ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಜುಲೈ 4 (ಶನಿವಾರ) ರಂದು ನಡೆಯಬೇಕಿದ್ದ ʻನನ್ನ ಇ-ಖಾತಾ, ನನ್ನ ಹಕ್ಕುʼ ಅಭಿಯಾನವನ್ನ ರದ್ದುಪಡಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ (Maheshwar Rao) ತಿಳಿಸಿದ್ದಾರೆ.
ಪ್ರಕಟಣೆಯಲ್ಲಿ ಏನಿದೆ?
ಈ ಸಂಬಂಧ ಪ್ರಕಟಣೆ ಹೊರಡಿರಿಸುವ ಅವರು, ಎಸ್‌ಐಆರ್ ಕಾರ್ಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಂದಾಯ ಅಧಿಕಾರಿಗಳು ಮತದಾರ ನೋಂದಣಾಧಿಕಾರಿಗಳಾಗಿ (ERO), ಸಹಾಯಕ ಕಂದಾಯ ಅಧಿಕಾರಿಗಳು (ARO) ಸಹಾಯಕ ಮತದಾರ ನೋಂದಣಾಧಿಕಾರಿಗಳಾಗಿ ಹಾಗೂ ಕಂದಾಯ ಮೌಲ್ಯ ಮಾಪಕರು (Assesors ), ಕಂದಾಯ ಪರಿವೀಕ್ಷಕರು (RI) ಮತ್ತು ಕಂದಾಯ ವಸೂಲಿಗಾರರು (TI) ಬಿಎಲ್‌ಒಗಳ (BLO) ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಒಂದೇ ವಾರದಲ್ಲಿ ದೋಸೆಯಂತೆ ಕಿತ್ತು ಬಂದಿದೆ ರಸ್ತೆಗೆ ಹಾಕಿದ ಡಾಂಬರು

ಆದ್ದರಿಂದ, ಖಾತಾ ಅಭಿಯಾನ ನಡೆಸುವುದು ಅಸಾಧ್ಯವಾಗಿದ್ದು, ಇ-ಖಾತಾ ಅರ್ಜಿಗಳ ನೋಂದಣಿ, ತಿದ್ದುಪಡಿ, ಅರ್ಜಿಗಳ ಸ್ಥಿತಿಗತಿ ಪರಿಶೀಲನೆ ಹಾಗೂ ಇತರೆ ಇ-ಖಾತಾ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಶನಿವಾರ ಆಯೋಜಿಸಲಾಗುತ್ತಿರುವ ʻನನ್ನ ಇ-ಖಾತಾ, ನನ್ನ ಹಕ್ಕುʼ ಅಭಿಯಾನ ಜುಲೈ 4ರಂದು ನಡೆಯುವುದಿಲ್ಲ. ಇದನ್ನೂ ಓದಿ: ಗೃಹ ಜ್ಯೋತಿ ಪರಿಶೀಲನೆ ವೇಳೆ ಜಾತಿ ಮಾಹಿತಿ ಕಡ್ಡಾಯವಲ್ಲ: ಬೆಸ್ಕಾಂ
ಅಭಿಯಾನವನ್ನು ಪುನರಾರಂಭಿಸುವ ದಿನಾಂಕವನ್ನ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ನಾಗರಿಕರಿಗೆ ತ್ವರಿತ, ಪಾರದರ್ಶಕ ಹಾಗೂ ಗುಣಮಟ್ಟದ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬದ್ಧವಾಗಿದ್ದು, ಇ-ಖಾತಾ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಅಗತ್ಯ ಕ್ರಮಗಳನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.
