ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಸ ನಿರ್ವಹಣೆ ಮಾಡೋ ಬೆಂಗಳೂರು (Bengaluru) ಘನತ್ಯಾಜ್ಯ ನಿರ್ವಹಣಾ ನಿಯಮಿತ ಇಲಾಖೆ ಸದ್ದಿಲ್ಲದೇ ಕೋಳಿ ಮಾಂಸ ಮಾರಾಟಗಾರರಿಗೆ ಹೊರೆಯೊಂದನ್ನ ಹಾಕಿದೆ. ಕಳೆದ 15 ದಿನಗಳಿಂದ ಹೊಸ ನೋಟಿಸ್‌ವೊಂದನ್ನು ಬಿಎಸ್‌ಡಬ್ಯೂಎಂಎಲ್ ನೀಡಿದ್ದು, ಪ್ರತಿ ಕೆಜಿ ಕೋಳಿ ಮಾಂಸದ ತ್ಯಾಜ್ಯಕ್ಕೆ 5 ರೂ. ನೀಡಬೇಕು ಎಂದು ಆದೇಶಿಸಿದೆ. ಈ ಆದೇಶವನ್ನ ವಿರೋಧಿಸಿ ಬೆಂಗಳೂರಿನ ಕೋಳಿ ಅಂಗಡಿ (Chicken Shops) ವ್ಯಾಪಾರಿಗಳು ಇದೇ ಗುರುವಾರ ಮತ್ತು ಶುಕ್ರವಾರ (ಸೆ.3-4) ತಮ್ಮ ಅಂಗಡಿಗಳಿಗೆ ಬೀಗ ಹಾಕಿ ಹೋರಾಟ ಮಾಡೋದಕ್ಕೆ ಮುಂದಾಗಿದ್ದಾರೆ.
ಸರ್ಕಾರ ಹೀಗೆ ಕೋಳಿ ತ್ಯಾಜ್ಯ ಸಂಗ್ರಹಣೆಗೆ ಪ್ರತಿ ಕಿಲೋಗೆ 5 ರೂ. ನಿಗದಿ ಮಾಡಿರೋದು ಸರಿಯಲ್ಲ, ಈ ಹಿಂದೆ ತ್ಯಾಜ್ಯವನ್ನ ಖಾಸಗಿಯವರು ಹಣ ಕೊಟ್ಟು ಖರೀದಿಸಿ ಅದನ್ನ ಕೈಗಾರಿಕೆಗಳಿಗೆ ರವಾನೆ ಮಾಡುತ್ತಿದ್ದರು. ಈಗಲೂ ಅದೇ ರೀತಿ ಕೈಗಾರಿಕೆಗಳಿಗೆ ತ್ಯಾಜ್ಯ ಸರಬರಾಜು ಆಗುತ್ತಿದೆ. ಅದರಿಂದ ಪ್ರಾಣಿಗಳಿಗೆ ಆಹಾರವನ್ನ ಮಾಡ್ತಿದ್ದಾರೆ. ಅದರೆ ಸರ್ಕಾರ ಈಗ ನಮ್ಮಿಂದ ಹಣ ಸಂಗ್ರಹಿಸೋ ಉದ್ದೇಶವಾದ್ರೂ ಏನು? ಇದೊಂದು ದೊಡ್ಡ ಮಾಫಿಯಾ ಆಗ್ತಿದೆ. ಮದ್ಯವರ್ತಿಗಳು ಇದರಲ್ಲಿದ್ದಾರೆ. ಈ ಬಗ್ಗೆ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮಾಡೋದಾಗಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ (Poultry Traders Association) ಹೇಳಿದೆ. ಇದನ್ನೂ ಓದಿ: ಕೋಳಿ ಮಾಂಸ ತ್ಯಾಜ್ಯ ವಿಲೇವಾರಿಗೆ ಕೆಜಿಗೆ 5 ರೂ. ನಿಗದಿ – ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ವಿರೋಧ
ಕೋಳಿ ಅಂಗಡಿ ಮಾಲೀಕರು ಕೂಡ ಯಾವುದೇ ಕಾರಣಕ್ಕೂ ಸರ್ಕಾರದ ಈ ಕ್ರಮವನ್ನ ಒಪ್ಪೋದಿಲ್ಲ. ನಾವೆಲ್ಲ ಹಳ್ಳಿಯಿಂದ ಬಂದು ಜೀವನ ಕಟ್ಟಿಕೊಳ್ಳೋದಕ್ಕೆ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದೇವೆ. ಸರ್ಕಾರ ಬಡವರ ಪರವಾಗಿ ಇರಬೇಕು. ಒಂದು ತಿಂಗಳಿಗೆ ನಮಗೆ ಹೆಚ್ಚುವರಿಯಾಗಿ 5 ರಿಂದ 7 ಸಾವಿರ ರೂ. ಹೊರೆಯಾಗಲಿದೆ. ಇದನ್ನ ಸರಿದೂಗಿಸೋದಕ್ಕೆ ಆಗುವುದಿಲ್ಲ. ಯಾವುದೆ ಕಾರಣಕ್ಕೂ ತ್ಯಾಜ್ಯಕ್ಕೆ ಹಣ ಸಂಗ್ರಹಣೆ ಮಾಡಬಾರದು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನ ಕೋಳಿ ಮಾಂಸ ಮಾರಾಟದ ವ್ಯಾಪಾರಿಗಳು ಸುದ್ದಿಗೋಷ್ಠಿ ಮಾಡೋ ಮೂಲಕ ಪ್ರತಿಭಟನೆಯ ಬಗ್ಗೆ ತಿಳಿಸಿದ್ದಾರೆ. ಸರ್ಕಾರ ಅದಕ್ಕೂ ಬಗ್ಗದೇ ಇದ್ರೇ ಕಾನೂನಿನ ಮೊರೆ ಹೋಗೋ ಎಚ್ಚರಿಕೆ ನೀಡಿದ್ದಾರೆ. ಗುರುವಾರ – ಶುಕ್ರವಾರ ಕೋಳಿ ಮಾಂಸ ಮಾರಾಟ ಬೆಂಗಳೂರಿನಲ್ಲಿ ಬಂದ್ ಆಗ್ತಿರೋದು ಮಾಂಸ ಪ್ರಿಯಾರಿಗೆ ಕೊಂಚ ಬೇಸರವನ್ನ ಮೂಡಿಸಿದೆ. ಇದನ್ನೂ ಓದಿ: ಡಿಸಿಪಿ ಮೇಲೆಯೇ ಯೂತ್ ಕಾಂಗ್ರೆಸ್ ಅಧ್ಯಕ್ಷನಿಂದ ಹಲ್ಲೆ- ಎಫ್‌ಐಆರ್ ದಾಖಲಿಸಲು ಪೊಲೀಸರ ಹಿಂದೇಟು
