Crime
ಪಕ್ಕದ ಮನೆಯವ್ರಿಂದ್ಲೇ ಹರಿಕಥೆ ಕಲಾವಿದನ ಮನೆ ಧ್ವಂಸ

ಮೈಸೂರು: ಹರಿಕಥೆ ಕಲಾವಿದರೊಬ್ಬರ ಮನೆಯನ್ನು ಪಕ್ಕದ ಮನೆಯವರೇ ಧ್ವಂಸಗೊಳಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಲ್ಲುಪುರ ಗ್ರಾಮದಲ್ಲಿ ನಡೆದಿದೆ.
ಹರಿಕಥೆ ಕಲಾವಿದ ಸಚಿನ್ ಮನೆಯನ್ನು ಪಕ್ಕದ ಮನೆಯ ನಿವಾಸಿ ಸುರೇಶ್ ಧ್ವಂಸಗೊಳಿಸಿದ್ದಾರೆ. ಈ ಎರಡೂ ಮನೆಯ ಸದಸ್ಯರ ಮಧ್ಯೆ ಮೋರಿ ವಿಚಾರವಾಗಿ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ವೈಯಕ್ತಿಕ ದ್ವೇಷಕ್ಕೆ ಮನೆ ಧ್ವಂಸ ಮಾಡಿರುವ ಆರೋಪ ಕೇಳಿಬಂದಿದೆ.
ದ್ವೇಷದ ಹಿನ್ನೆಲೆ ಮನೆಯ ಮೇಲ್ಛಾವಣಿ ಮೇಲೆ ಕಲ್ಲು ಎಸೆದಿದ್ದಾರೆ. ಮನೆಯ ಪೀಠೋಪಕರಣ, ಟಿವಿ, ಫ್ರಿಡ್ಜ್ ಹಾಗೂ ವಾಷಿಂಗ್ ಮಿಶಿನ್ ಸೇರಿ ಹಲವು ವಸ್ತುಗಳು ಧ್ವಂಸಗೊಳಿಸಲಾಗಿದೆ. ಸಚಿನ್ ಮನೆಯವರು ಇಲ್ಲದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
