– ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ ಸೋಲು
ಪ್ಯಾರಿಸ್: 44 ವರ್ಷಗಳ ಬಳಿಕ ಒಲಿಂಪಿಕ್ಸ್ (Olympics) ಹಾಕಿಯಲ್ಲಿ (Hockey) ಫೈನಲ್ ಪ್ರವೇಶದ ಕನಸು ಕಂಡಿದ್ದ ಟೀಂ ಇಂಡಿಯಾದ (Team India) ಕನಸು ಭಗ್ನಗೊಂಡಿದೆ. ಸೆಮಿಫೈನಲ್‌ನಲ್ಲಿ ಜರ್ಮನಿ (Germany) ವಿರುದ್ಧ 3-2 ಗೋಲುಗಳಿಂದ ಸೋತ ಕಂಚಿನ ಪದಕಕ್ಕೆ ಹೋರಾಡಬೇಕಿದೆ.
Advertisement
ಆರಂಭದ 7ನೇ ನಿಮಿಷದಲ್ಲಿ ಭಾರತ ಮೊದಲ ಗೋಲು ಬಾರಿಸಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಮೊದಲ ಗೋಲು ಬಾರಿಸಿದರು. ಆದರೆ 18 ಮತ್ತು 27ನೇ ನಿಮಿಷದಲ್ಲಿ ಜರ್ಮನಿ 2 ಗೋಲು ಬಾರಿಸಿ ಮೊದಲಾರ್ಧದಲ್ಲಿ 2-1 ಮುನ್ನಡೆ ಪಡೆಯಿತು.
Advertisement
💔 for the Indian Hockey team as they lose the S/Fs to Germany 3-2 at #Paris2024! 🏑
Keep watching the action LIVE on #Sports18 & stream for FREE on #JioCinema 👈#OlympicsonJioCinema #OlympicsonSports18 #Olympics #Hockey pic.twitter.com/JTamRXoJRl
— JioCinema (@JioCinema) August 6, 2024
ದ್ವಿತೀಯಾರ್ಧದಲ್ಲಿ ಪ್ರಬಲವಾಗಿ ಹೋರಾಡಿದ ಭಾರತ 36ನೇ ನಿಮಿಷದಲ್ಲಿ ಗೋಲ್ ಹೊಡೆಯುವ ಮೂಲಕ ಸಮಬಲ ಸಾಧಿಸಿತು. ಆದರೆ 54ನೇ ನಿಮಿಷದಲ್ಲಿ ಜರ್ಮನಿಯ ಮಿಲ್ಟ್‌ಕಾವು ಗೋಲು ಹೊಡೆದು ಮುನ್ನಡೆ ತಂದುಕೊಟ್ಟರು. ಇದನ್ನೂ ಓದಿ: ವಿನೇಶ್ ಫೋಗಟ್ ಫೈನಲ್‌ಗೆ ಲಗ್ಗೆ – ಒಲಿಂಪಿಕ್ಸ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು
Advertisement
ಕೊನೆಯ 2 ನಿಮಿಷ ಇದ್ದಾಗ ಗೋಲ್‌ಕೀಪರ್ ಶ್ರೀಜೇಶ್ ಅವರನ್ನು ಹೊರಗಡೆ ಇಟ್ಟು ಹೆಚ್ಚುವರಿ ಆಟಗಾರ ಶಮ್ಶೇರ್ ಸಿಂಗ್ ಸಿಂಗ್ ಅವರನ್ನು ಆಡಿಸಲಾಯಿತು. ಇನ್ನೇನು ಪಂದ್ಯ ಮುಗಿಯುವಷ್ಟರಲ್ಲಿ ಭಾರತ ಗೋಲ್ ಹೊಡೆಯುವ ಅವಕಾಶ ಸಿಕ್ಕಿತ್ತು. ಆದರೆ ಚೆಂಡು ಗೋಲು ಪೆಟ್ಟಿಗೆಯ ಮೇಲಕ್ಕೆ ಹೋಗುವ ಮೂಲಕ ಫೈನಲ್ ಪ್ರವೇಶಿಸುವ ಕನಸು ಛಿದ್ರಗೊಂಡಿತು. ಆರಂಭದಲ್ಲಿ ಭಾರತಕ್ಕೆ ಹಲವು ಪೆನಾಲ್ಟಿ ಅವಕಾಶ ಸಿಕ್ಕಿತ್ತು. ಆದರೆ ಭಾರತ ಗೋಲು ಹೊಡೆಯುವಲ್ಲಿ ವಿಫಲವಾಗಿತ್ತು.
Advertisement
Sports indeed seem cruel at times like these!🥹
We thank you for your efforts team! 🏑🫡#OlympicsonJioCinema #OlympicsonSports18 #Olympics #Hockey #Paris2024 #IndianHockeyTeam pic.twitter.com/CJpBAjy8qI
— JioCinema (@JioCinema) August 6, 2024
ಕಂಚಿಗಾಗಿ ಹೋರಾಟ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಬ್ರಿಟನ್ ವಿರುದ್ಧ ಗೆದ್ದು ಕಂಚು ಗೆದ್ದುಕೊಂಡಿತ್ತು. ಗುರುವಾರ ಸ್ಪೇನ್ ವಿರುದ್ಧ ಕಂಚಿನ ಪದಕಕ್ಕೆ ಸೆಣಸಾಡಲಿದೆ. ಈ ಹಿಂದೆ 1980 ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿ ಭಾರತ ತಂಡ ಚಿನ್ನವನ್ನು ಗೆದ್ದುಕೊಂಡಿತ್ತು.
The Equalizer that India was waiting for has been scored 🏑😍
Keep watching the action LIVE on #Sports18 & stream for FREE on #JioCinema 👈#OlympicsonJioCinema #OlympicsonSports18 #Olympics #Hockey pic.twitter.com/LXPrJLfnYC
— JioCinema (@JioCinema) August 6, 2024