Crime
ವೈದ್ಯಕೀಯ ಅಧ್ಯಯನ ಪ್ರವೇಶಕ್ಕೆ 50 ಲಕ್ಷ ಲಂಚ ಪಡೆದಿದ್ದ ಡೀನ್ ಅರೆಸ್ಟ್

ಮುಂಬೈ: ಸ್ನಾತಕೋತ್ತರ ಕೋರ್ಸ್(ಡಾಕ್ಟರ್ ಆಫ್ ಮೆಡಿಸಿನ್) ಪ್ರವೇಶಕ್ಕಾಗಿ 50 ಲಕ್ಷ ರೂಪಾಯಿ ತೆಗೆದುಕೊಂಡಿದ್ದಕ್ಕಾಗಿ ಮುಂಬೈನ ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಯ ಸಹಾಯಕ ಡೀನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಲಂಚ ಪಡೆದಿರುವ ಆರೋಪಿ ಸಿಯಾನ್ ಆಸ್ಪತ್ರೆಯ ಡೀನ್ ರಾಕೇಶ್ ವರ್ಮಾ( 54) ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಆಲಿಶಾ ಅಬ್ದುಲ್ಲಾ ಶೇಖ್(28) ದೂರು ನೀಡಿದ್ದಾರೆ.
ಆಲಿಶಾ ಅಬ್ದುಲ್ಲಾ ಶೇಖ್ ಅವರು 50 ಲಕ್ಷ ಮೊತ್ತದ ಹಣವನ್ನು ನೀಡಿದರೆ ಮಾತ್ರ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಕೋಡುತ್ತೇನೆ ಎಂದು ರಾಕೇಶ್ ಹೇಳಿದ್ದರು. ಹೀಗಾಗಿ ಆಲಿಶಾ ಅವರ ತಂದೆ ವರ್ಮಾ ಅವರ ಬ್ಯಾಂಕ್ ಖಾತೆಗೆ 21 ಲಕ್ಷ ರೂಪಾಯಿ ಹಾಕಿದ್ದಾರೆ. ಆದರೆ ಆಲಿಶಾ ಅವರಿಗೆ ಕೋರ್ಸ್ಗೆ ಪ್ರವೇಶವನ್ನು ಮಾತ್ರ ನೀಡಿರಲಿಲ್ಲ. ಆಲಿಶಾ ಅವರ ತಂದೆ ಈ ಕುರಿತಾಗಿ ಕೇಳಿದಾಗಲೆಲ್ಲಾ ವರ್ಮಾ ತಪ್ಪಿಸಿಕೊಳ್ಳುತ್ತಿದ್ದರು. ಪ್ರವೇಶ ನೀಡುತ್ತೇನೆ ಎಂದು ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದರು.
ಇದರಿಂದ ಬೇಸರಗೋಂಡ ಆಲಿಶಾ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ವರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವರ್ಮಾ ತನ್ನ ಅಪರಾಧವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ನಿನ್ನೆ ಪೊಲೀಸರು ರಾಕೇಶ್ ವರ್ಮಾನನ್ನು ಬಂಧಿಸಿದ್ದಾರೆ.
