ವಿಜಯಪುರ: ಕಾಂಗ್ರೆಸ್‌ನದ್ದು (Congress) ಮೂರು ವರ್ಷದ ಸಾಧನೆಯಲ್ಲ, ವೈಫಲ್ಯಗಳ ಸರಮಾಲೆಯನ್ನೇ ಸಿದ್ರಾಮಣ್ಣನ ಕೊರಳಿಗೆ ಹಾಕ್ತೀನಿ ಎಂದು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ (Ramesgh Jigajanagi) ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೆಡೆ ಮಹಿಳೆಯರಿಗೆ ಗ್ಯಾರಂಟಿ ಕೊಟ್ಟು, ಗಂಡನ ಜೇಬಿನಿಂದ ಕಿತ್ತಕೊಂಡಿದ್ದೀರಿ. ತಾಕತ್ ಇದ್ದರೆ ಗ್ಯಾರಂಟಿ ಕೊಡಿ, ತಾಕತ್ ಇಲ್ಲದೆ ಮಾಡಬಾರದು. ಕಾಂಗ್ರೆಸ್ ಸರ್ಕಾರ ಬರಿ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲ, ಕಳ್ಳತನ, ದರೋಡೆಗಳು ನಡೆಯುತ್ತಲೇ ಇದೆ. ಇವರ ಮೂರು ವರ್ಷದ ಸಾಧನೆ ಶೂನ್ಯ. ವೈಫಲ್ಯಗಳ ಸರಮಾಲೆಯನ್ನೇ ಸಿದ್ರಾಮಣ್ಣನ ಕೊರಳಿಗೆ ಹಾಕ್ತೀನಿ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜೀವ್ ಹತ್ಯೆಗೈದ LTTE ಮುಖ್ಯಸ್ಥ ಪ್ರಭಾಕರನ್‌ಗೆ ವಿಜಯ್ ಶೃದ್ಧಾಂಜಲಿ – ರಾಹುಲ್ ವಿರುದ್ಧ ಬಿಜೆಪಿ ವ್ಯಂಗ್ಯ
ಶಾಸಕರಿಗೆ ಅನುದಾನವೇ ಕೊಟ್ಟಿಲ್ಲ. ಕೇಂದ್ರ ಸರ್ಕಾರದಿಂದ ಮೋದಿ ಕೊಟ್ಟಿರುವ ರಸ್ತೆಗಳಿಗೆ ಭೂಮಿಪೂಜೆ ಮಾಡುತ್ತಾರೆ. ಇನ್ನು ಮೂರು ವರ್ಷ ಇವರು ಮಾಡಿದ್ದು ಬರೀ ಕುರ್ಚಿಗಾಗಿ ಗುದ್ದಾಟ ಅಷ್ಟೆ. ಮೂರು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ಯಾವುದು ಇಲ್ಲ ಎಂದಿದ್ದಾರೆ.

