ಚಂಢೀಗಡ: ಶುಭಮನ್ ಗಿಲ್ (Shubman Gill) ಅವರ ಅಮೋಘ ಶತಕದ ಬಲದಿಂದ ಕ್ವಾಲಿಫೈಯರ್-2ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ಗುಜರಾತ್ ಟೈಟಾನ್ಸ್ (Gujarat Titans) ಗೆದ್ದು ಬೀಗಿದೆ. ಮೇ 31 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ (RCB) ವಿರುದ್ಧ ಮುಖಾಮುಖಿಯಾಗಲಿದೆ.
ಮಹಾರಾಜ ಯಾದವೀಂದ್ರ ಅಂತರಾಷ್ಟ್ರೀಯ (Maharaja Singh PCA Stadium) ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಿಟಿ ತಂಡದ ನಾಯಕ 53 ಎಸೆತಗಳಲ್ಲಿ 104 ರನ್ ಸಿಡಿಸಿ ಮಹತ್ವದ ದಾಖಲೆಯೊಂದನ್ನ ನಿರ್ಮಿಸಿದ್ದಾರೆ. ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ: ಶತಕ ಸಿಡಿಸಿ ಗುಜರಾತ್ ಫೈನಲ್‌ಗೆ ಕರೆದೊಯ್ದ ಕ್ಯಾಪ್ಟನ್ ಗಿಲ್ – ಟ್ರೋಫಿಗಾಗಿ ಆರ್‌ಸಿಬಿ ವಿರುದ್ಧ ಫೈಟ್
𝐖𝐄’𝐑𝐄 𝐂𝐎𝐌𝐈𝐍𝐆 𝐇𝐎𝐌𝐄 𝐅𝐎𝐑 𝐓𝐇𝐄 𝐅𝐈𝐍𝐀𝐋 😍😍😍#3in5 pic.twitter.com/1gy9fITg8R
— Gujarat Titans (@gujarat_titans) May 29, 2026
ಈ ಹಿಂದೆ ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್ ವಾರ್ನರ್ (David Warner) ಹೈದರಾಬಾದ್ (Hyderabad) ತಂಡದ ನಾಯಕರಾಗಿದ್ದಾಗ ಅಜೇಯ 93 ರನ್ ಬಾರಿಸಿ ಈ ದಾಖಲೆ ಬರೆದಿದ್ದರು. ಬಳಿಕ ಆರ್‌ಸಿಬಿ ನಾಯಕ ರಜತ್ ಪಟಿದಾರ್ ಕೂಡ ಅಜೇಯ 93 ರನ್ ಸಿಡಿಸಿದ್ದರು. ಇದೀಗ ಶತಕ ಬಾರಿಸುವ ಮೂಲಕ ಗಿಲ್ ಇವರಿಬ್ಬರನ್ನು ಹಿಂದಿಕ್ಕಿದ್ದಾರೆ.
ಐಪಿಎಲ್ ಪ್ಲೇಆಫ್ ಪಂದ್ಯವೊಂದರಲ್ಲಿ ಗರಿಷ್ಠ ರನ್ ಕಾಲೆಹಾಕಿದ ನಾಯಕರು:
1. ಶುಭಮನ್ ಗಿಲ್: 2026 ಕ್ವಾಲಿಫೈಯರ್-2, ರಾಜಸ್ಥಾನ ವಿರುದ್ಧ 104 ರನ್
2. ರಜತ್ ಪಾಟಿದಾರ್: 2026 ಕ್ವಾಲಿಫೈಯರ್ 1, ಜಿಟಿ ವಿರುದ್ಧ ಅಜೇಯರಾಗಿ 93 ರನ್
3. ಡೇವಿಡ್ ವಾರ್ನರ್: 2016 ಕ್ವಾಲಿಫೈಯರ್ 2, ಗುಜರಾತ್ ಲಯನ್ಸ್ ವಿರುದ್ಧ ಅಜೇಯರಾಗಿ 93 ರನ್
4. ಶ್ರೇಯಸ್ ಅಯ್ಯರ್: 2025 ಕ್ವಾಲಿಫೈಯರ್ 2, ಮುಂಬೈ ವಿರುದ್ಧ ಅಜೇಯರಾಗಿ 87 ರನ್ ಗಳಿಸಿದ್ದಾರೆ.
5. ಆಡಮ್ ಗಿಲ್‌ಕ್ರಿಸ್ಟ್: 2009 ಸೆಮಿಫೈನಲ್, ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 85 ರನ್ ಕಲೆಹಾಕಿದ್ದಾರೆ.
FINAL DESTINATION: HOME 🏟️ 🏆#3in5 pic.twitter.com/YLWcb1oilX
— Gujarat Titans (@gujarat_titans) May 29, 2026
ಮೂರನೇ ಬಾರಿಗೆ ಫೈನ್‌ಲ್ ಪ್ರವೇಶಿಸಿದ ಜಿಟಿ:
ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿಯ 96 ರನ್‌ಗಳ ಇನ್ನಿಂಗ್ಸ್ನ ಹೊರತಾಗಿಯೂ, ರಿಯಾನ್ ಪರಾಗ್ ಪಡೆ ಜಿಟಿ ವಿರುದ್ಧ ಸೋಲನುಭವಿಸಿತು. ಈ ಮೂಲಕ ಗಿಲ್ ಪಡೆ ಆಡಿರುವ 5 ಋತುಗಳಲ್ಲಿ 3ನೇ ಬಾರಿ ಫೈನಲ್ ತಲುಪಿದೆ.
ಜಿಟಿ ತನ್ನ ಚೊಚ್ಚಲ ಆವೃತ್ತಿ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಆಗ ಹಾರ್ದಿಕ್ ಪಾಂಡ್ಯ (Hardik Pandya) ನಾಯಕ ಆಗಿದ್ದರು. ಬಳಿಕ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ ಫೈಟ್‌ನಲ್ಲಿ ಪರಾಭವಗೊಂಡಿತ್ತು. 2025 ರಲ್ಲಿ ಗಿಲ್ ನಾಯಕತ್ವದಲ್ಲಿ ಪ್ಲೇ ಆಫ್ ಪ್ರವೇಶಿಸಿದ್ರೂ ಮುಂಬೈ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಹೊರನಡೆದಿತ್ತು. ಇದೀಗ 3ನೇ ಬಾರಿ ಫೈನಲ್ ತಲುಪಿದ್ದು, ಪ್ರಶಸ್ತಿಗಾಗಿ ಆರ್‌ಸಿಬಿ (RCB) ವಿರುದ್ಧ ಕಾದಾಟ ನಡೆಸಲಿದೆ. ಇದನ್ನೂ ಓದಿ: ವೈಭವ್ ಆರ್ಭಟಕ್ಕೆ ದಿಗ್ಗಜರ ದಾಖಲೆಗಳೇ ಧೂಳೀಪಟ
Clutch game, clutch performance. 👑 pic.twitter.com/hCvoUqooos
— Gujarat Titans (@gujarat_titans) May 29, 2026
