ನ್ಯೂಯಾರ್ಕ್: ನವಜೋಡಿಯೊಂದು ತಮ್ಮ ಮದುವೆ ದಿನದಂದು ವಿಡಿಯೋ ಮಾಡುವಾಗ ವಧು ವರರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆಯೊಂದು ನ್ಯೂಯಾರ್ಕ್‍ನಲ್ಲಿ ನಡೆದಿದೆ.
ಚೀಯೆನ್ನೆ ಹಾಗೂ ಲ್ಯೂಕಾಸ್ ಕೊಪ್ಪಸ್ಕ ತಮ್ಮ ಮದುವೆಯ ಕ್ಷಣಗಳನ್ನು ನೆನಪಿಸಿಕೊಳ್ಳಲು ಒಂದು ಸಂದರ್ಶನ ನೀಡಿ ಮದುವೆಯ ಒಂದು ವಿಡಿಯೋವನ್ನು ಮಾಡುತ್ತಿದ್ದರು. ಆಗ ಅವರು ಕುಳಿತಿದ್ದ ಬೆಂಚ್ ಮೇಲೆ ಮರದ ಕೊಂಬೆಯೊಂದು ಬಿದ್ದಿದೆ.
Advertisement
ಚೀಯೆನ್ನೆ ಹಾಗೂ ಲ್ಯೂಕಾಸ್ ಒಬ್ಬರನೊಬ್ಬರು ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರಿಬ್ಬರು ಮಾತನಾಡುವಾಗ ಮರದ ಮೇಲಿಂದ ಒಂದು ಶಬ್ಧ ಕೇಳಿಸಿದೆ. ಆಗ ಇಬ್ಬರು ಮೇಲೆ ನೋಡಿದ್ದಾಗ ಮರದ ಕೊಂಬೆಯೊಂದು ಮುರಿಯುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಆ ಜಾಗದಿಂದ ಎದ್ದು ಓಡಿ ಹೋಗಿದ್ದಾರೆ.
Advertisement
Advertisement
ಈ ವಿಡಿಯೋದಲ್ಲಿ ನವಜೋಡಿಗಳು ಕುಳಿತ್ತಿದ್ದ ಜಾಗದಲ್ಲೇ ಮರದ ಕೊಂಬೆ ಬಿದ್ದಿದೆ. ಸದ್ಯ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
Advertisement
ಚೀಯೆನ್ನೆ ಹಾಗೂ ಲ್ಯೂಕಾಸ್ ಜೂನ್ 30ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಜುಲೈ 3ರಂದು ಈ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಎಲ್ಲರೂ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ.