ಗುವಾಹಟಿ: ಪಿಜ್ಜಾ ಅಂದ್ರೆ ಯುವ ಜನರಿಗೆಂದು ಭಾರೀ ಇಷ್ಟ. ಈ ಪಿಜ್ಜಾವನ್ನು ಅಸ್ಸಾಂನ (Assam) ದಂಪತಿಗೆ (Couple) ಪಿಜ್ಜಾ ಹಟ್ ವಿಶೇಷ ಉಡುಗೊರೆಯನ್ನು ನೀಡಿದ್ದು, ಅವರಿಗೆ ಪ್ರತಿ ತಿಂಗಳಿಗೊಮ್ಮೆ ಪಿಜ್ಜಾವನ್ನು (Pizza) ಉಚಿತವಾಗಿ ಮನೆಗೆ ತಲುಪಿಸಲು ಮುಂದಾಗಿದೆ.
ಅರೇ.. ಇದೇನು ಎಂದು ಯೋಚಿಸುತ್ತಿದ್ದಾರೆ..? ಹೌದು ಹಿಂದೊಮ್ಮೆ ಮದುವೆ (Marriage) ಸಂದರ್ಭದಲ್ಲಿ ವಿಶೇಷವಾದ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಮಿಂಟು ರೈ ಮತ್ತು ಶಾಂತಿ ಪ್ರಸಾದ್ ಜೋಡಿ ವೈರಲ್ ಆಗಿದ್ದರು. ಇದನ್ನು ನೋಡಿದ ಪಿಜ್ಜಾ ಹಟ್ ಕಂಪನಿಯು ಕರ್ವಾಚೌತ್ ದಿನದಂದು ಈ ಜೋಡಿಗೆ ಒಂದು ವರ್ಷದವರೆಗೆ ಪ್ರತಿ ತಿಂಗಳಿಗೊಮ್ಮೆ ಉಚಿತವಾಗಿ ಪಿಜ್ಜಾವನ್ನು ನೀಡುವುದಾಗಿ ಘೋಷಿಸಿದೆ. ಈ ಅಧಿಕೃತ ಘೋಷಣೆಯನ್ನು ಪಿಜ್ಜಾ ಹಟ್ ಇಂಡಿಯಾ ಎಂಬ ಅಧಿಕೃತ ಇನ್ಸ್‍ಸ್ಟಾಗ್ರಾಮ್ ಖಾತೆಯಲ್ಲಿ ಘೋಷಿಸಿದೆ.
Advertisement
View this post on Instagram
Advertisement
ಇನ್‍ಸ್ಟಾಗ್ರಾಮ್‍ನಲ್ಲಿ ಏನಿದೆ?: ತಿಂಗಳಿಗೊಮ್ಮೆ ಪಿಜ್ಜಾ ತಿಂದು ನಿಮ್ಮ ಪತಿಯೊಂದಿಗೆ ಸುದೀರ್ಘ ಹಾಗೂ ಸಂತೋಷದ ಜೀವನ ನಡೆಸಿ. ಪಿಜ್ಜಾವನ್ನು ಪ್ರೀತಿಸುವ ದಂಪತಿಗಳಿಗೂ ಕರ್ವಾ ಚೌತ್ ಶುಭಾಶಯಗಳು ಎಂದು ತಿಳಿಸಿದೆ. ಈ ವೇಳೆ ಮಿಂಟು ರೈ ಮತ್ತು ಶಾಂತಿ ಪ್ರಸಾದ್ ಅವರ ವೀಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ತಿಂಗಳಿಗೊಮ್ಮೆ ಉಚಿತವಾಗಿ ಪಿಜ್ಜಾವನ್ನು ಈ ದಂಪತಿಗೆ ನೀಡುತ್ತಿರುವ ಬಗ್ಗೆ ತಿಳಿಸಿದೆ. ಇದನ್ನೂ ಓದಿ: ಯತ್ನಾಳಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ, ಅವರಷ್ಟು ಬುದ್ಧಿವಂತಿಕೆಯೂ ನನಗಿಲ್ಲ: ಸವದಿ
Advertisement
Advertisement
ಈ ಜೋಡಿ ಜುಲೈನಲ್ಲಿ ಮದುವೆಯಾಗಿದ್ದರು. ಆ ಸಂದರ್ಭದಲ್ಲಿ ಶಾಂತಿ ಪ್ರಸಾದ್ ತನ್ನ ಪತಿಗೆ ಮದುವೆ ದಿನದಂತೆ ಕೆಲವು ಷರತ್ತುಗಳನ್ನು ವಿಧಿಸಿ ಸಹಿ ಹಾಕಿಸಿಕೊಂಡಿದ್ದರು. ಅದರಲ್ಲಿ ಪ್ರತಿದಿನವೂ ಜಿಮ್‍ಗೆ ಹೋಗುವುದು, ಪ್ರತಿ 15 ದಿನಕ್ಕೊಮ್ಮೆ ಶಾಪಿಂಗ್ ಹೋಗುವುದು. ಪ್ರತಿ ತಿಂಗಳಿಗೊಮ್ಮೆ ಪಿಜ್ಜಾ ತಿನ್ನುವುದು ಈ ರೀತಿಯ ಕೆಲವು ತಮಾಷೆಯ ಷರತ್ತುಗಳಿದ್ದವು. ಇದನ್ನೂ ಓದಿ: ರಾಮಲಿಂಗಾರೆಡ್ಡಿ BJP ಸೇರೋಕೆ ಬಂದಿದ್ರು: ಈಶ್ವರಪ್ಪ