CinemaKarnatakaLatestLeading NewsMain PostSandalwood

‘ಸಲಾರ್’ ಸಿನಿಮಾದಲ್ಲಿ ಪ್ರಮೋದ್: ಶ್ರುತಿ ನಾಯ್ಡು ಹೇಳಿದ್ದ ಭವಿಷ್ಯ ನಿಜವಾಯ್ತು

ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಕಾಯುತ್ತಿದ್ದಾರೆ. ಕೆಲವರಂತೂ ಅದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆದರೆ, ಬಯಸದೇ ಬಂದ ಭಾಗ್ಯ ಅನ್ನುವಂತೆ ಪ್ರಮೋದ್ ‘ಸಲಾರ್’ ಸಿನಿಮಾದಲ್ಲಿ ನಟಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಂಥದ್ದೊಂದು ಅವಕಾಶವನ್ನು ಕಲ್ಪಿಸಿದ್ದಕ್ಕಾಗಿ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದಗಳನ್ನೂ ಹೇಳಿದ್ದಾರೆ ಪ್ರಮೋದ್.

ತಮಗೆ ಸಲಾರ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಹೇಗೆ ಎನ್ನುವ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಪ್ರಮೋದ್, ರತ್ನನ್ ಪ್ರಪಂಚ ಸಿನಿಮಾದ ಪಾತ್ರವೇ ಅವರಿಗೆ ಸಲಾರ್ ದಲ್ಲಿ ನಟಿಸುವಂತಹ ಅವಕಾಶ ಮಾಡಿದ್ದು ಎನ್ನುತ್ತಾರೆ. ‘ರತ್ನನ್ ಪ್ರಪಂಚ ಸಿನಿಮಾವನ್ನು ನೋಡಿದ್ದ ಪ್ರಶಾಂತ್ ನೀಲ್, ಆ ಪಾತ್ರವನ್ನು ನೋಡಿ ನನ್ನೊಳಗಿನ ಶಕ್ತಿಯನ್ನು ಗುರುತಿಸಿದ್ದರು. ನಿನ್ನಿಂದ ಒಂದು ಪಾತ್ರ ಮಾಡಿಸುವೆ ಅಂದಿದ್ದರು. ಆದಾದ ನಂತರ ಆರೇಳು ತಿಂಗಳಾದರೂ, ಸಲಾರ್ ಸಿನಿಮಾದ ಶೂಟಿಂಗ್ ಶುರುವಾಗಿದ್ದರೂ ನನ್ನನ್ನು ಕರೆಯಲೇ ಇಲ್ಲ’ ಎಂದು ನಿರಾಸೆ ವ್ಯಕ್ತ ಪಡಿಸಿದರು.

YouTube video

ಆರೇಳು ತಿಂಗಳು ನಂತರ ಪ್ರಶಾಂತ್ ನೀಲ್ ಅವರು ಕರೆ ಮಾಡಿದರು ಎಂದು ಉತ್ಸಾಹದಿಂದಲೇ ಮಾತನ್ನು ಮುಂದುವರೆಸಿದ ಪ್ರಮೋದ್, ‘ನಿನಗೊಂದು ಪಾತ್ರ ಸಿದ್ದವಿದೆ. ಹೈದರಾಬಾದ್ ಗೆ ಬನ್ನಿ, ಲುಕ್ ಟೆಸ್ಟ್ ಮಾಡಿಸೋಣ ಅಂತ ಪ್ರಶಾಂತ್ ಅವರು ಫೋನ್ ಮಾಡಿದರು. ನಿಜಕ್ಕೂ ನನಗೆ ಖುಷಿ ಆಯಿತು. ನನಗಾಗಿ ಇನ್ನೂ ಪಾತ್ರ ಕಾದಿದೆ ಎಂದು ಹೊರಟೆ. ಲುಕ್ ಟೆಸ್ಟ್ ಮಾಡಿದರೂ, ತುಂಬಾ ಮೆಚ್ಚುಗೆ ಸೂಚಿಸಿದರು. ಈ ರೀತಿಯ ಪಾತ್ರ ಕೊಡುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ. ನನ್ನ ವೃತ್ತಿ ಜೀವನದ ಬೆಸ್ಟ್ ಪಾತ್ರ ಮತ್ತು ಸಿನಿಮಾ ಇದಾಗಲಿದೆ’ ಎನ್ನುತ್ತಾರೆ ಪ್ರಶಾಂತ್.

ಶ್ರುತಿ ನಾಯ್ಡು ನಿರ್ದೇಶನದ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾ ಮಾಡಿದಾಗ, ಪ್ರಮೋದ್ ಅವರ ಪಾತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆವಾಗಲೇ ಪ್ರಮೋದ್ ಬಗ್ಗೆ ಶ್ರುತಿ ನಾಯ್ಡು ಮಾತನಾಡುತ್ತಾ, ‘ಪ್ರಮೋದ್ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಿನಿಮಾದಲ್ಲಿ ಪಾತ್ರ ಮಾಡುತ್ತಾರೆ. ಒಳ್ಳೆಯ ಭವಿಷ್ಯವಿದೆ’ ಎಂದು ನುಡಿದಿದ್ದರು. ಇದೀಗ ಪ್ರಮೋದ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದೊಡ್ಡ ಪಾತ್ರವನ್ನೇ ಮಾಡಿದ್ದಾರೆ. ಪ್ರಭಾಸ್, ಪೃಥ್ವಿ ಸುಕುಮಾರ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ದಿಗ್ಗಜರೇ ನಟಿಸಿರುವ ಸಲಾರ್ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button