Bengaluru CityDistrictsKarnatakaLatestMain Post

ಸಿದ್ದರಾಮಯ್ಯ, ರಾಜಕೀಯವಾಗಿ ಮೂಲೆಗುಂಪಾಗೋ ದಿನ ದೂರವಿಲ್ಲ: ಕಟೀಲ್ ತಿರುಗೇಟು

-ಸಿದ್ದರಾಮಯ್ಯ ಎಂದರೆ ಡೋಂಗಿತನ, ಹಿಂದೂ ವಿರೋಧಿತನದ ಸಂಕೇತ

ಬೆಂಗಳೂರು: ಸಿದ್ದರಾಮಯ್ಯ, ರಾಜಕೀಯವಾಗಿ ಮೂಲೆಗುಂಪಾಗುವ ದಿನ ದೂರ ಉಳಿದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ಜನಸ್ಪಂದನ ಸಮಾವೇಶ ಕುರಿತಂತೆ ಸಿದ್ದರಾಮಯ್ಯ ಅವರು ಟೀಕೆ ವ್ಯಕ್ತಪಡಿಸಿದ ಹಿನ್ನೆಲೆ ನಳಿನ್ ಕುಮಾರ್ ಕಟೀಲ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಸಿದ್ದರಾಮಯ್ಯ, ರಾಜಕೀಯವಾಗಿ ಮೂಲೆಗುಂಪಾಗುವ ದಿನ ದೂರವಿಲ್ಲ. ಮೋದಿಯವರ ಮಂಗಳೂರು ಕಾರ್ಯಕ್ರಮ ಮತ್ತು ದೊಡ್ಡಬಳ್ಳಾಪುರದ ಜನಸ್ಪಂದನಕ್ಕೆ ಸ್ವಯಂಪ್ರೇರಿತ ಜನಸಾಗರ ಬಂದಿತ್ತು. ಇದನ್ನು ಗಮನಿಸಿ ಸಿದ್ದರಾಮಯ್ಯರು ಸ್ಥಿಮಿತ ಕಳೆದುಕೊಂಡಂತಿದೆ. ಅದಕ್ಕಾಗಿಯೇ ಅವರು ತಮ್ಮ ಸುಳ್ಳಿನ ಸರಮಾಲೆ, ವ್ಯರ್ಥ ಆರೋಪಗಳ ಮೂಲಕ ನಾಟಕ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕನ್ನಡನಾಡಿನ ಜನತೆ ನಿರ್ಧರಿಸಿದ್ದಾರೆ. ಅಧಿಕಾರ ಗಳಿಸುವ ಕಾಂಗ್ರೆಸ್ಸಿಗರ ಕನಸು ಕೇವಲ ಹಗಲುಗನಸಾಗಿ ಉಳಿಯಲಿದೆ. ಸಿದ್ದರಾಮಯ್ಯರನ್ನು ಜನರು ಸೋಲಿಸಿ ರಾಜಕೀಯವಾಗಿ ಮೂಲೆಗುಂಪಾಗುವಂತೆ ಮಾಡಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ನಮಗೆ ಸವಾಲು ಹಾಕುವ ಧಮ್ ನಿಮಗೆ ಇಲ್ಲ: ಬೊಮ್ಮಾಯಿ ವಿರುದ್ಧ ಸಿದ್ದು ಕಿಡಿ

ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ. ಸಿದ್ದರಾಮಯ್ಯ ಎಂದರೆ ಡೋಂಗಿತನ, ಹಿಂದೂ ವಿರೋಧಿತನದ ಸಂಕೇತ. ರಾಷ್ಟ್ರವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸುವ ಮತ್ತು ಧರ್ಮಗಳನ್ನು ಒಡೆಯುವ ಸಿದ್ದರಾಮಯ್ಯ. ಒಮ್ಮೆ ನಿರುದ್ಯೋಗ ಸಮಸ್ಯೆ ಎನ್ನುವ ಸಿದ್ದರಾಮಣ್ಣ, ಮತ್ತೆ ಪ್ಲೇಟ್ ಬದಲಿಸಿ ಶೇಕಡಾ 40 ಭ್ರಷ್ಟಾಚಾರ ಎಂದು ರಾಗ ಎಳೆಯುತ್ತಾರೆ. ಅರ್ಕಾವತಿ ಹಗರಣ ಸೇರಿ ವಿವಿಧ ಭ್ರಷ್ಟಾಚಾರ ಹಗರಣಗಳನ್ನು ಬಿಜೆಪಿ ಸರ್ಕಾರ ಬಯಲಿಗೆ ಎಳೆಯಲಿದೆ. ಇದು ಗೊತ್ತಾಗಿ ಸಿದ್ದರಾಮಣ್ಣನಿಗೆ ಚಳಿಜ್ವರ ಬಂದಂತಿದೆ. ಅದಕ್ಕಾಗಿಯೇ ಸದಾ ಪ್ರಚಾರದಲ್ಲಿರಲು ಸುಳ್ಳು ಸುಳ್ಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನವರಿಗೆ ತಾಕತ್, ಧಮ್ ಇದ್ದರೇ ನಮ್ಮನ್ನು ತಡೆಯಲಿ: ಬೊಮ್ಮಾಯಿ ಸವಾಲು

ಸಿದ್ದರಾಮಯ್ಯ ಬಾಯಿ ಚಪಲಕ್ಕಾಗಿ ಮಾತನಾಡುತ್ತಿದ್ದಾರೆ. ಮಳೆ ಹಾನಿ ಸಂಬಂಧ ನೀವು ಮತ್ತು ನಿಮ್ಮ ಪಕ್ಷದವರು ಎಷ್ಟು ಪ್ರವಾಸ ಮಾಡಿದ್ದೀರಿ? ನಿನ್ನೆ ಕಾಟಾಚಾರಕ್ಕೆ ಬಾದಾಮಿಗೆ ಹೋಗಿ ಬಂದಿದ್ದಲ್ಲವೇ? ನಿಮ್ಮ ಅಸಲಿಯತ್ತು ನಮಗೆ ಮಾತ್ರವಲ್ಲದೆ ಜನರಿಗೂ ಗೊತ್ತಿದೆ. ನಕಲಿ ಸಮಾಜವಾದಿಗಳು, ನಕಲಿ ಬುದ್ಧಿಜೀವಿಗಳ ಜೊತೆ ಸೇರಿ ಮಾತನಾಡುವ ನಿಮ್ಮನ್ನು ಜನರು ನಂಬಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Back to top button