– ಕೋಟಿ ಕೋಟಿ ಎಲ್ಲಿಗೆ ಹೋಯ್ತು.. ರಾಹುಲ್ ಗಾಂಧಿ ಜೇಬಿಗೆ ಹೋಯ್ತು ಅಂತ ವಿಪಕ್ಷಗಳ ಘೋಷಣೆ
ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಇಂದು ಕೂಡ ಸಚಿವ ನಾಗೇಂದ್ರ (B.Nagendra) ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿ ಪ್ರತಿಭಟಿಸಿದ ಪ್ರಸಂಗ ನಡೆಯಿತು. ಕಪ್ಪು ಬಟ್ಟೆ ಹಿಡಿದು ರಾಜೀನಾಮೆಗೆ ಪಟ್ಟು ಹಿಡಿದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರ‍್ಕಾರ ಮೊದಲು ರಾಜೀನಾಮೆ ಕೊಡಿಸಬೇಕು. ಕಳಂಕಿತ ಮಂತ್ರಿಗಳನ್ನ ಇಟ್ಟುಕೊಂಡು ಹೇಗೆ ಸದನ ಮಾಡ್ತೀರಾ? ಮೊದಲು ರಾಜೀನಾಮೆ ಕೊಡಿಸಿ. ಅಮೇಲೆ ಸದನ ಮಾಡೋಣ ಅಂತ ಆಗ್ರಹಿಸಿದರು.
ಈ ವೇಳೆ ಕಾಂಗ್ರೆಸ್ ರವಿ ಮಾತನಾಡಿ, ಬರ ಇದೆ ರ‍್ಚೆ ಮಾಡಿ. ನಾಗೇಂದ್ರ ವಿಚಾರ ನೋಟಿಸ್ ಕೊಟ್ಟು ರ‍್ಚೆ ಮಾಡಿ ಎಂದರು. ಆದರೆ, ಸದನದಲ್ಲಿ ಗದ್ದಲ ಗಲಾಟೆ ನಡೆಯಿತು. ಪ್ರಶ್ನೆ ಕೇಳದ ಬಿಜೆಪಿ ಸದಸ್ಯರು, ಸಚಿವ ನಾಗೇಂದ್ರ ವಜಾ ಮಾಡುವಂತೆ ಘೋಷಣೆ ಕೂಗಿದರು. ವಿಪಕ್ಷಗಳ ಗಲಾಟೆ ಮಧ್ಯೆ ಪ್ರಶ್ನೋತ್ತರ ಕಲಾಪ ನಡೆಯಿತು. ಕೋಟಿ ಕೋಟಿ ಲೂಟಿ ಅಂತ ವಿಪಕ್ಷಗಳ ಘೋಷಣೆ ಕೂಗಿದವು.
ನಾಗರಾಜ್ ಯಾದವ್ ಮಾತನಾಡಿ, ಪ್ರಶ್ನೋತ್ತರ ಅವಧಿಗೆ ಅಡ್ಡಿಪಡಿಸಬಾರದು. ಇದಕ್ಕೆ ಸಭಾಪತಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ಮಧ್ಯೆ, ರಾಹುಲ್ ಗಾಂಧಿ ಹೆಸರನ್ನು ವಿಪಕ್ಷಗಳು ಪ್ರಸ್ತಾಪಿಸಿದವು. ಅದಕ್ಕೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸದನದಲ್ಲಿ ಮತ್ತೆ ಗದ್ದಲ ರ‍್ಪಟ್ಟಿತು. ಕಪ್ಪು ಬಟ್ಟೆ ತಿರುಗಿಸಿ ವಿಪಕ್ಷಗಳು ಘೋಷಣೆ ಕೂಗಿದವು. ‘ಕೋಟಿ ಕೋಟಿ ಎಲ್ಲಿ ಹೋಯ್ತು.. ರಾಹುಲ್ ಗಾಂಧಿ ಜೇಬಿಗೆ ಹೋಯ್ತು’ ಅಂತ ಘೋಷಣೆ ಕೂಗಿದವು.
ಪಾಯಿಂಟ್ ಆಫ್ ರ‍್ಡರ್ ತೆಗೆದ ಬಸವರಾಜ್ ಹೊರಟ್ಟಿ, ಈ ಸದನ ಹೀಗೆ ನಡೆಸೋದು ಸರಿಯಲ್ಲ. ಯಾರು ಪ್ರಶ್ನೆ ಕೇಳ್ತಾರೆ ಗೊತ್ತಾಗ್ತಿಲ್ಲ. ಇದಕ್ಕೆ ಇತಿಶ್ರೀ ಹಾಡಿ. ಈ ಪದ್ದತಿ ನಾಚಿಕೆ ಬರುತ್ತದೆ. ಸದನ ಮುಂದೂಡಿ ಮಾತುಕತೆ ಮಾಡುವಂತೆ ಮನವಿ ಮಾಡಿದರು.
ಭ್ರಷ್ಟಾಚಾರಿಗಳನ್ನ ಮಂತ್ರಿ ಮಾಡಿದ್ದೀರಾ. ಹೇಗೆ ಸದನ ನಡೆಸೋದು ಅಂತ ವಿಪಕ್ಷಗಳು ಘೋಷಣೆ ಕೂಗಿದವು. ನಾಗೇಂದ್ರ ವಜಾ ಮಾಡುವಂತೆ ಚಪ್ಪಾಳೆ ತಟ್ಟಿ ಘೋಷಣೆ ಕೂಗಿದರು.

