Thursday, 25th April 2019

Recent News

ಮುಸ್ಲಿಂ, ಕ್ರಿಶ್ಚಿಯನ್ನರೂ ರಾಮಮಂದಿರವನ್ನು ಬಯಸುತ್ತಾರೆ- ಜನಾರ್ದನ ಪೂಜಾರಿ

– ಪೈಗಂಬರ ಸಮಾಧಿ ನೋಡಿಯೇ ಮಲಗೋದು

ಮಂಗಳೂರು: ರಾಮ ಮಂದಿರ ನಿರ್ಮಾಣ ಆಗಿಯೇ ಆಗುತ್ತದೆ. ಮಂದಿರ ನಿರ್ಮಾಣವನ್ನು ಮುಸ್ಲಿಮರೂ, ಕ್ರಿಶ್ಚಿಯನ್ನರೂ ಬಯಸುತ್ತಾರೆ. ಮಂದಿರ ನಿರ್ಮಾಣಕ್ಕೆ ಯಾರೂ ವಿರೋಧ ಮಾಡೋದಿಲ್ಲ. ಬಿಜೆಪಿಯವರು ಸುಮ್ಮನೆ ಕ್ರಿಯೆಟ್ ಮಾಡೋದು ಬೇಡ ಅಂತ ಕಾಂಗ್ರೆಸ್ ಹಿರಿಯ ನಾಯಕ ಬಿ ಜನಾರ್ದನ ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಎಲ್ಲರಿಗೂ ದೇವರು. ಏಸು ಕ್ರಿಸ್ತರು ಯಾವ ರೀತಿ ಎಲ್ಲರಿಗೂ ದೇವರೋ, ಅದೇ ರೀತಿಯಲ್ಲಿ ರಾಮ ಕೂಡ. ನನಗೆ ಕೂಡ ದೇವರು. ಏಸು ಕ್ರಿಸ್ತರೂ ನನಗೆ ದೇವರು. ಮೊಹಮ್ಮದ್ ಪೈಗಂಬರ್ ಕೂಡ ನನಗೆ ದೇವರು ಅಂತ ತಿಳಿಸಿದ್ರು.

ಪೈಗಂಬರ್ ಸಮಾಧಿ ಇದ್ದ ಸ್ಥಳದಲ್ಲಿ ರಾತ್ರಿ ಸಾಕಷ್ಟು ಜನ ಸೇರುತ್ತಾರೆ. ಅದನ್ನು ನೋಡಿಯೇ ನಾನು ಮಲಗೋದು. ಅದಕ್ಕಿಂತ ಮುಂಚೆ ಮಲಗಲ್ಲ. ಪೈಗಂಬರ ಸಮಾಧಿಗೆ ಅಷ್ಟೊಂದು ಜನ ಯಾಕೆ ಹೋಗುತ್ತಾರೆ. ಅದಕ್ಕೆ ಉತ್ತರವೇ ಸಿಗಲ್ಲ. ಇಡೀ ಜಗತ್ತು ಒಂದೇ ಜಾತಿ-ಧರ್ಮ, ಒಂದೇ ದೇವರು. ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿಯವರ ತತ್ವವನ್ನು ಇಂದು ಇಡೀ ಜಗತ್ತೇ ಅನುಸರಿಸುತ್ತಾ ಇದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *