ಕಲಬುರಗಿ: ಆರ್‌ಎಸ್‌ಎಸ್ ಎಂಬ ಆಧುನಿಕ ಭಸ್ಮಾಸುರ ಮುಗ್ಧ ಯುವಸಮುದಾಯದ ಮಿದುಳಿಗೆ ಕೈ ಇಟ್ಟು ಇಡೀ ದೇಶವನ್ನೇ ಸುಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್ಎಸ್ ಹಾಗೂ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಕ್ಸ್ ಖಾತೆಯಲ್ಲಿ ಪ್ರಿಯಾಂಕ್ ಖರ್ಗೆ ಪೋಸ್ಟ್ ಹಂಚಿಕೊಂಡು ಕಿಡಿಕಾರಿದ್ದಾರೆ.
ಪೋಸ್ಟ್‌ನಲ್ಲೇನಿದೆ?
ಪುರಾಣದ ಭಸ್ಮಾಸುರ ತಲೆ ಮೇಲೆ ಕೈ ಇಟ್ಟು ಸಿಕ್ಕವರನ್ನು ಸುಡುತ್ತಿದ್ದನಂತೆ, RSS ಎಂಬ ಆಧುನಿಕ ಭಸ್ಮಾಸುರ ಮುಗ್ಧ ಯುವಸಮುದಾಯದ ಮಿದುಳಿಗೆ ಕೈ ಇಟ್ಟು ಇಡೀ ದೇಶವನ್ನೇ ಸುಡುತ್ತಿದೆ. RSS ಕಾಲಾನುಕಾಲದಿಂದಲೂ ಸಮಾಜಕ್ಕೆ ವಿಷವನ್ನೇ ಉಣಿಸುತ್ತಾ ಬಂದಿದೆ. ದ್ವೇಷ, ದಳ್ಳುರಿಗಳಲ್ಲೇ ಅವರ ಅಸ್ತಿತ್ವವಿರುವುದು. ಸುಳ್ಳುಗಳಲ್ಲೇ ಅವರು ಯಶಸ್ಸು ಕಾಣುವುದು.
ಪುರಾಣದ ಬಸ್ಮಾಸುರ ತಲೆ ಮೇಲೆ ಕೈ ಇಟ್ಟು ಸಿಕ್ಕವರನ್ನು ಸುಡುತ್ತಿದ್ದನಂತೆ, RSS ಎಂಬ ಆಧುನಿಕ ಬಸ್ಮಾಸುರ ಮುಗ್ದ ಯುವಸಮುದಾಯದ ಮೆದುಳಿಗೆ ಕೈ ಇಟ್ಟು ಇಡೀ ದೇಶವನ್ನೇ ಸುಡುತ್ತಿದೆ.
RSS ಕಾಲಾನುಕಾಲದಿಂದಲೂ ಸಮಾಜಕ್ಕೆ ವಿಷವನ್ನೇ ಉಣಿಸುತ್ತಾ ಬಂದಿದೆ, ದ್ವೇಷ, ದಳ್ಳುರಿಗಳಲ್ಲೇ ಅವರ ಅಸ್ತಿತ್ವವಿರುವುದು, ಸುಳ್ಳುಗಳಲ್ಲೇ ಅವರು ಯಶಸ್ಸು ಕಾಣುವುದು.… pic.twitter.com/pSK0ttuQcl— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 2, 2026
‘ಇನ್ಮುಂದೆ ದ್ವೇಷ ಭಾಷಣ ಮಾಡುವುದಿಲ್ಲ’ ಎಂದು ನ್ಯಾಯಾಲಯಕ್ಕೆ ಹೇಳುವ ಮೂಲಕ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ತಾವು ಇಷ್ಟು ದಿನಗಳ ಕಾಲ ದ್ವೇಷವನ್ನೇ ಉಸಿರಾಡಿದ್ದು, ಎಂಬುದನ್ನು ಒಪ್ಪಿಕೊಂಡಂತಾಗಿದೆ.
ವಿಚಾರಣೆ ಎದುರಿಸುವುದಕ್ಕೆ, ನ್ಯಾಯಾಲಯದ ಮುಂದೆ ಹಾಜರಾಗುವುದಕ್ಕೆ ಕಲ್ಲಡ್ಕ ಭಟ್‌ಗೆ ವಯಸ್ಸು ಅಡ್ಡಿಯಾಗುತ್ತದೆ. ಅದೇ ವೇದಿಕೆ ಮತ್ತು ಮೈಕ್ ಕೊಟ್ಟರೆ ವಯಸ್ಸಿನ ಹಿರಿತನ ಮರೆತು ಮೈಕ್ ಹಿಡಿದು ಎದ್ದೆದ್ದು ಹಾರುತ್ತಾರೆ! RSS ಈ ದೇಶದ ಶಾಂತಿ ಸಾಮರಸ್ಯಕ್ಕೆ ಬೆಂಕಿ ಹಾಕುತ್ತಿದೆ ಎನ್ನುವುದಕ್ಕೆ ಕಲ್ಲಡ್ಕ ಭಟ್ಟರೇ ಉತ್ತಮ ಉದಾಹರಣೆ.
ಬಂಧನ ತಪ್ಪಿಸಿಕೊಳ್ಳುವ ಕಾರಣಕ್ಕೆ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಳ್ಳುವುದಷ್ಟೇ ಅಲ್ಲ. ಅದು ನಿಜವಾಗಿಯೂ ಪ್ರಾಯಶ್ಚಿತ್ತದ ಮಾತುಗಳಾಗಬೇಕು. ಬಹಿರಂಗವಾಗಿ ಈ ನಾಡಿನ ಕ್ಷಮೆ ಕೇಳಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
