ವಾಷಿಂಗ್ಟನ್: ಟೆನಿಸ್ ದಿಗ್ಗಜ, 24 ಗ್ರ‍್ಯಾಂಡ್ ಸ್ಲ್ಯಾಮ್ (Novak Djokovic) ಪ್ರಶಸ್ತಿಗಳ ಒಡೆಯ ನೊವಾಕ್ ಜೊಕೊವಿಚ್‌ಗೆ ಸಿನ್ಸಿನಾಟಿ ಓಪನ್‌ನಲ್ಲಿ ಆಘಾತ ಎದುರಾಗಿದೆ. ಅರ್ಜೆಂಟೀನಾದ ಥಿಯಾಗೊ ಟಿರಾಂಟೆ ವಿರುದ್ಧ ಎರಡನೇ ಸುತ್ತಿನಲ್ಲೇ ಸೋತು ಜೊಕೊವಿಚ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಮೊದಲ ಸೆಟ್‌ನಲ್ಲಿ ಜೊಕೊವಿಚ್ 6-2 ಅಂತರದಲ್ಲಿ ಗೆದ್ದು ಭರ್ಜರಿ ಆರಂಭ ಪಡೆದಿದ್ದರು. ಆದರೆ, ಎರಡನೇ ಹಾಗೂ ಮೂರನೇ ಸೆಟ್‌ಗಳಲ್ಲಿ 6-4, 6-4 ಅಂತರದಲ್ಲಿ ಸೋತು ಪಂದ್ಯ ಕೈಚೆಲ್ಲಿದರು.
ಪಂದ್ಯದ ವೇಳೆ ಜೊಕೊವಿಚ್ ತೀವ್ರ ಸುಸ್ತಿನಿಂದ ಕೋರ್ಟ್‌ನಲ್ಲೇ ವಾಂತಿ ಮಾಡುವಂತೆ ಕಂಡುಬಂದಿದ್ದು, ಬಳಿಕ ವೈದ್ಯರು ಮತ್ತು ಫಿಸಿಯೋಥೆರಪಿಸ್ಟ್‌ಗಳು ಅವರಿಗೆ ಚಿಕಿತ್ಸೆ ನೀಡಿದರು. ಎರಡನೇ ಸೆಟ್‌ನ ಒಂದು ಗೇಮ್ ಬರೋಬ್ಬರಿ 18 ನಿಮಿಷಗಳ ಕಾಲ ನಡೆದಿದ್ದು, ಜೊಕೊವಿಚ್‌ಗೆ ಮತ್ತಷ್ಟು ಕಠಿಣವಾಯಿತು. ಆದರೂ ಜೊಕೊವಿಚ್ ಕೊನೆಯವರೆಗೂ ಆಟ ಮುಂದುವರಿಸಿದರು. ಮೂರನೇ ಸೆಟ್‌ನಲ್ಲಿ 4-4ರ ಹಂತದವರೆಗೂ ಪಂದ್ಯ ಸಮಬಲದಲ್ಲಿತ್ತು. ಆದರೆ, ಟಿರಾಂಟೆ ನಿರ್ಣಾಯಕ ಬ್ರೇಕ್ ಪಡೆದು ಬಳಿಕ ತಮ್ಮ ಸರ್ವ್ ಉಳಿಸಿಕೊಂಡು ವೃತ್ತಿಜೀವನದ ಅತಿದೊಡ್ಡ ಗೆಲುವು ದಾಖಲಿಸಿದರು. ಇದನ್ನೂ ಓದಿ: ಕರ್ನಾಟಕ ನೀರು ಹರಿಸುತ್ತಿದೆಯಲ್ಲ? – ತಮಿಳುನಾಡು ವಾದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ
ಪಂದ್ಯ 2 ಗಂಟೆ 44 ನಿಮಿಷಗಳ ಕಾಲ ನಡೆಯಿತು. ವಿಶ್ವದ 50ನೇ ಶ್ರೇಯಾಂಕದ ಟಿರಾಂಟೆಗೆ ಇದು ಜೊಕೊವಿಚ್ ವಿರುದ್ಧದ ಮೊದಲ ಗೆಲುವಾಗಿದ್ದು, ಅವರ ವೃತ್ತಿಜೀವನದ ಪ್ರಮುಖ ಗೆಲುವು ಎನಿಸಿಕೊಂಡಿದೆ.ಇದನ್ನೂ ಓದಿ: ಇಸ್ಲಾಂ ಧರ್ಮದ ಹೇಳಿಕೆ ವಿವಾದದ ಬೆನ್ನಲ್ಲೇ ರಾಯರೆಡ್ಡಿ ಟೆಂಪಲ್ ರನ್
