- ಕೇರಳ ಮಾದರಿಯಲ್ಲಿ ಜಾರಿಗೆ ಆಗ್ರಹ
ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ (Kasturirangan Report) ವಿರೋಧಿಸಿ ಇಂದು ರೈತ ಸಂಘಟನೆಗಳು ಕರೆ ನೀಡಿದ್ದ ಶೃಂಗೇರಿ ಬಂದ್ (Sringeri Bandh) ಯಶಸ್ವಿಯಾಗಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಶೃಂಗೇರಿ ತಾಲೂಕು ಬಂದ್ ಮಾಡಲಾಗಿತ್ತು. ಶೃಂಗೇರಿ ರೈತ ಒಕ್ಕೂಟ, ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳಿಂದ ಬಂದ್‌ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿದ ವ್ಯಾಪಾರಿಗಳು ಬಂದ್‌ಗೆ ಬೆಂಬಲಿಸಿದ್ದಾರೆ. ಶೃಂಗೇರಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುಪಿಎ ರಚಿಸಿದ ಗಾಡ್ಗೀಳ್ ವರದಿಯೇ ಇಂದಿನ ಸಮಸ್ಯೆಗೆ ಮೂಲ: ಅಶೋಕ್ ವಾಗ್ದಾಳಿ
ಕಳೆದೊಂದು ತಿಂಗಳಿಂದ ವರದಿ ಜಾರಿ ವಿರೋಧಿಸಿ ಪ್ರತಿಭಟನೆ (Protest) ನಿರಂತರವಾಗಿ ನಡೆಯುತ್ತಿದೆ. ಭವಿಷ್ಯದ ಬದುಕಿಗಾಗಿ ಸಾವಿರಾರು ರೈತರು, ಹಳ್ಳಿಗರು ಬೀದಿಗಿಳಿದಿದ್ದಾರೆ. ಈ ವರದಿ ಜಾರಿಯಾದ್ರೆ, ಮಲೆನಾಡು ಭಾಗದ 5 ತಾಲೂಕಿನ 137ಕ್ಕೂ ಹೆಚ್ಚು ಹಳ್ಳಿಗಳೇ ಇರಲ್ಲ.
ಕಾಫಿನಾಡಲ್ಲಿ 3666 ಕಿ.ಮೀ ವ್ಯಾಪ್ತಿಯಲ್ಲಿರೋ ಕಸ್ತೂರಿ ರಂಗನ್ ವರದಿ ಜನರಲ್ಲಿ ಭವಿಷ್ಯದ ಚಿಂತೆಯನ್ನು ಹುಟ್ಟುಹಾಕಿದೆ. ಕೇರಳ ಮಾದರಿಯಲ್ಲಿ ಜನವಸತಿ ಪ್ರದೇಶ, ಕೃಷಿ ಭೂಮಿ ಬಿಟ್ಟು ಯೋಜನೆ ಜಾರಿ ಮಾಡಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಏನಿದು ಕಸ್ತೂರಿರಂಗನ್ ವರದಿ? ಮಲೆನಾಡು, ಕರಾವಳಿ ಜನತೆಗೆ ಆತಂಕ ಯಾಕೆ?

