ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರೋ ಹೊತ್ತಲ್ಲೇ ರಾಜ್ಯದ ಜನತೆಗೆ ಸರ್ಕಾರ ನೀಡಲು ಮುಂದಾಗಿರೋ `ಶಾಶ್ವತ ವಾಸಸ್ಥಳ ಪ್ರಮಾಣಪತ್ರ-ಪಿಆರ್‌ಸಿ’ (Permanent Residence Certificate-PRC) ಈಗ ತೀವ್ರ ವಿವಾದಕ್ಕೀಡಾಗಿದೆ.
ಪಿಆರ್‌ಸಿ ವಿರೋಧಿಸಿ ಕೇಂದ್ರ ಗೃಹ ಸಚಿವ ಅಮಿತ್‌ಶಾಗೆ (Amit Shah) ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಪತ್ರ ಬರೆದಿದ್ದಾರೆ. ಇದು ದೇಶದ ಭದ್ರತೆ ಹಾಗೂ ಸುರಕ್ಷತೆಗೆ ಧಕ್ಕೆ ತರಲಿದೆ ಅಂತ ಬರೆದಿರೋ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಎಸ್‌ಐಅರ್ (SIR) ಮಧ್ಯೆ ಪಿಆರ್‌ಸಿ ಜಾರಿಗೆ ರಾಜ್ಯ ಮುಂದಾಗಿದೆ. ಈ ಹೊಸ ಪ್ರಮಾಣ ಪತ್ರ ಎಲ್ಲಿಂದ ಬಂತು? ಸಂವಿಧಾನದ ಅಡಿಯಲ್ಲಿ ಭಾರತೀಯರಿಗೆ ಒಂದು ದೇಶ ಒಂದು ಪೌರತ್ವ ಮಾತ್ರ ಇದೆ. ಇದಕ್ಕೆ ವಿರುದ್ಧವಾಗಿ ಪಿಆರ್‌ಸಿ ವಿತರಣೆ ಮಾಡೋಕೆ ಕಾಂಗ್ರೆಸ್ ಹೊರಟಿದೆ ಅಂತ ದೂರಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚೆ, ಉಪಚುನಾವಣೆ ಗೆಲುವಿಗೆ ಕಾರ್ಯತಂತ್ರ: ಬಿ.ವೈ.ವಿಜಯೇಂದ್ರ
ಇದರ ಮಧ್ಯೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ.
ಪಿಆರ್‌ಸಿಗೆ ವ್ಯಾಪಕ ವಿರೋಧ ಏಕೆ?
> ಎಸ್‌ಐಆರ್ ವೇಳೆಯೇ ಉದ್ದೇಶಪೂರ್ವಕವಾಗಿ ಪಿಆರ್‌ಸಿ ಮಾಡಲಾಗುತ್ತಿದೆ
> ಎಸ್‌ಐಆರ್ ವೇಳೆ 2002 ಮತಪಟ್ಟಿಯಲ್ಲಿ ಮತದಾರನ ಹೆಸರು ಇಲ್ಲದೆ ಇದ್ದರೆ ಆತನ ಸಂಬಂಧಿ (ಉದಾ: ಅಪ್ಪ,ಅಮ್ಮ) ಹೆಸರು ಮತ್ತು ಓಟರ್ ಐಡಿ ನಂಬರ್ ಹಾಕಬೇಕು.
> 2002ರಲ್ಲಿ ಸಂಬಂಧಿಕರ ದಾಖಲಾತಿ ಇಲ್ಲದೆ ಹೋದ್ರೆ ಚುನಾವಣೆ ಆಯೋಗ ಸೂಚಿಸಿರೋ 11 ದಾಖಲಾತಿಯಲ್ಲಿ ಯಾವುದಾದ್ರು ಒಂದು ದಾಖಲಾತಿ ನೀಡಬಹುದು (ಉದಾ: ಆಧಾರ್, ಪ್ಯಾನ್, ಬ್ಯಾಂಕ್ ಪಾಸ್‌ಬುಕ್)
> ಚುನಾವಣಾ ಆಯೋಗದ ದಾಖಲಾತಿಯಲ್ಲಿ ವಾಸಸ್ಥಳ ಪ್ರಮಾಣಪತ್ರವೂ ಒಂದು.
> ಈಗ ರಾಜ್ಯ ಸರ್ಕಾರವೂ ಈ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡುತ್ತಿರೋದು ಎಸ್‌ಐಆರ್‌ಗೆ ಅನುಕೂಲ ಆಗುತ್ತದೆ
> ಶಾಶ್ವತ ನಿವಾಸ ಪ್ರಮಾಣ ಪತ್ರ ಸರ್ಕಾರವೇ ನೀಡುತ್ತಿರೋದ್ರಿಂದ ಅಕ್ರಮ ವಲಸಿಗರ ಸೇರ್ಪಡೆಗೆ ಹುನ್ನಾರ.ಇದನ್ನೂ ಓದಿ: ನಿದ್ದೆ ಮಂಪರಿನಲ್ಲಿ ವೇಗವಾಗಿ ಕಾರು ಚಾಲನೆ – ಡಿವೈಡರ್‌ಗೆ ಡಿಕ್ಕಿ, ತಾಯಿ, ಇಬ್ಬರು ಮಕ್ಕಳು ಸಾವು
