ತುಮಕೂರು: ನೇಪಾಳದ ಪ್ರವಾಹದಲ್ಲಿ (Nepal Flood) ಯು.ಎಸ್ ಪೌರತ್ವ ಹೊಂದಿರುವ ತುಮಕೂರು (Tumakuru) ಮೂಲದ ಇಬ್ಬರು ನಾಪತ್ತೆಯಾಗಿದ್ದಾರೆ.
ತುಮಕೂರು ನಗರದ ನೃಪತುಂಗನ ಬಡಾವಣೆಯ ರಂಗುಸುಧೀರ್ (53), ಕೀರ್ತಿ ಆಚಾರ್ಯ (50) ನಾಪತ್ತೆಯಾಗಿದ್ದಾರೆ. ಯು.ಎಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಇವರು ಆಗಸ್ಟ್ 22ರಂದು ಯು.ಎಸ್‌ನಿಂದ 10 ಜನರ ತಂಡ ನೇಪಾಳಕ್ಕೆ ಹೊರಟಿದ್ದರು. 26ರ ಬೆಳಗ್ಗೆ 8:29ರಂದು ಸಂಬಂಧಿ ಗುರುಪ್ರಸಾದ್ ಎನ್ನುವವರಿಗೆ ಕೊನೆ ಕಾಲ್ ಮಾಡಿದ್ದರು. ಅಲ್ಲಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಪರಿಣಾಮ ಅವರ ತುಮಕೂರಿನ ಮನೆಯ ಸದಸ್ಯರಲ್ಲಿ ಆತಂಕ ಎದುರಾಗಿದೆ. ಇದನ್ನೂ ಓದಿ: ಭೀಕರ ಪ್ರಳಯದ ಸುಳಿಯಲ್ಲಿ ನೇಪಾಳ – 903 ಮಂದಿ ಬಲಿ, 4 ಸಾವಿರಕ್ಕೂ ಅಧಿಕ ಜನರು ಕಣ್ಮರೆ
ಹಲವು ಮೃತದೇಹಗಳ ಗುರುತು ಪತ್ತೆಹಚ್ವುವಂತೆ ಎಂಬೆಸ್ಸಿಯವರು ಕಳಿಸಿದ್ದರು. ಅದರಲ್ಲಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ರಂಗುಸುಧೀರ್ ಅವರ ತಂಗಿ ಸರಿತಾ ನೋವು ತೋಡಿಕೊಂಡಿದ್ದಾರೆ. ಬದುಕಿ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟೆನ್ನಿಸ್ ಕೋರ್ಟ್‌ನಲ್ಲಿ ವಾಂತಿ; ಯುಎಸ್ ಓಪನ್‌ನಿಂದ ಎರಡನೇ ಸುತ್ತಿನಲ್ಲೇ ಜೊಕೊವಿಚ್ ಔಟ್
