– ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿದ ಚಾಲಕ
ಬೆಂಗಳೂರು: ಮೀಟರ್ ಬಡ್ಡಿ (Bengaluru Crime) ಕಿರುಕುಳ ಮತ್ತು ಸಾಲದ ಬಾಧೆಯಿಂದ ಬೇಸತ್ತು ಆಟೋ ಚಾಲಕನೊಬ್ಬ (Auto Driver Suicide) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.
ಜೀ ಯೌಸುಫ್ ಜಮಾಲ್‌ದ್ದಿನ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇಂದು ಸಂಜೆ ಸುಮಾರು 4 ಗಂಟೆ ವೇಳೆಗೆ ಈ ಘಟನೆ ನಡೆದಿದೆ.
ಆತ್ಮಹತ್ಯೆಗೂ ಮುನ್ನ ಯೌಸುಫ್ ಜಮಾಲ್‌ದ್ದಿನ್ ವಿಷ ಕುಡಿಯುವ ವಿಡಿಯೋ ಮಾಡಿ ತಮ್ಮ ಸ್ನೇಹಿತರಿಗೆ ಕಳುಹಿಸಿದ್ದಾನೆ. ವಿಡಿಯೋದಲ್ಲಿ ತಾನುಮಾಡಿಕೊಂಡಿದ್ದ ಸಾಲದ ಬಗ್ಗೆ ಹಾಗೂ ಬಡ್ಡಿ ಕಟ್ಟುವಂತೆ ಕಿರುಕುಳ ನೀಡುತ್ತಿದ್ದವರ ಬಗ್ಗೆ ಉಲ್ಲೇಖಿಸಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಭೀಮಾತೀರದ ರೌಡಿಶೀಟರ್ ತುಳಸಿರಾಮ ಚಾಮರಾಜನಗರಕ್ಕೆ ಗಡಿಪಾರು
