ನವದೆಹಲಿ: ಮೇ 3 ರಂದು ನಡೆದ ನೀಟ್-ಯುಜಿ 2026 ಪರೀಕ್ಷೆಯಲ್ಲಿ (NEET UG 2026) ಅಕ್ರಮ ನಡೆದಿರುವ ಪ್ರಕರಣದ ಕಿಂಗ್‌ಪಿನ್ ಅನ್ನು ಪೊಲೀಸರು ಬಂಧಿಸಿದ್ದಾರೆ.
2026 ರ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆ ಮತ್ತಷ್ಟು ವಿಸ್ತರಿಸಿದೆ. ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಸಂಘಟಿತ ಅಂತರರಾಜ್ಯ ಜಾಲವನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದೆ. ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಮನೀಶ್ ಯಾದವ್ ಎಂಬಾತನನ್ನು ಜೈಪುರದಲ್ಲಿ ಅರೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಮೇ 3 ರಂದು ನಡೆದ ನೀಟ್ ಪರೀಕ್ಷೆ ರದ್ದು
ಪರೀಕ್ಷಾ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜಾಲವನ್ನು ಸಂಘಟಿಸುವಲ್ಲಿ ಯಾದವ್ ಪ್ರಮುಖ ಪಾತ್ರ ವಹಿಸಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಮತ್ತೊಬ್ಬ ಆರೋಪಿ ರಾಕೇಶ್ ಮಾಂಡವಾರಿಯಾನನ್ನು ಸಹ ಬಂಧಿಸಲಾಗಿದ್ದು, ಸೋರಿಕೆಯಾದ ಪ್ರಶ್ನೆ ಪತ್ರಿಕೆ ಪ್ರಸರಣ ಜವಾಬ್ದಾರಿ ಹೊತ್ತಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.
ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಚರಣೆ ತಂಡ ಮತ್ತು ಬಹು ರಾಜ್ಯಗಳ ಪೊಲೀಸ್ ತಂಡಗಳ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಇದುವರೆಗೆ ಐದು ರಾಜ್ಯಗಳಲ್ಲಿ ಸುಮಾರು ಒಂಬತ್ತು ಜನರನ್ನು ಬಂಧಿಸಲಾಗಿದೆ. ಸುಮಾರು 45 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ರಾಜಸ್ಥಾನದ ಸಿಕಾರ್ ಮತ್ತು ಜುಂಜುನು ಜಿಲ್ಲೆಗಳು, ಡೆಹ್ರಾಡೂನ್‌ನಿಂದ 15 ಶಂಕಿತರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ತನಿಖಾಧಿಕಾರಿಗಳು ಕೋಚಿಂಗ್ ಸೆಂಟರ್‌ಗಳು ಮತ್ತು ಸಂಬಂಧಿತ ಜಾಲಗಳಲ್ಲಿ ದಾಳಿಗಳನ್ನು ನಡೆಸುತ್ತಿದ್ದಾರೆ. ರಾಜಸ್ಥಾನ ಪೊಲೀಸರ ಮಾಹಿತಿಯ ಆಧಾರದ ಮೇಲೆ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪೊಲೀಸರು ಶುಭಂ ಖೈರ್ನಾರ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನೀವು ನೀಟ್ ಪರೀಕ್ಷೆ ಬರೆದಿದ್ರೆ ಮರುನೋಂದಣಿ ಅಗತ್ಯವಿಲ್ಲ – ಹೊಸ ಪ್ರವೇಶ ಪತ್ರ ಕೊಡ್ತಾರೆ, ಎಕ್ಸಾಂ ಫೀಸ್ ವಾಪಸ್

