ಬೆಂಗಳೂರು: ಪ್ರೀತಿಸಿ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ನವ ದಂಪತಿ ಇಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರವೀಣ್ (24) ಮತ್ತು ಪ್ರಿಯಾ (19) ಆತ್ಮಹತ್ಯೆಗೆ ಶರಣಾದ ದಂಪತಿ. ಪ್ರವೀಣ್ ಮಂಡ್ಯ ಜಿಲ್ಲೆಯ ಚನ್ನಸಂದ್ರ ಮೂಲದವರಾಗಿದ್ದು, ಪ್ರಿಯಾ ಬೆಂಗಳೂರಿನ ಹನುಮಂತನಗರದ ನಿವಾಸಿಯಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಪೋಷಕರ ಒಪ್ಪಿಗೆ ಮೇರೆಗೆ ನವೆಂಬರ್ 02ರಂದು ಮದುವೆ ಮಾಡಿಕೊಂಡಿದ್ರು. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿ, ಏಳೇ ತಿಂಗಳಿಗೆ ನವದಂಪತಿ ಆತ್ಮಹತ್ಯೆ-ಡೆತ್ ನೋಟ್ ನಲ್ಲಿ ಮನಕಲಕುವ ಮಾತು
Advertisement
ಮದುವೆ ಬಳಿಕ ಪ್ರವೀಣ್ ಪತ್ನಿಯೊಂದಿಗೆ ಕೆಂಗೇರಿಯಲ್ಲಿ ವಾಸವಾಗಿದ್ರು. ಇಬ್ಬರ ಮನೆಯವರೂ ಆರ್ಥಿಕವಾಗಿ ಚೆನ್ನಾಗಿಯೇ ಇದ್ದರು. ಆದರೆ ನವದಂಪತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಹೋದರಿಯನ್ನು ಪ್ರೀತಿಸಿ ಮದ್ವೆಯಾದ 3 ತಿಂಗಳಿಗೇ ಯುವಕ ಆತ್ಮಹತ್ಯೆ!
Advertisement
ಇದನ್ನೂ ಓದಿ: ಪ್ರೇಮ ವೈಫಲ್ಯ: ಕೊನೆ ಆಸೆ ಬರೆದಿಟ್ಟು ಒಂದೇ ಮರದಲ್ಲಿ ನೇಣಿಗೆ ಶರಣಾದ ಅಪ್ರಾಪ್ತ ಜೋಡಿ
Advertisement
Advertisement