ಕಾರವಾರ: ಅಂಕೋಲ ಪಟ್ಟಣದ ಬಾವಿಯೊಂದರಲ್ಲಿ ಪೆಟ್ರೋಲ್ ಪತ್ತೆಯಾಗಿದೆ.
ಕಾರವಾರ ರಸ್ತೆಗೆ ಹೊಂದಿಕೊಂಡಿರುವ ಅಂಕೋಲದ ಮನೆಯೊಂದರ ಕುಡಿಯುವ ಬಾವಿ ನೀರಿಗೆ ಬದಲಾಗಿ ಪೆಟ್ರೊಲ್ ಸಿಗುತ್ತಿದೆ. ಈ ಮನೆಯ ನಾಗವೇಣಿ ನಾಗರಾಜ್ ಆಚಾರಿ ಬಾವಿಯಲ್ಲಿ ಪೆಟ್ರೋಲ್ ವಾಸನೆ ಬರುತ್ತಿರುವುದನ್ನು ಗಮನಿಸಿ ಎಂದಿನಂತೆ ಬಾವಿ ನೋಡಿದಾಗ ಬಾವಿಯ ಮೇಲ್ಭಾಗದಲ್ಲಿ ಪೆಟ್ರೋಲ್ ಶೇಖರಣೆಯಾಗಿರುವುದು ಕಂಡು ಬಂದಿದೆ. ಬಾವಿಯಲ್ಲಿ ಪೆಟ್ರೋಲ್ ಬರುತ್ತಿರುವುದನ್ನು ಗಮನಿಸಿ ಜನರಿಗೆ ತಿಳಿಸಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಪೆಟ್ರೋಲ್ ಬಾವಿಯನ್ನು ನೋಡಲು ಸ್ಥಳೀಯ ಜನ ಮುಗಿಬಿದ್ದಿದ್ದಾರೆ.
Advertisement
Advertisement
ಪಟ್ಟಣದಲ್ಲಿ ಪೆಟ್ರೋಲ್ ಮಿಶ್ರಿತವಾಗಿ ಬಾವಿ ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್ ಮತ್ತು ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಮನೆಯ ಮಾಲೀಕರಾದ ನಾಗವೇಣಿ ನಾಗರಾಜ್ ಆಚಾರಿ ತಮ್ಮ ಬಾವಿಯಲ್ಲಿ ಪೆಟ್ರೋಲ್ ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಪುರಸಭೆ ಮುಖ್ಯಾಧಿಕಾರಿಯವರಿಗೆ ಲಿಖಿತ ದೂರ ನೀಡಿದ್ದಾರೆ.
Advertisement
ಪುರಸಭೆಯ ಹಿರಿಯ ಆರೋಗ್ಯ ನೀರಿಕ್ಷಕ ಪ್ರವೀಣ್ ನಾಯಕ್ ಪರಿಶೀಲನೆ ನಡೆಸಿದಾಗ, ಮನೆಯ ಎದುರಿನಲ್ಲಿರುವ ಪೆಟ್ರೋಲ್ ಪಂಪ್‍ನಲ್ಲಿರುವ ಟ್ಯಾಂಕ್ ಲೀಕೇಜ್ ಆಗಿದೆ. ಈ ಪೆಟ್ರೋಲ್ ಭೂಮಿಯಲ್ಲಿ ಇಂಗಿ ಜಲಮೂಲದಿಂದ ಇವರ ಬಾವಿಯಲ್ಲಿ ಶೇಖರವಾಗಿರುವ ವಿಷಯ ಬೆಳಕಿಗೆ ಬಂದಿದೆ. ಇದರಿಂದಾಗಿ ಬಾವಿಯಲ್ಲಿ ಪೆಟ್ರೋಲ್ ಸಂಗ್ರಹವಾಗಿದ್ದು ಪುರಸಭಾ ಅಧಿಕಾರಿಗಳು ಪಂಪ್ ಮಾಲೀಕರಿಗೆ ನೋಟಿಸ್ ಜಾರಿಗೆ ಮಾಡಿದ್ದಾರೆ.