Crime
ಎರಡು ಮಕ್ಕಳ ತಾಯಿಗೆ ಯುವಕನ ಮೇಲೆ ಲವ್!

– ಪ್ರೀತಿಗಾಗಿ ಧರ್ಮವನ್ನೇ ತೊರೆಯಲು ರೆಡಿ
ಪಾಟ್ನಾ: ಇಬ್ಬರು ಮಕ್ಕಳಿದ್ದೂ ಮಹಿಳೆಗೆ ಯುವಕನ ಮೇಲೆ ಪ್ರೀತಿ ಹುಟ್ಟಿದ ಪ್ರಕರಣವೊಂದು ಪಾಟ್ನಾದ ಪುಲ್ವಾರಿಶರೀಫ್ ಎಂಬಲ್ಲಿ ಬೆಳಕಿಗೆ ಬಂದಿದೆ.
2 ಮಕ್ಕಳ ತಾಯಿ ಸೋನಮ್ ಗೆ ಶಾಹೀದ್ ಎಂಬಾತನ ಮೇಲೆ ಪ್ರೇಮಾಂಕುರವಾಗಿದೆ. ಅಲ್ಲದೆ ತನ್ನ ಪ್ರಿಯತಮನಿಗೋಸ್ಕರ ಆಕೆ ತನ್ನಿಬ್ಬರು ಮಕ್ಕಳು ಹಾಗೂ ಪತಿಯನ್ನು ಕೂಡ ಕೈ ಕೈಬಿಡಲು ತೀರ್ಮಾನ ಮಾಡಿದ್ದಾಳೆ. ಹೀಗೆ ಎಲ್ಲರನ್ನೂ ಬಿಟ್ಟು ತನ್ನ ಬಾಯ್ ಫ್ರೆಂಡ್ ಜೊತೆ ಹಾಯಾಗಿ ಹೊಸ ಜೀವನ ನಡೆಸಲು ನಿರ್ಧರಿಸಿದ್ದಾಳೆ. ಇಷ್ಟು ಮಾತ್ರವಲ್ಲದೆ ತನ್ನ ಧರ್ಮವನ್ನು ಕೂಡ ತೊರೆದು ಶಾಹೀದ್ ಜೊತೆ ಮದುವೆಯಾಗಲು ನಿರ್ಧರಿಸಿದ್ದಾಳೆ.
ಇದೀಗ ಸೋನಮ್, ತಾನು ತನ್ನ ಗಂಡನ ಜೊತೆ ಸಂಸಾರ ನಡೆಸಲು ಹಾಗೂ ಮಕ್ಕಳನ್ನು ಕೂಡ ತನ್ನೊಂದಿಗೆ ಇಟ್ಟುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾಳೆ. ಸೋನಮ್ ಪತಿ, ಪೊಲೀಸ್ ಜೀಪಿನ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪತ್ನಿಯನ್ನು ಚೆನ್ನಾಗಿ ನೋಡುಕೊಳ್ಳುವುದಾಗಿ ಹೇಳಿದ್ದಾನೆ. ಆದರೆ ಸೋನಮ್ ಮಾತ್ರ ತನಗೆ ಗಂಡ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾಳೆ. ಇದರಿಂದ ಚಿಂತೆಗೀಡಾದ ಪತಿ ಮಗನನ್ನು ಬಿಟ್ಟು, ಮಗಳನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.
ಇಷ್ಟು ಮಾತ್ರವಲ್ಲದೆ ಸೋನಮ್, ನನ್ನ ಮಕ್ಕಳ ಮೇಲೆ ನನಗೆ ಯಾವುದೇ ಭಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಸದ್ಯ ಈ ಪ್ರಕರಣವು ನ್ಯಾಯಾಲಯದಲ್ಲಿದೆ. ತಾಯಿ ಇಲ್ಲದೆ ಮಕ್ಕಳು ತಮ್ಮ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ.
