Crime

ಬಿಜೆಪಿ ಶಾಸಕನ ವಾಹನದ ಮೇಲೆ ಬಾಂಬ್ ಎಸೆಯಲೆತ್ನಿಸಿದ ಐವರ ಬಂಧನ

Published

on

Share this

ಭುವನೇಶ್ವರ: ಬಿಜೆಪಿ ಶಾಸಕರೊಬ್ಬರ ವಾಹನದ ಮೇಲೆ ಬಾಂಬ್ ಎಸೆಯಲು ಯತ್ನಿಸಿದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಒಡಿಶಾದ ಕೆಂದುಜರ್ ಜಿಲ್ಲೆಯಲ್ಲಿ ನಡೆದಿದೆ. ಭಾರತೀಯ ಜನತಾ ಪಕ್ಷ(ಬಿಜೆಪಿ) ಶಾಸಕ ಮೋಹನ್ ಮಾಝಿ ಅವರು ಚಲಿಸುತ್ತಿದ್ದ ವಾಹನದ ಮೇಲೆ ಆರೋಪಿಗಳು ಬಾಂಬ್ ಎಸೆಯಲು ಪ್ರಯತ್ನಿಸಿದ್ದಾರೆ.

ಹಣಕಾಸಿನ ವಿಚಾರ ಇಲ್ಲವೇ ವೈಯಕ್ತಿಕ ವಿಚಾರಗಳಿಂದ ಆರೋಪಿಗಳು ಈ ಕೃತ್ಯ ಎಸಗಿರಬಹುದು ಎಂದು ಅಲ್ಲಿನ ಪೊಲಿಸ್ ವರಿಷ್ಠಾಧಿಕಾರಿ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಇದನ್ನೂ ಓದಿ: 85 ವರ್ಷದ ಅಜ್ಜಿಗೆ ಒಲಿದುಬಂತು ಪಂಚಾಯತ್ ಅಧ್ಯಕ್ಷೆ ಸ್ಥಾನ 

ಕೆಲವು ಟೆಂಡರ್‍ಗಳು ಅಥವಾ ಕೆಲಸಗಳನ್ನು ನೀಡುವುದಾಗಿ ಶಾಸಕರು ಭರವಸೆ ನೀಡಿದ್ದರು. ಆದರೆ ಅವರು ಏನನ್ನೂ ಮಾಡಿಲ್ಲ. ಇದರಿಂದ ಸಿಟ್ಟಿಗೆದ್ದು ಈ ರೀತಿ ಮಾಡಿರುವುದಾಗಿ ಆರೋಪಿಯೊಬ್ಬ ಪೊಲೀಸರಿಗೆ ತಿಳಿಸಿದ್ದಾನೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications