– ಮಹಿಳೆಯರ ಟೇಬಲ್ ಟೆನಿಸ್‌ನಲ್ಲಿ ಪಾಕ್ ಮಣಿಸಿದ ಭಾರತ
ಟೋಕಿಯೊ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games 2026) ಭಾರತ ಮತ್ತೊಂದು ಪದಕ ಗೆದ್ದಿದೆ.
ಸೋಮವಾರ ಭಾರತೀಯ ತಂಡವು ತನ್ನ ಪದಕಗಳ ಪಟ್ಟಿಗೆ ಮತ್ತೊಂದು ಬೆಳ್ಳಿ ಪದಕವನ್ನು ಸೇರಿಸಿದೆ. ಹಿಮಾಂಶು ಧಿಲ್ಲೋನ್, ಪಾರ್ಥ್ ಮಾನೆ ಮತ್ತು ರುದ್ರಾಂಕ್ಷ್ ಪಾಟೀಲ್ ಅವರನ್ನೊಳಗೊಂಡ ತಂಡವು ಪುರುಷರ 10 ಮೀಟರ್ ಏರ್ ರೈಫಲ್ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಭಾರತದ ಆರಂಭಿಕ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದನ್ನೂ ಓದಿ: Asian Games 2026 | ಭಾರತದ ಪದಕ ಬೇಟೆ ಆರಂಭ – ಬೆಳ್ಳಿಗೆ ಶೂಟ್
ಇದೇ ವೇಳೆ, ಮಹಿಳಾ ತಂಡದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಪಾಕಿಸ್ತಾನದ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಭಾರತೀಯ ತಂಡವು ತನ್ನ ಪ್ರಾಬಲ್ಯವನ್ನು ಮೆರೆದಿದೆ.
20ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ದಿನವೇ ಭಾರತ ಪದಕದ ಖಾತೆ ತೆರೆದಿತ್ತು. ಶೂಟಿಂಗ್‌ನಲ್ಲಿನ ಎರಡು ಬೆಳ್ಳಿ ಪದಕಗಳನ್ನು ಗೆದ್ದಿತು. ಮಿಶ್ರ ಸಮರ ಕಲೆ (MMA) ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಪದಕಗಳನ್ನು ಖಚಿತ ಪಡಿಸಿದೆ. ಇದನ್ನೂ ಓದಿ: PUBLiC TV Explainer | ಜಪಾನ್‌ನಲ್ಲಿ ಇಂದಿನಿಂದ ಏಷ್ಯನ್ ಗೇಮ್ಸ್ ಆರಂಭ – 1951ರಿಂದ 2026ರವರೆಗೆ ಭಾರತದ ಪದಕ ಬೇಟೆಯ ಕಥೆ

