ಉಡುಪಿ: ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ (Mukesh Ambani) ಕುಟುಂಬದ ಬಿಜಲ್ ಮೇಸ್ವಾನಿ (Bijal Meswami) ಹಾಗೂ ಕುಟುಂಬಸ್ಥರು ಉಡುಪಿ ಶ್ರೀಕೃಷ್ಣ ಮಠಕ್ಕೆ (Udupi Krishna Mutt) ಭೇಟಿ ನೀಡಿದರು.
ಮಠದ ವತಿಯಿಂದ ಕುಟುಂಬಸ್ಥರನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ನವಗ್ರಹ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ಕುಟುಂಬಸ್ಥರು, ಬಳಿಕ ಶ್ರೀ ಮುಖ್ಯಪ್ರಾಣ ದೇವರ ದರ್ಶನವನ್ನೂ ಪಡೆದರು. ಇದನ್ನೂ ಓದಿ: ಮೈಸೂರು | ಅರಮನೆ ಪ್ರವೇಶದ ವೇಳೆ ಗಾಬರಿಗೊಂಡ ಶ್ರೀರಾಮ ಆನೆ – ಕೆಲಕಾಲ ಆತಂಕ
ಪರ್ಯಾಯ ಶ್ರೀ ಶಿರೂರು ಮಠಕ್ಕೆ ಆಗಮಿಸಿದ ಬಿಜಲ್ ಮೇಸ್ವಾನಿ ಹಾಗೂ ಕುಟುಂಬಸ್ಥರಿಗೆ ಪರ್ಯಾಯ ಶ್ರೀ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಮಠದ ದಿವಾನ ಉದಯ ಕುಮಾರ್ ಸರಳತ್ತಾಯ ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು ಉಪಸ್ಥಿತರಿದ್ದರು. ಇದನ್ನೂ ಓದಿ: PUBLiC TV Explainer| ಕೊನೆಗೂ ಕರುನಾಡ ರೈಲು ಜಾಲಕ್ಕೆ ಸೇರಿದ ಮಂಗಳೂರು – ಕೇರಳ ಲಾಬಿಗೆ ಬ್ರೇಕ್!
