ಓಸ್ಲೋ: ನಾರ್ವೆಯ ಎರ್ಲಿಂಗ್ ಹಾಲೆಂಡ್ (Erling Haaland) ಈಗ ನಡೆಯುತ್ತಿರುವ FIFA ವಿಶ್ವಕಪ್‌ನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದಾರೆ. ಮೈದಾನದಲ್ಲಿನ ಅವರ ಸ್ಟನ್ನಿಂಗ್ ಗೋಲುಗಳು ಮತ್ತು ಮೈದಾನದ ಹೊರಗೆ ಸ್ನೇಹಪರ ವ್ಯಕ್ತಿತ್ವವು ಹಾಲೆಂಡ್‌ಗೆ ಲಕ್ಷಾಂತರ ಹೊಸ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ. ವಿಶೇಷವಾಗಿ ಪೆರುವಿನಲ್ಲಿ, ಜನರು ತಮ್ಮ ಮಕ್ಕಳಿಗೆ ಹಾಲೆಂಡ್ ಹೆಸರನ್ನು ಇಡುತ್ತಿದ್ದಾರೆ.
ಪೆರುವಿನ ರಾಷ್ಟ್ರೀಯ ಗುರುತಿನ ಮತ್ತು ನಾಗರಿಕ ಸ್ಥಿತಿ ನೋಂದಣಿ (RENIEC) ಪ್ರಕಾರ, ಇದುವರೆಗೆ 468 ಮಕ್ಕಳಿಗೆ ಅವರ ಪೋಷಕರು ಹಾಲೆಂಡ್ ಹೆಸರಿಟ್ಟಿದ್ದಾರೆ. ಇನ್ನೂ 91 ಶಿಶುಗಳಿಗೆ ಸ್ಟಾರ್ ಫುಟ್‌ಬಾಲರ್ ಪೂರ್ಣ ಹೆಸರು ʼಎರ್ಲಿಂಗ್ ಹಾಲೆಂಡ್ʼ ಇಡಲು ನೋಂದಾಯಿದ್ದಾರೆ. ಇದನ್ನೂ ಓದಿ: ಕೇಳಿಕೊಂಡರೂ ಹಾಲೆಂಡ್‌ಗೆ ಚೆಂಡು ವರ್ಗಾಯಿಸಲು ನಿರಾಕರಣೆ; ಸಹ ಆಟಗಾರನ ಪ್ರಮಾದಕ್ಕೆ ದೊಡ್ಡ ಬೆಲೆತೆತ್ತ ನಾರ್ವೆ
ಹಾಲೆಂಡ್ ಫಿಫಾ ಟೂರ್ನಮೆಂಟ್‌ನ ಅಸಾಧಾರಣ ತಾರೆಗಳಲ್ಲಿ ಒಬ್ಬರಾಗಿದ್ದು, ತಮ್ಮ ಚೊಚ್ಚಲ ಅಭಿಯಾನದಲ್ಲೇ ಏಳು ಗೋಲುಗಳನ್ನು ಗಳಿಸಿದ್ದಾರೆ. ಈ ಪೈಕಿ 16ರ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ ಎರಡು ನಿರ್ಣಾಯಕ ಸ್ಟ್ರೈಕ್‌ಗಳು ಸೇರಿವೆ. 28 ವರ್ಷಗಳ ಬಳಿಕ ನಾರ್ವೆಯನ್ನು ತಮ್ಮ ಮೊದಲ ವಿಶ್ವಕಪ್‌ನಲ್ಲೇ ಕ್ವಾರ್ಟರ್ ಫೈನಲ್‌ಗೆ ಕರೆತಂದಿದ್ದರು.
ಪಂದ್ಯಾವಳಿಯ ಆರಂಭದಿಂದಲೂ ಹಾಲೆಂಡ್ ಸ್ಟಾರ್ ಆಗಿ ಮಿಂಚಿದರು. ಇವರ ಆಟಕ್ಕೆ ಫಿದಾ ಆದ ಅಭಿಮಾನಿಗಳಿಂದ ನೋಂದಣಿಗಳು ಹೆಚ್ಚಾಗಿವೆ. ʼಪೆರುವಿಯನ್ನರು ತಮ್ಮ ಮಕ್ಕಳಿಗೆ ಹೆಸರಿಡಲು ಫುಟ್ಬಾಲ್ ತಾರೆಗಳು ಸ್ಫೂರ್ತಿಯಾಗಿದ್ದಾರೆ. ನಾರ್ವೆ ಕ್ವಾರ್ಟರ್ ಫೈನಲ್‌ಗೆ ತಲುಪುತ್ತಿದ್ದಂತೆ ಹೆಸರು ನೋಂದಣಿಯು ನಾಟಕೀಯವಾಗಿ ಹೆಚ್ಚಾಗಿದೆʼ ಎಂದು ರೆನಿಕ್‌ನ ವಕ್ತಾರ ಇವಾನ್ ಟೊರೆಸ್ ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯಾಮೆರಾ ಕೇಬಲ್‌ಗೆ ತಗುಲಿತ್ತೇ ಚೆಂಡು?- ವಿಡಿಯೋ ನೋಡಿ ನಾರ್ವೆ ಕೆಂಡಾಮಂಡಲ, ತಪ್ಪು ಸಂಭವಿಸಿಲ್ಲ ಎಂದ ಫಿಫಾ
ಫುಟ್ಬಾಲ್‌ನ ಅತಿದೊಡ್ಡ ಹಂತದಲ್ಲಿ ಹಾಲೆಂಡ್‌ನ ಅದ್ಭುತ ಪ್ರದರ್ಶನವು ಮುಂದಿನ ಪೀಳಿಗೆಯ ಆಟಗಾರರಿಗೆ ಸ್ಫೂರ್ತಿ ನೀಡಿದೆ. ತಮ್ಮ ತಂಡವು ಪಂದ್ಯಾವಳಿಯಿಂದ ಹೊರನಡೆದ ನಂತರ ಮಾತನಾಡಿದ ಹಾಲೆಂಡ್, ನಾರ್ವೆಯ ಭವಿಷ್ಯದ ಬಗ್ಗೆ ಆಶಾವಾದಿಯಾಗಿದ್ದರು.
