ಕೊಲ್ಕತ್ತಾ: ಪೊಲೀಸರೇ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.
25 ವರ್ಷದ ಮಹಿಳೆ ಅಸನ್ಸೋಲ್ ನಿವಾಸಿಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಾಗಿ ಕೋಲ್ಕತ್ತಾಗೆ ತೆರಳಿದ್ದರು. ಸಾಲ್ಟ್ ಲೇಕ್ ಬಳಿಯ ಕರುಣಾಮೊಯಿ ಬಸ್ ನಿಲ್ದಾಣಕ್ಕೆ ಬರುವಾಗ ತಡರಾತ್ರಿಯಾಗಿತ್ತು. ಜೊತೆಗೆ ಮಹಿಳೆಯ ಮೊಬೈಲ್ನಲ್ಲಿ ಚಾರ್ಜ್ ಇಲ್ಲದ್ದರಿಂದ ಟ್ಯಾಕ್ಸಿ ಸಿಕ್ಕಿರಲಿಲ್ಲ.
ಬೇರೆ ಯಾವುದೇ ಸಾರಿಗೆ ಮಾರ್ಗ ಕಾಣದ ಮಹಿಳೆ ಅಲ್ಲಿದ್ದ ಪೊಲೀಸರ ಹತ್ತಿರ ಡ್ರಾಪ್ ಕೇಳಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಪೊಲೀಸರು ಮಹಿಳೆಯನ್ನು ಬೈಕ್ನಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಸ್ವಲ್ಪ ದೂರ ಹೋದ ನಂತರ ಬೈಕ್ ನಿಲ್ಲಿಸಿ, ಮತ್ತೊಬ್ಬ ಪೊಲೀಸ್ ಇನ್ಸ್ಪೆಕ್ಟರ್ ಬೈಕ್ನಲ್ಲಿ ಕುಳಿತುಕೊಳ್ಳಲು ಹೇಳಿದರು. ಬಳಿಕ ಬೈಕ್ನಲ್ಲಿ ಮಹಿಳೆಯನ್ನು ಮಧ್ಯ ಕೂರಿಸಿಕೊಂಡು ಕಿರುಕುಳವನ್ನು ನೀಡಿದ್ದಾರೆ. ಇದನ್ನೂ ಓದಿ: ತೊಟ್ಟಿಲಲ್ಲಿ ಮಲಗಿದ್ದ ತಂಗಿಗೆ ಬಿಸಿಯಾದ ಫೋರ್ಕ್ನಿಂದ ಬರೆ ಹಾಕಿದ ಅಕ್ಕ
ಇದರಿಂದಾಗಿ ಮಹಿಳೆ ತನ್ನನ್ನು ಬೆಲಿಯಾಘಾಟಾ ಇಎಂ ಬೈಪಾಸ್ನಲ್ಲಿ ಬಿಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಪೊಲೀಸರು ಆಕೆಯನ್ನು ರಸ್ತೆಯಲ್ಲೇ ಬಿಟ್ಟು ಘಟನೆಯನ್ನು ಯಾರಿಗೂ ತಿಳಿಸದಂತೆ ಎಚ್ಚರಿಕೆಯನ್ನು ನೀಡಿದ್ದರು. ಇದನ್ನೂ ಓದಿ: ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಮತ್ತೆ ಅರಳಿದ ಬಿಜೆಪಿ
ಘಟನೆ ಸಂಬಂಧ ಕಸ್ಬಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಅಭಿಷೇಕ್ ಮಾಲಕರ್ ಹಾಗೂ ಸಂದೀಪ್ ಕುಮಾರ್ ಪಾಲ್ ಎಂದು ಗುರುತಿಸಿದ್ದಾರೆ.