ಬಾಲಿವುಡ್ (Bollywood) ಬ್ಯೂಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ರಾಜಕಾರಣಿ ರಾಘವ್ ಚಡ್ಡಾ (Raghav Chadha) ಲವ್ವಿ-ಡವ್ವಿ ವಿಚಾರ ಸದ್ಯದ ಹಾಟ್ ಟಾಪಿಕ್ ಆಗಿದೆ. ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಿರುವ ಈ ಜೋಡಿ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ದೆಹಲಿಯಲ್ಲಿ ಈ ವಾರ ಅದ್ದೂರಿ ನಿಶ್ಚಿತಾರ್ಥ ನಡೆಯಲಿದೆ.
- Advertisement 2
ಪ್ರಿಯಾಂಕಾ ಚೋಪ್ರಾ (Priyanka Chopra) ಸಂಬಂಧಿ ನಟಿ ಪರಿಣಿತಿ ಚೋಪ್ರಾ ಕಳೆದ ಕೆಲ ದಿನಗಳಿಂದ ರಾಘವ್ ಚಡ್ಡಾ ಜೊತೆಗಿನ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಲಂಡನ್ ಮತ್ತು ಮುಂಬೈ ಏರ್ಪೋರ್ಟ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರ ಮದುವೆ ಬಗ್ಗೆ ಅದೆಷ್ಟೇ ಚರ್ಚೆ ನಡೆಯುತ್ತಾ ಇದ್ದರೂ ಇಬ್ಬರೂ ಸೈಲೆಂಟ್ ಆಗಿದ್ದಾರೆ.
- Advertisement 3
- Advertisement 4
ಹೀಗಿರುವಾಗ ಈ ವಾರವೇ ದೆಹಲಿಯಲ್ಲಿ ರಾಜಕಾರಣಿ ರಾಘವ್ ಜೊತೆ ಪರಿಣಿತಿ ಎಂಗೇಜ್ಮೆಂಟ್ ಫಿಕ್ಸ್ ಆಗಿದೆ. ಅದಕ್ಕಾಗಿ ಈಗಾಗಲೇ ಪರಿಣಿತಿ ಚೋಪ್ರಾ ದೆಹಲಿಗೆ (Dehli) ತೆರಳಿದ್ದಾರೆ. ನಿಶ್ಚಿತಾರ್ಥದ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕುಟುಂಬದ ಆಪ್ತರಷ್ಟೇ ಈವೆಂಟ್ನಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಇಬ್ರಾಹಿಂ ಅಲಿ ಖಾನ್ ಜೊತೆಗಿನ ಡೇಟಿಂಗ್ ಸುದ್ದಿ ನಿಜಾನಾ? ಪಾಲಕ್ ತಿವಾರಿ ಸ್ಪಷ್ಟನೆ
ಪರಿಣಿತಿ ಚೋಪ್ರಾ ಎಂಗೇಜ್ಮೆಂಟ್ಗೆ ಭಾಗಿಯಾಗಲು ಈಗಾಗಲೇ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್ ಮತ್ತು ಮೀರಾ ಚೋಪ್ರಾ ಕೂಡ ದೆಹಲಿಯಲ್ಲಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಹೇಳದೇ ಇದ್ದರೂ ಕೂಡ ಪರಿಣಿತಿ-ರಾಘವ್ ನಿಶ್ಚಿತಾರ್ಥದ ಸಿದ್ಧತೆ ತೆರೆಮರೆಯಲ್ಲಿ ಭರದಿಂದ ನಡೆಯುತ್ತಿದೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ.