– ಸಮುದಾಯ ಭವನ, ಕಚೇರಿಯಲ್ಲಿ ಎಸ್‌ಐಆರ್ ಮಾಡಿ ಅಂತ ನಾವು ಒತ್ತಾಯಿಸಿಲ್ಲ
– ವಿಪಕ್ಷಗಳ ಆರೋಪಕ್ಕೆ ಖರ್ಗೆ ಕಿಡಿ
ಬೆಂಗಳೂರು: ಚುನಾವಣಾ ಆಯೋಗ (Election Commission) ಕತ್ತೆ ಕಾಯ್ತಾ ಇದೆಯಾ? ಅವರದ್ದೇ ತಾನೆ ಜವಾಬ್ದಾರಿ ಎಂದು ಎಸ್‌ಐಆರ್ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಎಸ್‌ಐಆರ್ ಲೋಪ ಎಂಬ ವಿಪಕ್ಷಗಳ ಆರೋಪದ ಕುರಿತು ಮಾತನಾಡಿ, ಏನೇ ಮಾಡಿದ್ರು ಕಾನೂನು ಮೀರಿ ಯಾರೂ ಏನು ಮಾಡೋಕೆ ಆಗೊಲ್ಲ. ಎಲೆಕ್ಷನ್ ಕಮಿಷನ್ ದು ವೀಕ್ಷಕರು ಇರ್ತಾರೆ. ಅಂತಹ ಲೋಪ ಆಗಿದ್ದರೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬಹುದು. ರಾಜ್ಯ ಸರ್ಕಾರದವರು ಯಾರಿಗೂ ಒತ್ತಾಯ ಮಾಡಿ SIR ಮಾಡಿಸುತ್ತಿಲ್ಲ. ಸಮುದಾಯ ಭವನ, ಕಚೇರಿಯಲ್ಲಿ ಮಾಡಿ ಅಂತ ನಾವು ಒತ್ತಾಯ ಮಾಡಿಲ್ಲ. ಜನರಲ್ಲಿ ಆತಂಕ ಇರೋದು ನಿಜ. ಅದಕ್ಕೆ ನಾವು 12 ಪ್ರಶ್ನೆ ಕೇಳಿದ್ದೇವೆ, ಉತ್ತರ ಕೊಟ್ಟಿಲ್ಲ ಚುನಾವಣೆ ಆಯೋಗ. ಇದಕ್ಕೆ ಹೊಣೆ ಯಾರು? ಈ ಪ್ರಕ್ರಿಯೆ ಬಗ್ಗೆ ಜನರಿಗೆ ಆತಂಕ, ಸಂಶಯ ಇದೆ. ಅನುಮಾನ ಇದೆ ಅಂದರೆ ಜವಾಬ್ದಾರಿ ರಾಜ್ಯ ಸರ್ಕಾರ ಅಲ್ಲ ಚುನಾವಣೆ ಅಯೋಗ. ರೂಲ್ಸ್ ಮಾಡೋದು ನಾವಲ್ಲ. ಚುನಾವಣೆ ಆಯೋಗ ಇದಕ್ಕೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಿಎಲ್‌ಒಗಳೇ ಒಂದು ಅರ್ಜಿಗೆ 50 ರೂಪಾಯಿ ಕೊಟ್ಟು ಕೆಲ ಕಾರ್ಯಕರ್ತರಿಂದ ಭರ್ತಿ ಮಾಡಿಸ್ತಿದ್ದಾರೆ: ಸಾ.ರಾ.ಮಹೇಶ್ ಆರೋಪ
BLOಗಳು ನಮ್ಮ ಅಧೀನದಲ್ಲಿ ಬಂದರೂ, ಅವರಿಗೆ ನಿರ್ದೇಶನ ಕೊಡೋದು ಚುನಾವಣೆ ಆಯೋಗ. SIR ಸರಿಯಾಗಿ ಆಗ್ತಿಲ್ಲ ಅಂದರೆ ಚುನಾವಣೆ ಆಯೋಗ ಕ್ರಮ ತಗೊಬೇಕು. ಒಐಂಗಳ ಫೋಟೊ ಹಾಕಿರೋ ವಿಚಾರ ಎಲ್ಲಾ ಪಕ್ಷದ ಒಐಂಗಳು ಇದಕ್ಕೆ ಶ್ರಮಿಸುತ್ತಿದ್ದಾರೆ. ಮತದಾರರಿಗೋಸ್ಕರ ಮಾಡ್ತಾ ಇದ್ದಾರೆ. ಕೆಲವು ಮಾನದಂಡ ಇದೆ. ಫೋಟೊ ಹಾಕಬಾರದು ಅಂತ. ಜಯನಗರದಲ್ಲಿ ಏನ್ ಆಯ್ತು? ನಮ್ಮ ಶಾಸಕರು ಇರೋದಾ? BLO ಯಾರು ಇರೋದು? SIR ಎಲ್ಲಾ ರಾಜಕೀಯ ಪಕ್ಷಗಳು ಮಾಡಬೇಕು. ಚುನಾವಣೆ ಗೆಲ್ಲಬೇಕಾದ್ರೆ ನಿಮ್ಮ ಮತದಾರರದ್ದು ಹಾಕಿಸ್ತೀರಾ? ಇದಕ್ಕೆ SIR ಅನ್ನೋದು. ಒಂದು ಸಮುದಾಯದ್ದು ಅಂತ ಇಲ್ಲ. ಬೇರೆ ಸಮುದಾಯದ್ದು ಮಾಡ್ತಾ ಇದ್ದಾರೆ. ಈಗ ಆತಂಕ ಇರೋದು ದಲಿತರು, ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರಿಗೆ. ಬಿಹಾರ, ಬಂಗಾಳದಲ್ಲಿ ರಾಜ್ಯ ಸರ್ಕಾರ ಏನ್ ಹೇಳಿದೆ? SIR ಪಟ್ಟಿ ಇದ್ದರೆ ಮಾತ್ರ ರಾಜ್ಯ, ಕೇಂದ್ರದ ಯೋಜನೆ ಸಿಗುತ್ತದೆ ಅಂತ ಹೇಳಿದ್ದಾರೆ. ಇದನ್ನ ನಿವಾರಣೆ ಮಾಡಬೇಕಿರೋದು ಚುನಾವಣೆ ಆಯೋಗ. ನಾವು ಟೈಂ ಕೇಳಿದ್ರೂ ಆಯೋಗ ಟೈಂ ಕೊಡ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಕೇಂದ್ರ ಚುನಾವಣೆ ಆಯೋಗದಿಂದ SIR ಮಾನಿಟರ್ ಆಗಬೇಕು ಎಂಬ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಮಾತನಾಡಿ, ನಿಮ್ಮ ಕೈಯಲ್ಲಿಯೇ ಇದೆ ಕೇಂದ್ರ ಸರ್ಕಾರ ಮಾಡಿ. ಶೋಭಾ ಕರಂದ್ಲಾಜೆ ಬಿಜೆಪಿ ಅವರ ಸರ್ಕಾರ ಕೇಂದ್ರದಲ್ಲಿ ಇದೆ. ಮಾಡಿಸಿ ಯಾರು ಬೇಡ ಅಂದವರು. ನಾವು ಎಸ್‌ಐಆರ್ ವಿರೋಧಿಗಳಲ್ಲ. ಪಾರದರ್ಶಕವಾಗಿ ನಡೆಯಬೇಕು ಅನ್ನೋದು ನಮ್ಮ ಒತ್ತಾಯ. ಚುನಾವಣೆ ಆಯೋಗ ಆತಂಕ ಸೃಷ್ಟಿ ಮಾಡಿಸ್ತಿದೆ. ರಾಜ್ಯ ಸರ್ಕಾರ ಅಲ್ಲ. ಚುನಾವಣೆ ಆಯೋಗ ಕತ್ತೆ ಕಾಯ್ತಾ ಇದೆಯಾ? ಅವರದ್ದು ತಾನೆ ಜವಾಬ್ದಾರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: SIR ಹಿನ್ನೆಲೆ ಜು.4 ರಂದು ನಡೆಯಬೇಕಿದ್ದ ʻನನ್ನ ಇ-ಖಾತಾ, ನನ್ನ ಹಕ್ಕುʼ ಅಭಿಯಾನ ರದ್ದು: ಮಹೇಶ್ವರ್ ರಾವ್
ಮಂಡ್ಯ ಫೈರಿಂಗ್ ಕೇಸ್ ಬಗ್ಗೆ ಪ್ರತಿಕ್ರಿಯಿಸಿ, ‘ಪಬ್ಲಿಕ್ ಟಿವಿ’ಯಲ್ಲಿ ವರದಿ ನೋಡಿದ್ದೇನೆ. ಯಾವುದೇ ಅಧಿಕಾರಿಗಳು ಕಾನೂನಿಗಿಂತ ಮೇಲೆ ಇಲ್ಲ. ಯಾರು ಯಾರ ರಕ್ಷಣೆ ಮಾಡೋದಿಲ್ಲ. ನಾನಾಗಲಿ, ನನ್ನ ಅಧಿಕಾರಿಗಳು ಆಗಿರಲಿ, ಯಾರು ಕಾನೂನಿಗಿಂತ ಮೇಲಿಲ್ಲ. ಡಿಜಿ ಅವರಿಗೆ ಆ ಬಗ್ಗೆ ಪರಿಶೀಲನೆಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
