ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಗ್ಗೆ ಕುರುಬ ಸಮುದಾಯದ ಮುಖಂಡರು ಕೆಟ್ಟಪದಗಳಲ್ಲಿ ಅವಹೇಳನ ಮಾಡಿ ಈಗ ಸುದ್ದಿಯಾಗಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಕುರುಬರಿಗೆ ರಾಜಕೀಯ ಅಧಿಕಾರ ನೀಡಲು ಆಗ್ರಹಿಸಿ ಕುರುಬ ಸಮಾಜದ ಮುಖಂಡರು ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ (Press Meet) ನಡೆದಿತ್ತು. ಈ ವೇಳೆ ಸುದ್ದಿಗೋಷ್ಠಿ ಮಾಡಲು ಬಂದಿದ್ದ ಕುರುಬ ಸಮುದಾಯದ ಮುಖಂಡರಾದ ಮುಕುಡಪ್ಪ, ಪುಟ್ಟಸ್ವಾಮಿ ಅವರು ಗೋಷ್ಠಿಗೂ ಮುನ್ನ ಮಾತನಾಡುತ್ತ ಕುಳಿತಿದ್ದರು. ಆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಟ್ಟ ಶಬ್ದವನ್ನು ಬಳಸಿ ಅವಮಾನ ಮಾಡಿದ್ದಾರೆ.


ವೀಡಿಯೋದಲ್ಲಿ ಏನಿದೆ?:
ಮುಕುಡಪ್ಪ ಹಾಗೂ ಪುಟ್ಟಸ್ವಾಮಿ ಇಬ್ಬರು 20 ಕುರಿಗಳ ಮೇಲೆ ಒಂದು ಟಗರು ಎಗರಿ ಬೀಳುತ್ತೆ ಎಂದು ಮಾತನಾಡುತ್ತಿದ್ದರು. ಆ ವೇಳೆ ಮುಕುಡಪ್ಪ, ಯಾರು ಅಂತಾ ಅಲ್ಲ ಎಲ್ಲರೂ ಹೇಳುತ್ತಾರೆ. ಆಗ ಮುಕುಡಪ್ಪ, ಎಲ್ಲರದ್ದೂ ಅಷ್ಟೇ, ಕೆಲವರದ್ದು ಹೊರಗೆ ಬರುತ್ತೆ, ಕೆಲವರದ್ದು ಹೊರಗೆ ಬರಲ್ಲ ಅಷ್ಟೇ ಎಂದು ಹೇಳುತ್ತಾರೆ.

ಆಗ ಸಿದ್ದರಾಮಯ್ಯ ಅವರನ್ನು ಹೆಸರನ್ನು ಪ್ರಸ್ತಾಪಿಸಿ ಅವಹೇಳನ ಮಾಡುತ್ತಾರೆ. ಸಿದ್ದರಾಮಯ್ಯನ ಬಗ್ಗೆ ಮಾತನಾಡುವಾಗ ಹುಷಾರು.. ಸೂ.. ಮಗಾ ಎಂದು ಹೇಳಿ ಮುಕ್ಕಡಪ್ಪ ನಗುತ್ತಾನೆ. ಅದಕ್ಕೆ ಪುಟ್ಟಸ್ವಾಮಿ ಪ್ರತಿಕ್ರಿಯಿಸಿ, ಹೌದು, ಅವನು ಬುದ್ಧಿವಂತ.. ಮನೆ ಒಳಗೆ ಸೇರಿಕೊಂಡುಬಿಡ್ತಾನೆ ಎಂದು ಹೇಳುತ್ತಾರೆ. ಇದನ್ನೂ ಓದಿ: ಶೋಕಿಗೆ ಕಾರು, ಕದಿಯೋದು ಮಾತ್ರ ಬಲ್ಬ್ – ಕಿರಾತಕರ ಕೈಚಳ ಕ್ಯಾಮೆರಾದಲ್ಲಿ ಸೆರೆ
ಅಹಿಂದ ಮುಖಂಡ ಮುಕ್ಕಡಪ್ಪ ಹಾಗೂ ಪುಟ್ಟಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವ ಈ ವೀಡಿಯೋಕ್ಕೆ (Video) ಸಿದ್ದರಾಮಯ್ಯನ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ಕೇಳಿಬರುತ್ತಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್ – ಸಂಜಯ್ ರಾವತ್‌ಗೆ ಜಾಮೀನು

