ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಕಸದ ಗಾಡಿಗಳ ಕಳ್ಳಾಟ ಬಟಾಬಯಲಾಗಿದೆ. ಶೇ.50ರಷ್ಟು ಕಸದ ಗಾಡಿಗಳು ಫೀಲ್ಡ್‌ಗೆ ಇಳಿಯದೇ ಇದ್ರೂ ಬಿಲ್ ಮಾತ್ರ ಲೂಟಿ ಮಾಡುತ್ತಿದ್ದಾರೆ. ಹೀಗೆ ಅಡ್ಡದಾರಿಯಲ್ಲಿ ದುಡ್ಡು ಮಾಡಲು ನಿಂತವರು ರೆಡ್ ಹ್ಯಾಂಡ್ ಆಗಿ ತಗ್ಲಾಕ್ಕೊಂಡಿದ್ದಾರೆ. ಈ ಕಳ್ಳಾಟಕ್ಕೆ ಬ್ರೇಕ್ ಹಾಕಲು ಜಿಬಿಎ (GBA) ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ.
ಬೆಂಗಳೂರಿನಲ್ಲಿ ಕಸದ ಗಾಡಿಗಳ ಕಳ್ಳಾಟಕ್ಕೆ ಜನರೇ ಸುಸ್ತಾಗಿದ್ದಾರೆ. ಜಿಬಿಎ ಅಧಿಕಾರಿಗಳಿಗೆ ಈ ಕಳ್ಳಾಟ ಗೊತ್ತಿಲ್ಲದ ವಿಚಾರವಲ್ಲ. ಆದರೆ ಇದುವರೆಗೆ ಸೈಲೆಂಟ್ ಆಗಿದ್ದ ಅಧಿಕಾರಿಗಳು ಈಗ ಅಲರ್ಟ್ ಆಗಿದ್ದಾರೆ. ಆಟೋಗಳ ಮೇಲೆ ನಿಗಾ ಇಡಲು ಕೋರಮಂಗಲದಲ್ಲಿ (Koramangala) ಪ್ರಾಯೋಗಿಕವಾಗಿ ಆ್ಯಪ್ ಬಳಕೆಗೆ ಚಾಲನೆ ಕೊಟ್ಟಿದ್ದಾರೆ. ನಗರದಲ್ಲಿ ಇನ್ಮುಂದೆ ಕಸದ ಗಾಡಿಗಳ ಲೈವ್ ಟ್ರ‍್ಯಾಕಿಂಗ್ (Live Tracking) ನಡೆಯಲಿದೆ. ಇದನ್ನೂ ಓದಿ: ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ: 2-3 ದಿನದಲ್ಲಿ ಮಾರ್ಗಸೂಚಿ ಪ್ರಕಟ, ಯಾರಿಗೆ ಸಿಗುತ್ತೆ? ಯಾರಿಗೆ ಸಿಗಲ್ಲ?
ಹೌದು, ರಾಜಧಾನಿಯಲ್ಲಿ ಇನ್ಮುಂದೆ ಕಸದ ವಿಚಾರಕ್ಕೆ ಕಳ್ಳಾಟ ನಡೆಯೋದಿಲ್ಲ. ಕಸದ ಗಾಡಿಗಳ ಲೈವ್ ಟ್ರ‍್ಯಾಕಿಂಗ್‌ಗೆ ಆ್ಯಪ್ ಸಜ್ಜಾಗಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಕಾರು ಪಲ್ಟಿ – ವೈದ್ಯ ಪಾರು
ಕಸದ ಕಳ್ಳಾಟಕ್ಕೆ ಬ್ರೇಕ್ ಹೇಗೆ?
– ಆಟೋಗಳ ಲೈವ್ ಟ್ರ‍್ಯಾಕಿಂಗ್ ಮಾಹಿತಿ ಸಂಗ್ರಹ
– ಕಸದ ಆಟೋ ನಿಗದಿತ ಸಮಯಕ್ಕೆ ಕೆಲಸ ಮಾಡುತ್ತಾ?
– ಕಸದ ವಾಹನಗಳು ಯಾವ ಮಾರ್ಗದಲ್ಲಿ ಸಂಚರಿಸುತ್ತಿವೆ?
– ಎಷ್ಟು ದೂರ ಕ್ರಮಿಸಿವೆ, ಎಷ್ಟು ಗಂಟೆ ಕೆಲಸ ಮಾಡಿದೆ?
– ಜಿಪಿಎಸ್ ಟ್ರ‍್ಯಾಕಿಂಗ್ ತಂತ್ರಜ್ಞಾನ ಹೊಂದಿರುವ ಅಪ್ಲಿಕೇಶನ್
– ಪ್ರಸ್ತುತ 25 ಕಸದ ಆಟೋ ಚಾಲಕರ ಮೊಬೈಲ್‌ಗೆ ಅಳವಡಿಕೆ ಮಾಡಲಾಗಿದೆ.
ಹೀಗೆ ಹೊಸ ಮೊಬೈಲ್ ಅಪ್ಲಿಕೇಶನ್ ಮೂಲಕ ಕಸದ ವಾಹನಗಳ ಮೇಲೆ ಕಣ್ಣಿಡಲು ಪ್ಲಾನ್ ರೆಡಿ ಆಗಿದೆ. ಇದನ್ನೂ ಓದಿ: ರಾತ್ರಿಪೂರ್ತಿ ರಿಪೇರಿ, ಕೊನೆಗೂ ರೈಲು ತಯಾರಿ – ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸಂಚಾರ
