುಪಡಿ ಮಾಡಿದೆ. ತಿದ್ದುಪಡಿಯ ಕರಡು ನಿಯಮವನ್ನು ಸರ್ಕಾರ ಈಗಾಗಲೇ ಪ್ರಕಟ ಮಾಡಿದೆ. ಕರಡು ನಿಯಮಕ್ಕೆ 7 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: MLC Election | ಅಡ್ಡ ಮತದಾನಕ್ಕೆ ಅಮಿತ್ ಶಾ ಗರಂ – ಫೋನ್‌ನಲ್ಲಿ ಹೆಚ್‌ಡಿಕೆ ಜೊತೆ ಚರ್ಚೆ
ಹಳೆಯ ನಿಯಮದ ಪ್ರಕಾರ, ಪಿಯು ಉಪನ್ಯಾಸಕರಿಗೆ ಕೇವಲ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಮಾತ್ರ ಬೋಧಿಸುವ ಜವಾಬ್ದಾರಿ ಇತ್ತು. ಆದರೆ ಈಗಿನ ತಿದ್ದುಪಡಿಯಿಂದಾಗಿ ಹೈಸ್ಕೂಲ್ ಹಂತಕ್ಕೂ ಅವರ ಸೇವೆ ವಿಸ್ತರಣೆಯಾಗಲಿದೆ. ಈ ನಿಯಮಕ್ಕೆ ಪದವಿಪೂರ್ವ ಉಪನ್ಯಾಸಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ನಿಯಮವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದೆ. ಇದನ್ನೂ ಓದಿ: ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೆ ಬೀಳುತ್ತೆ ಭಾರೀ ದಂಡ – ಜು.1 ರಿಂದ ಹೊಸ ನಿಯಮ
