– ಜನಸ್ಪಂದನವೇ 2023ರ ವಿಜಯೋತ್ಸವ ಆಗಲಿದೆ
– ಕಾಂಗ್ರೆಸ್ ದುಷ್ಟ ಕೂಟದ ನಾಟಕಕ್ಕೆ ಅಂತ್ಯ ಹಾಡಬೇಕಿದೆ
– ಕಾಂಗ್ರೆಸ್ ದುಷ್ಟ ಕೂಟದ ನಾಟಕಕ್ಕೆ ಅಂತ್ಯ ಹಾಡಬೇಕಿದೆ
ಬೆಂಗಳೂರು: ತಾಕತ್ ಇದ್ದರೆ, ಧಮ್ ಇದ್ದರೇ ನಮ್ಮನ್ನು ತಡೆಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ನೇರವಾಗಿಯೇ ಕಾಂಗ್ರೆಸ್ ನಾಯಕರಿಗೆ ಸವಾಲು ಎಸೆದಿದ್ದಾರೆ.
ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2018ರಲ್ಲೇ ಬಿಜೆಪಿ ಅಧಿಕಾರ ಬರಬೇಕಿತ್ತು. ಆದರೆ ಅಧಿಕಾರದ ಆಸೆಗಾಗಿ, ಬಹುಮತವಿಲ್ಲದಿದ್ದರೂ ಜೆಡಿಎಸ್(JDS) ಜೊತೆ ಕೈಜೋಡಿಸಿದ ಸಿದ್ದರಾಮಯ್ಯನವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಸಿದ್ದರಾಮಯ್ಯ ಹೇಳುವುದೆಲ್ಲ ನಿಜ ಆಗುವುದಿಲ್ಲ. ಯಾವಾಗಾಲೂ ನಮ್ಮಪ್ಪರಾಣೆ ಆಗಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರು ಹೇಳಿರುವುದೆಲ್ಲವೂ ಉಲ್ಟಾ ಹೊಡೆಯುತ್ತದೆ ಎಂದು ಟೀಕಿಸಿದರು.
Advertisement
Advertisement
ಇನ್ನೂ ಸ್ವಲ್ಪ ದಿನ ಹೋದರೆ ಕಾಂಗ್ರೆಸ್‍ನವರಿಗೆ(Congress) ಜನ ಛೀ, ಥೂ ಎನ್ನುತ್ತಾರೆ. ಕಾಂಗ್ರೆಸ್‍ನವರ ಹಗರಣಗಳನ್ನು ಬಯಲಿಗೆಳೆಯುತ್ತೇವೆ. ನಾವು ಎಲ್ಲ ರಂಗದಲ್ಲೂ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಾಂಗ್ರೆಸ್ಸಿನವರ ಕನಸು ಕನಸಾಗಿಯೇ ಉಳಿಯುತ್ತದೆ. ಜನ ಕಾಂಗ್ರೆಸ್ಸಿಗರ ಭ್ರಷ್ಟಾಚಾರ ನೋಡಿದ್ದಾರೆ. ಮತ್ತೆ ಕಾಂಗ್ರೆಸ್ ಬರಲು ಅವಕಾಶ ಕೊಡಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಬಿಜೆಪಿಯನ್ನು(BJP) ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಇದೇ ವೇಳೆ ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದ ಹಗರಣಗಳ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನವರದ್ದು 100% ಸರ್ಕಾರವಾಗಿದೆ. ಕೆಲಸ ಮಾಡದೇ ಬಿಲ್ ಪಡೆಯುವ ಪಕ್ಷ ಕಾಂಗ್ರೆಸ್‍ನಾಗಿದೆ. ಕಾಂಗ್ರೆಸ್ ಕಾಲದಲ್ಲಿ ಲ್ಯಾಪ್‍ಟಾಪ್ ಹಗರಣ ಆಯ್ತು, ಹಾಸಿಗೆ ದಿಂಬು ಹಗರಣ ಆಯ್ತು. ಪಿಎಸ್‍ಐ ನೇಮಕಾತಿಯಲ್ಲೂ ಅಕ್ರಮ ಆಯ್ತು. ಹೀಗೆ ಹೇಳುತ್ತಾ ಹೋದರೆ ಕಾಂಗ್ರೆಸ್ ಅಕ್ರಮ ಬೇಕಾದಷ್ಟಿದೆ. ಕಾಂಗ್ರೆಸ್‍ನ ದುಷ್ಟ ಕೂಟದ ನಾಟಕಕ್ಕೆ ಅಂತ್ಯ ಹಾಡಬೇಕಿದೆ ಎಂದು ತಿಳಿಸಿದರು.
Advertisement
ಅನ್ನಭಾಗ್ಯದ ಅವ್ಯವಹಾರ ತನಿಖೆ ನಡೆಸುತ್ತಿದ್ದ ಅನುರಾಗ್ ತಿವಾರಿ ಉತ್ತರ ಪ್ರದೇಶದಲ್ಲಿ ಅನುಮಾನಸ್ಪದವಾಗಿ ಸಾವೀಗಿಡಾದರು. ಇದು ಸಿದ್ದರಾಮಯ್ಯನವರ(Siddaramaiah) ಆಡಳಿತದ ಪಾರದರ್ಶಕತೆಯಾಗಿದೆ. ಅನ್ನಭಾಗ್ಯಕ್ಕೂ ಕನ್ನ ಹಾಕಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ತೆರಿಗೆ ಸಂಗ್ರಹಣೆಯಲ್ಲಿ ಸೋರಿಕೆಯನ್ನು ತಡೆಗಟ್ಟಿ, ಸಮರ್ಪಕವಾಗಿ ತೆರಿಗೆ ಸಂಗ್ರಹಿಸಿ, ನಿಗದಿತ ಗುರಿಯನ್ನು ತಲುಪಲಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ಸಿನವರಿಗೆ ಎತ್ತಿನಹೊಳೆ ಯೋಜನೆ ಬಗ್ಗೆ ಗೊತ್ತಿಲ್ಲ. ಎತ್ತಿನ ಹೊಳೆ ಎಲ್ಲಿದೆ ಅಂತ ಅವರಿಗೆ ಗೊತ್ತಿಲ್ಲ. ಯೋಜನೆ ಆರಂಭಿಸಿದವರು ಯಡಿಯೂರಪ್ಪನವರಾಗಿದ್ದು, ಇಲ್ಲೇ ಬಂದು ಕಾಂಗ್ರೆಸ್ ನಾಯಕರು ಎತ್ತಿನ ಹೊಳೆ ಆಗಲ್ಲ ಎಂದಿದ್ದರು. ಈಗ ಯೋಜನೆ ನಮ್ದು ಎನ್ನುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ಇದೇ ವರ್ಷ ಪೂರ್ತಿ ಮಾಡುತ್ತೇವೆ. ಇದೇ ವರ್ಷ ಎತ್ತಿನಹೊಳೆ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು. ಆದರೆ ಕರ್ನಾಟಕದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರು ಸಮರ್ಥವಾಗಿ ನಿಭಾಯಿಸಿದ್ದರು. ಅಷ್ಟೇ ಅಲ್ಲದೇ ನಾವು ಜಾತಿ, ಧರ್ಮಗಳನ್ನು ನೋಡದೇ ಎಲ್ಲರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಿದ್ದೇವೆ. ನಮ್ಮ ಕರ್ನಾಟಕದ ಮಕ್ಕಳು ಇತರರಿಗೂ ಪೈಪೋಟಿ ನೀಡುವಂತಹ ವಾತಾವರಣ ಕಲ್ಪಿಸುತ್ತಿದ್ದೇವೆ. ಹಾಲು ಉತ್ಪಾದಕರಿಗೆ ಕ್ಷೀರ ಅಭಿವೃದ್ಧಿ ಬ್ಯಾಂಕ್, ಎಸ್‍ಸಿ, ಎಸ್‍ಟಿ ಸಮುದಾಯದವರಿಗೆ 75 ಯುನಿಟ್ ಉಚಿತ ವಿದ್ಯುತ್ ಮುಂತಾದುವು ನಮ್ಮ ವಿನೂತನ ಯೋಜನೆಗಳಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ವಿಧಾನಸೌಧದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಇದೊಂದು ದಾಖಲೆಯ ಸಮಾವೇಶವಾಗಿದೆ. ಈ ಸಮಾವೇಶ ನನಗೆ ಇನ್ನಷ್ಟು ಶಕ್ತಿ ಕೊಟ್ಟಿದೆ. ಇನ್ನಷ್ಟು ಜನಸೇವೆ ಮಾಡಲು ಶಕ್ತಿ ಕೊಟ್ಟಿದೆ. ಸುಧಾಕರ್, ಮುನಿರತ್ನ, ಎಂಟಿಬಿಗೆ ಧನ್ಯವಾದ. ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿಸಿ ಸಾಧನೆ ಮಾಡಿದ್ದಾರೆ ಇದಕ್ಕೆ ಸಹಕರಿಸಿದ ಕಾರ್ಯಕರ್ತರಿಗೆ ಎಲ್ಲರಿಗೂ ಕೃತಜ್ಞತೆ ಹೇಳಿದರು. ಇದನ್ನೂ ಓದಿ: ಮೋದಿ ಪ್ರಧಾನಿಯಾಗಿ ಇರುವವರೆಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಲ್ಲ, ಇದು ನಮ್ಮ ಶಪಥ – ಬಿಎಸ್‌ವೈ
ಇನ್ನೂ ಕೆಲವೇ ದಿನಗಳಲ್ಲಿ ಜನಸ್ಪಂದನ ಸಮಾವೇಶವನ್ನು ಪ್ರಾರಂಭಿಸಲಿದ್ದು, ಇಲ್ಲಿಂದ ಆರಂಭ ಮಾಡುತ್ತೇವೆ. ಹಳ್ಳಿಗಳ್ಳಿಗೂ ನಮ್ಮ ಕಾರ್ಯಕ್ರಮ ತಲುಪಿಸುತ್ತೇವೆ. ಇನ್ನು ಸ್ವಲ್ಪ ದಿನಗಳಲ್ಲಿ ಕಾಂಗ್ರೆಸ್ಸಿನವರು ಎಲ್ಲ ಹಗರಣ ಜನರ ಮುಂದಿಡುತ್ತೇವೆ. ಈ ಜನಸ್ಪಂದನವೇ 2023ರ ವಿಜಯೋತ್ಸವದಲ್ಲಿ ಪರಿವರ್ತನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಡಬಲ್ ಸ್ಟೇರಿಂಗ್, ಡಬಲ್ ಡೋರ್ ಸರ್ಕಾರ ಆಗುತ್ತೆ – ಡಿಕೆಶಿ, ಸಿದ್ದು ಕಾಲೆಳೆದ ಸುಧಾಕರ್
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]