ಇಸ್ಲಾಮಾಬಾದ್: ಗುರುದ್ವಾರದಲ್ಲಿ ಧಾರ್ಮಿಕ ನಿಯಮವನ್ನು ಉಲ್ಲಂಘಿಸಿ ಪಾಕಿಸ್ತಾನಿ ಮಾಡೆಲ್ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳನ್ನು ನೋಡಿದ ನೆಟ್ಟಿಗರು ಮಾಡೆಲ್ ಮೇಲೆ ಫುಲ್ ಗರಂ ಆಗಿದ್ದಾರೆ.
ಧಾರ್ಮಿಕ ಸ್ಥಳವಾದ ಗುರುದ್ವಾರ ದರ್ಬಾರ್ ಸಾಹಿಬ್(ಕರ್ತಾರ್‍ಪುರ್ ಸಾಹಿಬ್) ಆವರಣದಲ್ಲಿ ಪಾಕಿಸ್ತಾನಿ ಮಾಡೆಲ್ ಭಾರತೀಯ ಉಡುಪನ್ನು ಧರಿಸಿ, ತಲೆ ಮೇಲೆ ಬಟ್ಟೆ ಹಾಕಿಕೊಳ್ಳದೆ ಫೋಟೋಗೆ ಪೋಸ್ ನೀಡಿದ್ದಾಳೆ. ಆ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಆ ಫೋಟೋಗಳನ್ನು ನೋಡಿ ಮಾಡೆಲ್ ಮೇಲೆ ಕೋಪಗೊಂಡಿದ್ದಾರೆ.
Advertisement
ಏನಿದು ಘಟನೆ?
ಲಾಹೋರ್ ಮೂಲದ ಈ ಮಾಡೆಲ್ ಪಾಕಿಸ್ತಾನದಲ್ಲಿ ಸಿದ್ಧ ಉಡುಪುಗಳ ಮಹಿಳಾ ಆನ್‍ಲೈನ್ ಬಟ್ಟೆಗಳ ರಾಯಭಾರಿಯಾಗಿದ್ದಳು. ಇತ್ತೀಚೆಗೆ ಕರ್ತಾರ್‍ಪುರ ಸಾಹಿಬ್‍ನ ಗುರುದ್ವಾರದಲ್ಲಿ ತಲೆ ಮೇಲೆ ಬಟ್ಟೆ ಹಾಕಿಕೊಳ್ಳದೆ ಭಾರತೀಯ ಉಡುಪನ್ನು ಧರಿಸಿ ಮಾಡೆಲ್ ಫೋಟೋಗೆ ಪೋಸ್ ನೀಡಿದ್ದು, ಈ ಫೋಟೋಗಳನ್ನು ಬಟ್ಟೆಗಳ ಪ್ರಮೋಷನ್ ಗೆ ಬಳಸಿಕೊಳ್ಳಲಾಗಿದೆ. ಫೋಟೋ ನೋಡಿದ ನೆಟ್ಟಿಗರು, ಧಾರ್ಮಿಕ ಸ್ಥಳವಾದ ಗುರುದ್ವಾರದಲ್ಲಿ ತಲೆ ಮೇಲೆ ಬಟ್ಟೆ ಹಾಕಿಕೊಳ್ಳದೆ ಪಾಕಿಸ್ತಾನಿ ಯುವತಿ ಫೋಟೋಗಳಿಗೆ ಪೋಸ್ ಕೊಟ್ಟಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ಆನ್‍ಲೈನ್ ಸ್ಟೋರ್‌ನ ಮಾಲೀಕ ‘ಮನ್ನತ್_ಕ್ಲೋಥಿಂಗ್’ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ಬುರ್ಖಾವಿಲ್ಲದೇ ತೆಗೆಸಿದ ಮಾಡೆಲ್‍ನ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ನೋಡಲು ಓಡುತ್ತ ಹೊರಟ ಮೂರು ಮಕ್ಕಳ ತಾಯಿ
Advertisement
ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಮಾಡೆಲ್ ಮತ್ತು ಬ್ರಾಂಡ್‍ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಈ ರೀತಿ ಮಾಡಿದ್ದೀರಾ! ಗುರುದ್ವಾರದಲ್ಲಿ ನೀವು ಈ ರೀತಿ ನಡೆದುಕೊಂಡಿರುವುದು ಗೌರವ ತಂದುಕೊಂಡುವುದಿಲ್ಲ ಎಂದು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಈ ಪೋಸ್ಟ್ ಅನ್ನು ‘ನಾಚಿಕೆಗೇಡು’ ಎಂದು ಹೇಳಿ ಡಿಲೀಟ್ ಮಾಡುವಂತೆ ಕಮೆಂಟ್ ಮಾಡುತ್ತಿದ್ದಾರೆ. ಇದು ನಿಮ್ಮ ಪ್ರವಾಸಿ ತಾಣವಲ್ಲ, ಮೊದಲು ತಲೆ ಮೇಲೆ ಬಟ್ಟೆ ಹಾಕಿಕೊಳ್ಳಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಪರಮ್‍ಜಿತ್ ಸಿಂಗ್ ಸರ್ನಾ, ಇದು ಅತ್ಯಂತ ಆಕ್ಷೇಪಾರ್ಹ ಕೃತ್ಯವಾಗಿದ್ದು, ಸಿಖ್ ಧಾರ್ಮಿಕ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. ಐತಿಹಾಸಿಕ ದೇಗುಲಕ್ಕೆ ಭೇಟಿ ನೀಡುವವರು ಗುರುದ್ವಾರಗಳಲ್ಲಿ ಅನ್ವಯಿಸುವ ಸಿಖ್ ನೀತಿ ಸಂಹಿತೆಯ ಬಗ್ಗೆ ಸಂವೇದನಾಶೀಲತೆಯನ್ನು ಹೊಂದಿರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾದ ಡಾ.ಪ್ರಭಾಕರ್ ಕೋರೆ
ಎಸ್‍ಜಿಪಿಸಿಯ ಮಾಜಿ ಪ್ರಧಾನ ಕಾರ್ಯದರ್ಶಿ ಕಿರಣ್‍ಜೋತ್ ಕೌರ್ ಈ ಕುರಿತು ಮಾತನಾಡಿದ್ದು, ಧಾರ್ಮಿಕ ಸ್ಥಳವನ್ನು ವ್ಯಾಪಾರೀಕರಣ ಮಾಡುವುದು ಅತ್ಯಂತ ಆಕ್ಷೇಪಾರ್ಹವಾಗಿದೆ. ಇದರ ವಿರುದ್ಧ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.