ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಮೇಲೆ ಪೊಲೀಸರ ದಾಳಿ- ನಟಿಯ ರಕ್ಷಣೆ

1 Min Read

ಹೈದರಾಬಾದ್: ಹೈ ಪ್ರೊಫೈಲ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ, ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಮುಂಬೈ ಮೂಲದ 24 ವರ್ಷದ ಡಬ್ಬಿಂಗ್ ನಟಿಯೊಬ್ಬರನ್ನು ರಕ್ಷಿಸಿದ್ದಾರೆ.

ನಗರದ ಬಂಜಾರ್ ಹಿಲ್ಸ್ ನಲ್ಲಿರುವ ಹೋಟೆಲ್ ಮೇಲೆ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿದ್ದರು. ಜನಾರ್ದನ್ ರಾವ್ ಎಂಬ ವ್ಯಕ್ತಿ ವೇಶ್ಯಾಗೃಹ ಸಂಘಟಕ ಹಾಗೂ ಬಂಧಿತ ಆರೋಪಿ. ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ನಟಿಯೊಬ್ಬರನ್ನು ರಕ್ಷಿಸಲಾಗಿದೆ. ಹಾಗೆಯೇ ಈ ಪ್ರಕರಣ ಸಂಬಂಧಿತ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಣೆ ಮಾಡಿರುವ ನಟಿ ಮೂಲತಃ ಆಗ್ರಾ ನಿವಾಸಿಯಾಗಿದ್ದು, ಮುಂಬೈನಲ್ಲಿ ಡಬ್ಬಿಂಗ್ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಜನಾರ್ದನ್ ರಾವ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಈ ಹಿಂದೆಯೂ ಕೂಡ ನಟಿಯನ್ನು ತನ್ನ ಬಣ್ಣದ ಮಾತಿನಿಂದ ಮರುಳುಮಾಡಿ ಹೈದರಾಬಾದ್ ಸುತ್ತಮುತ್ತ ಮಾಂಸ ದಂಧೆಯಲ್ಲಿ ತೊಡಗಿಸಿದ್ದನು. ಅಲ್ಲದೇ ಆರೋಪಿ ರಾವ್ ಹಾಗೂ ಪರಾರಿಯಾಗಿರುವ ಉಳಿದ ಆರೋಪಿಗಳು ಮುಂಬೈ ಹಾಗೂ ಇತರೇ ರಾಜ್ಯದ ಯುವತಿಯರನ್ನು ವಾರದ ಒಪ್ಪಂದ ಮೇಲೆ 1 ಲಕ್ಷ ರೂ.ಗಳನ್ನು ನೀಡಿ, ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದರು ಹಾಗೂ ವೇಶ್ಯಾಗೃಹಕ್ಕೆ ಬರುವ ಗ್ರಾಹಕರಿಂದ ತಲಾ 20,000 ಪಡೆಯುತ್ತಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *