Bollywood
ಕರೀನಾ ಮುಂದೆ ನೋರಾ ಮದ್ವೆ ಪ್ರಪೋಸಲ್!

– ಅವನು ಇನ್ನೂ ಚಿಕ್ಕವನು ಎಂದ ಬೇಬೋ
ಮುಂಬೈ: ಬಾಲಿವುಡ್ ಹಾಟ್ ಬ್ಯೂಟಿ, ಸಿಝ್ಲಿಂಗ್ ಡ್ಯಾನ್ಸರ್ ನೋರಾ ಫತೇಹಿ ಮೊದಲ ಬಾರಿಗೆ ಮದುವೆ ಬಗ್ಗೆ ಮಾತನಾಡಿದ್ದಾರೆ. ಅದು ಬಿಟೌನ್ ಬೇಬೋ ಕರೀನಾ ಕಪೂರ್ ಗೆ ಸೊಸೆ ಆಗುವ ಇಂಗಿತವನ್ನ ನೋರಾ ಹೊರ ಹಾಕಿದ್ದನ್ನ ಕೇಳಿ ಪಡ್ಡೆ ಹುಡುಗರು ಕಣ್ಣರಳಿಸಿ ಒಂದು ಗುಟುಕು ಪೆಗ್ ಏರಿಸಿ ತಲೆ ಅಲ್ಲಾಡಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಕರೀನಾ ಕಪೂರ್ ಮತ್ತು ನೋರಾ ಭಾಗಿಯಾಗಿದ್ದರು. ತೈಮೂರ್ ಆದಷ್ಟು ಬೇಗ ದೊಡ್ಡವನಾಗಲಿ. ನಾನು ಅವನ ಜೊತೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ನೋರಾ ಹೇಳಿದ್ರು. ಕ್ಷಣ ಮಾತ್ರದಲ್ಲೇ ಉತ್ತರಿಸಿದ ಕರೀನಾ, ಅವನಿಗೆ ಇನ್ನೂ ನಾಲ್ಕು ವರ್ಷ. ಅವನನ್ನ ಮದುವೆ ಆಗಬೇಕಾದ್ರೆ ನೀನು ತುಂಬಾ ವರ್ಷ ವೇಟ್ ಮಾಡಬೇಕು ಅಂದ್ರು. ನೋರಾ ಮಾತ್ರ ಪರವಾಗಿಲ್ಲ, ನಾನು ಅವನಿಗಾಗಿ ಕಾಯುತ್ತೇನೆ ಎಂದು ಹೇಳಿದ್ದಾರೆ.
ತೈಮೂರ್ ಹುಟ್ಟಿದಾಗಿನಿಂದಲೂ ಅಪಾರ ಫ್ಯಾನ್ಸ್ ಫಾಲೋವರ್ಸ್ ಗಳನ್ನ ಹೊಂದಿದ್ದಾನೆ. ತೈಮೂರು ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದಾ ಹರಿದಾಡುತ್ತಿರುತ್ತವೆ. ಎರಡು ವರ್ಷಗಳ ಹಿಂದೆ ತೈಮೂರು ಹೋಲಿಕೆಯ ಗೊಂಬೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು.
ಸದ್ಯ ಕರೀನಾ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಫೆಬ್ರವರಿಯಲ್ಲಿ ಪಟೌಡಿ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಲಿದೆ.
