ಧಾರವಾಡ: ದೇಶದ ಮೊದಲ ಮಹಿಳಾ ರಾಷ್ಟ್ರಪತಿ (President) ಯಾರು ಎಂದು ಎಲ್ಲರಿಗೆ ಗೊತ್ತಿರುವ ವಿಚಾರ. ಆದರೆ ಧಾರವಾಡದ ಶಾಸಕರೊಬ್ಬರು ದೇಶದ ಮೊದಲ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಸ್ವಾಗತ ಎಂದು ಬ್ಯಾನರ್ನಲ್ಲಿ ಹಾಕಿಕೊಂಡು ಎಡವಟ್ಟು ಮಾಡಿದ್ದಾರೆ.
ನಾಳೆ ಧಾರವಾಡಕ್ಕೆ (Dharwada) ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತಿದ್ದಾರೆ. ಇಡಗಟ್ಟಿ ಹಾಗೂ ತಡಸಿನಕೊಪ್ಪ ಗ್ರಾಮದ ಹತ್ತಿರ ನಿರ್ಮಾಣಗೊಂಡಿರುವ ಐಐಟಿ (IIT) ಉದ್ಘಾಟನಾ ಕಾರ್ಯಕ್ರಮಕ್ಕೆ ದ್ರೌಪದಿ ಮುರ್ಮು ಬರುತ್ತಿದ್ದಾರೆ. ಈ ಹಿನ್ನೆಲೆ ಧಾರವಾಡ ಶಾಸಕ ಅರವಿಂದ ಬೆಲ್ಲದ್ (Arvind Bellad) ರಾಷ್ಟ್ರಪತಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿದ್ದು, ಅದರಲ್ಲಿ ಎಡವಟ್ಟು ಮಾಡಿದ್ದಾರೆ. ದೇಶದ ಮೊಲದ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ವಾಗತ ಎಂದು ಬರೆಸಿದ್ದಾರೆ. ಇದನ್ನೂ ಓದಿ: ಆ ಭಾಗ್ಯ ಈ ಭಾಗ್ಯ ಅಂತಾ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟರು: ಸಿದ್ದುಗೆ ಬೊಮ್ಮಾಯಿ ಟಾಂಗ್
ಮುರ್ಮು ಅವರು ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಅಲ್ಲ. ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ (Pratibha Patil). ಇದೀಗ ಬ್ಯಾನರ್ನಲ್ಲಿ ತಪ್ಪಾಗಿ ಹಾಕಿರುವುದರಿಂದಾಗಿ ಶಾಸಕರಿಗೆ ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಯಾರೆಂದು ಗೊತ್ತಿಲ್ಲ ಎಂದು ಜನರೇ ವ್ಯಂಗ್ಯವಾಡುತ್ತಿದ್ದಾರೆ. ಇದನ್ನೂ ಓದಿ: ಅವರೆಲ್ಲಾ ಸಿಎಂ ಆಗಿದ್ದಾಗ ಬೀಗರ ಊಟ, ಮದುವೆಗೆ ಬರ್ತಿದ್ರು, ಬೊಮ್ಮಾಯಿ ಅಭಿವೃದ್ಧಿ ಕೆಲಸಕ್ಕೆ ಬರ್ತಿದ್ದಾರೆ: ಪ್ರತಾಪ್ ಸಿಂಹ