ನ್ಯೂಯಾರ್ಕ್: ಪ್ರತಿಷ್ಠಿತ ಮ್ಯಾಡಿಸನ್ ಸ್ಕ್ವೇರ್(Madison Square) ಗಾರ್ಡನ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat) ಅವರು ಅನಿವಾಸಿ ಭಾರತೀಯರನ್ನುದ್ದೇಶಿಸಿ(NRI) ಮಾತನಾಡಲಿರುವ ಕಾರ್ಯಕ್ರಮಕ್ಕೆ ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ(Zohran Mamdani) ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕಾರ್ಯಕ್ರಮ ಮತ್ತು ಅದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಮಾತನಾಡಿದ ಮೇಯರ್ ಮಮ್ದಾನಿ, “ನಾನು ಈ ಸಮಾವೇಶವನ್ನು ಬೆಂಬಲಿಸುವುದಿಲ್ಲ. ಆದರೆ ಇದು ಖಾಸಗಿ ಕಾರ್ಯಕ್ರಮ ಆಗಿರುವುದರಿಂದ ರದ್ದುಗೊಳಿಸುವ ಅಧಿಕಾರ ನಗರ ಆಡಳಿತಕ್ಕೆ ಇದೆಯೇ ಎಂಬುದು ಸ್ಪಷ್ಟವಿಲ್ಲ” ಎಂದು ತಿಳಿಸಿದರು.
ನನಗೆ ತಿಳಿದಿಲ್ಲ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಶತಮಾನೋತ್ಸವದ ಜಾಗತಿಕ ಸಂಪರ್ಕ ಅಭಿಯಾನದ ಭಾಗವಾಗಿ ಮೋಹನ್ ಭಾಗವತ್ ಅವರು ಅಮೆರಿಕ ತಲುಪಿದ ಬೆನ್ನಲ್ಲೇ ಮೇಯರ್ ಈ ಹೇಳಿಕೆ ನೀಡಿದ್ದಾರೆ. ಆಗಸ್ಟ್ 29ರಂದು ನಡೆಯಲಿರುವ ‘ಯೂನಿವರ್ಸಲ್ ಒನ್‌ನೆಸ್’ (ವಿಶ್ವ ಏಕತೆ) ಕಾರ್ಯಕ್ರಮದಲ್ಲಿ ಭಾಗವತ್ ಅವರು ಸುಮಾರು 5,000 ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
VIDEO | On RSS chief Mohan Bhagwat’s event at Madison Square Garden, New York City Mayor Zohran Mamdani says, “… I also stand here as the first Indian American mayor in our city’s history. My mother’s family is all still in India. The vision of India that I was taught by my… pic.twitter.com/2UbDYj7WHu
— Press Trust of India (@PTI_News) August 25, 2026
ನಾನು ಈ ನಗರದ ಇತಿಹಾಸದಲ್ಲೇ ಮೊದಲ ಭಾರತೀಯ ಮೂಲದ ಅಮೆರಿಕನ್ ಮೇಯರ್ ಆಗಿ ನಿಂತಿದ್ದೇನೆ. ನನ್ನ ತಾಯಿಯ ಕುಟುಂಬದವರೆಲ್ಲರೂ ಇನ್ನೂ ಭಾರತದಲ್ಲೇ ಇದ್ದಾರೆ. ನಾನು ಬೆಳೆದು ಕಲಿತ ಭಾರತದ ಕಲ್ಪನೆ ಎಂದರೆ ಅದು ಬಹುತ್ವದ ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕನೂ ಸಮಾನ ಎಂದು ನಂಬುವ ಜಾತ್ಯತೀತ ಗಣರಾಜ್ಯ. ಆದರೆ ಪ್ರತ್ಯೇಕತಾವಾದಿ ಸಿದ್ಧಾಂತದ ಮೇಲೆ ನಿಂತಿರುವ ಚಳವಳಿಯ ಬೆಳವಣಿಗೆಯನ್ನು ನೋಡುವುದು ಅತ್ಯಂತ ಕಳವಳಕಾರಿ. ಹೀಗಾಗಿ ಕೇವಲ ಒಬ್ಬ ಭಾರತೀಯ-ಅಮೆರಿಕನ್ ಆಗಿ ಮಾತ್ರವಲ್ಲದೆ, ಬಣ್ಣ, ಜಾತಿ, ಮತ ಅಥವಾ ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಒಳಗೊಳ್ಳುವ ನಗರದ ಮೇಯರ್ ಆಗಿ ನಾನು ಇದನ್ನು ತೀವ್ರವಾಗಿ ವಿರೋಧಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಇರಾನ್ ಜೊತೆಗೆ ತೈಲ ವ್ಯಾಪಾರ; ಭಾರತ ಮೂಲದ 4 ಕಂಪನಿಗಳು, 3 ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ
ಕಾರ್ಯಕ್ರಮ ಆಯೋಜಿಸಿರುವ ‘ಅಹೆಡ್ ಫೋರಂ’ (AHEAD Forum) ಸಂಸ್ಥೆಯು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿ, “ಈ ಕಾರ್ಯಕ್ರಮವು ‘ವಸುಧೈವ ಕುಟುಂಬಕಂ’ (ವಿಶ್ವವೇ ಒಂದು ಕುಟುಂಬ) ಎಂಬ ಸಾರ್ವತ್ರಿಕ ಸಂದೇಶವನ್ನು ಸಾರುತ್ತದೆ. ಭಿನ್ನಾಭಿಪ್ರಾಯಗಳನ್ನು ಮೀರಿ, ಮಾನವೀಯತೆಯ ಬಂಧವನ್ನು ಗುರುತಿಸಿ, ಪರಸ್ಪರ ಗೌರವ, ಸಾಮರಸ್ಯ ಮತ್ತು ಏಕತೆಯ ಮನೋಭಾವವನ್ನು ಅಳವಡಿಸಿಕೊಳ್ಳಲು ಇದು ಕರೆ ನೀಡುತ್ತದೆ ಎಂದು ಸಮರ್ಥಿಸಿಕೊಂಡಿದೆ.
