ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಸಮಯದಲ್ಲಿ ಪಾಕಿಸ್ತಾನದ ಪರಮಾಣು ಕೇಂದ್ರಕ್ಕೆ ಸಂಬಂಧಿಸಿದ ಕಿರಾನಾ ಹೀಲ್ಸ್ ಮೇಲೆ ಭಾರತೀಯ ಡ್ರೋನ್ ದಾಳಿ ನಡೆದಿತ್ತೇ ಎಂಬ ಪ್ರಶ್ನೆಗೆ ಇದೀಗ ಮಾಜಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ.
ಕಳೆದ ವರ್ಷ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದ ಸರ್ಗೋಧಾ ಸಮೀಪದ ಕಿರಾನಾ ಹಿಲ್ಸ್‌ಗೆ ಭಾರತೀಯ ‘ಲಾಯಿಟರಿಂಗ್ ಮ್ಯುನಿಷನ್’ (ಸ್ಫೋಟಕ ಹೊತ್ತ ಡ್ರೋನ್) ಅಪ್ಪಳಿಸಿತ್ತು. ಆದರೆ, ಕಿರಾನಾ ಹೀಲ್ಸ್‌ಗಳನ್ನು ಭಾರತ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತ ಸೇನೆ, ಸರ್ಗೋಧಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ರಾಡಾರ್‌ಗಳನ್ನು ಹುಡುಕಲು ಮದ್ದುಗುಂಡುಗಳುಳ್ಳ ಡ್ರೋನ್‌ಗಳನ್ನು ಕಳುಹಿಸಿತ್ತು. ಈ ಡ್ರೋನ್‌ಗಳು ನಿರ್ದಿಷ್ಟ ಗುರಿಯನ್ನು ಹುಡುಕುತ್ತಾ ಕೆಲ ಗಂಟೆಗಳ ಕಾಲ ಆಕಾಶದಲ್ಲಿ ಸಂಚರಿಸಬಲ್ಲವು. ಆದರೆ, ನಿಗದಿತ ಸಮಯದೊಳಗೆ ಗುರಿ ಸಿಗದಿದ್ದರೆ, ಇಂತಹ ಡ್ರೋನ್‌ಗಳು ಕಾರ್ಯಾಚರಣೆ ವೇಳೆ ಬಿದ್ದು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಕಿರಾನಾ ಹೀಲ್ಸ್‌ಗಳಲ್ಲಿರುವ ಪ್ರದೇಶವೊಂದಕ್ಕೆ ಡ್ರೋನ್ ಅಪ್ಪಳಿಸಿದೆ ಎಂದು ಜನರಲ್ ಚೌಹಾಣ್ ವಿವರಿಸಿದ್ದಾರೆ.ಇದನ್ನೂ ಓದಿ: ಪಾಟ್ನಾದಲ್ಲಿ ತಾರಕಕ್ಕೇರಿದ ವಿದ್ಯಾರ್ಥಿಗಳ ಪ್ರತಿಭಟನೆ; ಜಲಫಿರಂಗಿ ಪ್ರಯೋಗ, ಬ್ಯಾರಿಕೇಡ್ ಮುರಿದು ಮೆರವಣಿಗೆ
ದಾಳಿಯ ಬಳಿಕ ಕಿರಾನಾ ಹೀಲ್ಸ್‌ನಲ್ಲಿನ ಒಂದು ಕಟ್ಟಡದ ಮೇಲ್ಛಾವಣಿಯಲ್ಲಿ ದೊಡ್ಡ ಬಿರುಕು ಕಂಡುಬಂದಿತ್ತು. ಕಟ್ಟಡದ ಸುತ್ತಮುತ್ತ ಅವಶೇಷಗಳು ಹರಡಿಕೊಂಡಿದ್ದವು. ಆದ್ದರಿಂದ ದಾಳಿಯಿಂದ ಕೇವಲ ಒಂದೇ ಕಟ್ಟಡಕ್ಕೆ ಹಾನಿಯಾಗಿದೆ ಎಂಬುದು ತಿಳಿದುಬಂದಿತ್ತು.
ಈ ಮೂಲಕ ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಕಿರಾನಾ ಹೀಲ್ಸ್ ಬಳಿ ನಡೆದ ಘಟನೆಯ ಬಗ್ಗೆ ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ಇದೀಗ ಮಾಜಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಿಂದ ಸ್ಪಷ್ಟನೆ ಸಿಕ್ಕಂತಾಗಿದೆ. ಇದನ್ನೂ ಓದಿ: ನೀಟ್ ಪ್ರತಿಭಟನೆ ವೇಳೆ ಪೊಲೀಸ್ ವ್ಯಾನ್ ತಡೆದಿದ್ದ ರಿಯಾ ಅಹೀರ್ ಬಿಗ್‌ಬಾಸ್ ಮನೆ ಆಫರ್; ಫ್ಯಾನ್ಸ್ ಕೈಯಲ್ಲಿ ನಿರ್ಧಾರ!
