ನವದೆಹಲಿ: ದೇಶದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪಠ್ಯ ಪರಿಷ್ಕರಣೆ ನಡೆದಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ತನ್ನ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ 1975ರ ರಾಷ್ಟ್ರೀಯ ತುರ್ತು ಪರಿಸ್ಥಿತಿ (National Emergency) ಕುರಿತಾದ ಪ್ರತ್ಯೇಕ ಅಧ್ಯಾಯವನ್ನು ಮೊದಲ ಬಾರಿಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ಇಡೀ ದೇಶಾದ್ಯಂತ ಪರಿಷ್ಕರಿಸಲಾದ ಹೊಸ ಪಠ್ಯಪುಸ್ತಕಗಳು ಜಾರಿಗೆ ಬರುತ್ತಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ (2026-27) ವಿದ್ಯಾರ್ಥಿಗಳು ಇದನ್ನು ಓದಲಿದ್ದಾರೆ.
ಹೊಸ ಪಠ್ಯದಲ್ಲಿ ಏನಿದೆ?
9ನೇ ತರಗತಿಯ ಪ್ರಜಾಪ್ರಭುತ್ವ ರಾಜಕೀಯ 1 (Democratic Politics-I) ಪಠ್ಯಪುಸ್ತಕದ 5ನೇ ಅಧ್ಯಾಯದಲ್ಲಿ ತುರ್ತು ಪರಿಸ್ಥಿತಿಯನ್ನು “ಪ್ರಜಾಪ್ರಭುತ್ವಕ್ಕೆ ಎದುರಾದ ಸವಾಲು” ಎಂದು ವ್ಯಾಖ್ಯಾನಿಸಲಾಗಿದೆ. 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಜಾರಿಗೊಳಿಸಿದ 21 ತಿಂಗಳುಗಳ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಾಗರಿಕರ ವಾಕ್ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ಹೇಗೆ ಕಸಿದುಕೊಳ್ಳಲಾಯಿತು ಎಂಬುದನ್ನು ವಿವರಿಸಲಾಗಿದೆ.
ಪತ್ರಿಕೋದ್ಯಮದ ಕತ್ತು ಹಿಸುಕಿ, ಮಾಧ್ಯಮಗಳ ಮೇಲೆ ಅಂದಿನ ಸರ್ಕಾರ ಹೇರಿದ್ದ ಕಠಿಣ ‘ಸೆನ್ಸಾರ್‌ಶಿಪ್’ ಹಾಗೂ ವಿರೋಧ ಪಕ್ಷದ ನಾಯಕರ ಸರಣಿ ಬಂಧನಗಳ ಇತಿಹಾಸವನ್ನು ತಿಳಿಸಲಾಗಿದೆ. ಈ ಕಪ್ಪು ಅವಧಿಯಲ್ಲಿ ಸರ್ಕಾರದ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಉಂಟಾದ ಸಂಘರ್ಷಗಳು ಹಾಗೂ ಗರಿಷ್ಠ ಮಟ್ಟದ ಅಧಿಕಾರ ದುರ್ಬಳಕೆಯ ಒಟ್ಟಾರೆ ಚಿತ್ರಣವನ್ನು ವಿದ್ಯಾರ್ಥಿಗಳಿಗೆ ಕಣ್ಣಿಗೆ ಕಟ್ಟುವಂತೆ ಪರಿಚಯಿಸಲಾಗಿದೆ. ಇದನ್ನೂ ಓದಿ: NCERT ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ
Emergency 1975 wasn’t a ‘dark chapter’—it was Congress’s true face: dictatorship, forced sterilizations, mass arrests, and total suppression of democracy.
Today, they lecture us on ‘democracy’ while their history screams tyranny & excess.
Indira’s Emergency exposed them… pic.twitter.com/mmTVDXvsHN
— Shehzad Jai Hind (Chowkidar as per INC ecosystem) (@Shehzad_Ind) June 25, 2026
9ನೇ ತರಗತಿಗೆ ಶಿಫ್ಟ್ ಆಗಿದ್ದೇಕೆ?
ಇಲ್ಲಿಯವರೆಗೆ ‘ತುರ್ತು ಪರಿಸ್ಥಿತಿ’ಯ ಇತಿಹಾಸ ಮತ್ತು ಅದರ ರಾಜಕೀಯ ಪರಿಣಾಮಗಳ ಕುರಿತಾದ ಅಧ್ಯಾಯಗಳು ಕೇವಲ 12ನೇ ತರಗತಿಯ ರಾಜಕೀಯ ವಿಜ್ಞಾನ (Political Science) ಪಠ್ಯಪುಸ್ತಕದಲ್ಲಿ ಮಾತ್ರ ಇರುತ್ತಿದ್ದವು.
ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಮಹತ್ವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬರಬಹುದಾದ ಆಪತ್ತುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೇ (ಹೈಸ್ಕೂಲ್ ಹಂತದಲ್ಲೇ) ರಾಜಕೀಯ ಪ್ರಜ್ಞೆ ಮೂಡಿಸುವುದು ಅತ್ಯಗತ್ಯ. ಇದೇ ಕಾರಣಕ್ಕೆ ಇದನ್ನು 9ನೇ ತರಗತಿಯ ಪಠ್ಯಕ್ರಮಕ್ಕೆ ತರಲಾಗಿದೆ.
Delhi: On NCERT introducing a section on the Emergency in the Class IX textbook, Congress MP Jebi Mather says, “Does NCERT know that before independence, the Congress Party leaders Mahatma Gandhi, Pandit Jawaharlal Nehru, Abul Kalam Azad, Sardar Vallabhbhai Patel, and Subhas… pic.twitter.com/DVxWdPxsKA
— IANS (@ians_india) June 25, 2026
ಚರ್ಚೆಗೆ ಕಾರಣವಾದ ನಿರ್ಧಾರ
ಎನ್‌ಸಿಇಆರ್‌ಟಿಯ ಈ ದಿಢೀರ್ ನಡೆ ಸದ್ಯ ದೇಶಾದ್ಯಂತ ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರವು ಶೈಕ್ಷಣಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಇತಿಹಾಸವನ್ನು ನೆಗೆಟಿವ್ ಆಗಿ ಬಿಂಬಿಸಲು ಮತ್ತು ತನ್ನ ರಾಜಕೀಯ ಕಾರ್ಯಸೂಚಿಯನ್ನು (Agenda) ಮಕ್ಕಳ ತಲೆಯಲ್ಲಿ ತುಂಬಲು ಪಠ್ಯಪುಸ್ತಕಗಳನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಕಿಡಿಕಾರಿವೆ.
Delhi: On NCERT introducing a section on the Emergency in the Class IX textbook, Congress MP Jebi Mather says, “Does NCERT know that before independence, the Congress Party leaders Mahatma Gandhi, Pandit Jawaharlal Nehru, Abul Kalam Azad, Sardar Vallabhbhai Patel, and Subhas… pic.twitter.com/DVxWdPxsKA
— IANS (@ians_india) June 25, 2026
ದೇಶದ ನೈಜ ಇತಿಹಾಸವನ್ನು ಮುಂದಿನ ಪೀಳಿಗೆಗೆ ಮುಚ್ಚಿಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಏರಿಳಿತಗಳು ಮತ್ತು ಅಂದಿನ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ವಿದ್ಯಾರ್ಥಿಗಳು ತಿಳಿಯಲೇಬೇಕು ಎಂದು ಆಡಳಿತ ಪಕ್ಷವು ಈ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದೆ.
