ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದ್ದು, ನಂದಿನಿ ಹಾಲಿನ(Nandini Milik) ದರ ಏರಿಕೆ ಬಹುತೇಕ ನಿಶ್ಚಿತವಾಗಿದೆ. ಪ್ರತಿ ಲೀಟರ್ ಹಾಲಿನ ಬೆಲೆ 4 ರಿಂದ 5 ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.
ಬೆಂಗಳೂರಿನ ಕರ್ನಾಟಕ ಹಾಲು ಮಹಾಮಂಡಳ (KMF) ಕಚೇರಿಯಲ್ಲಿ ಇಂದು ಮಹತ್ವದ ಸರ್ವಸದಸ್ಯರ ಸಭೆ ಜರುಗಿತು. ಸಭೆಯಲ್ಲಿ ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳ ಪ್ರಮುಖರು ಭಾಗವಹಿಸಿದ್ದು, ಹೈನುಗಾರರ ಹಿತದೃಷ್ಟಿಯಿಂದ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 10 ರೂ. ಹೆಚ್ಚಳ ಮಾಡುವಂತೆ ಒಕ್ಕೂಟಗಳು ಪ್ರಬಲ ಬೇಡಿಕೆ ಮಂಡಿಸಿವೆ.
ಒಕ್ಕೂಟಗಳ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಂಎಫ್ ಲೀಟರ್‌ಗೆ 4 ರೂ ನಿಂದ 5 ರೂ. ಹೆಚ್ಚಿಸಲು ಚಿಂತನೆ ನಡೆಸಿದ್ದು, ಈ ತಿಂಗಳಾಂತ್ಯಕ್ಕೆ ನೂತನ ದರ ಜಾರಿಗೆ ಬರುವ ಸಾಧ್ಯತೆಯಿದೆ. ಇದನ್ನೂ ಓದಿ: ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು; ಶೀಘ್ರದಲ್ಲೇ ಪಟ್ಟಿ ರಿಲೀಸ್
ಸಂಭಾವ್ಯ ಪರಿಷ್ಕೃತ ದರಗಳ ಪಟ್ಟಿ
* ಟೋನ್ಡ್ ಹಾಲು (Toned Milk): 46 ರಿಂದ 50
* ಶುಭಂ ಹಾಲು (Shubham Milk): 52 ರಿಂದ 56
* ಸಮೃದ್ಧಿ ಹಾಲು (Samruddhi Milk): 55 ರಿಂದ 59
* ಸ್ಪೆಷಲ್ ಹಾಲು (Special Milk): 52 ರಿಂದ 56
* ಡಬಲ್ ಟೋನ್ಡ್ ಹಾಲು (Double Toned Milk): 43 ರಿಂದ 47
* ಆರೆಂಜ್ ಹಾಲು (Orange Milk): 50 ರಿಂದ 54
* ಗ್ರೀನ್ ಸ್ಪೆಷಲ್ (Green Special Milk): 50 ರಿಂದ 54

