ವಿಕ್ಟೋರಿಯಾ : ಭಾರತ(India) ಮತ್ತು ಸೀಶೆಲ್ಸ್ (Seychelles)ನಡುವಿನ ಸಂಬಂಧ ಕೇವಲ ರಾಜತಾಂತ್ರಿಕ ಮಟ್ಟಕ್ಕೆ ಸೀಮಿತವಾಗಿಲ್ಲ. ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯಕ್ಕೆ ಚಟ್ನಿ ಮತ್ತು ಸಮೋಸಾ ಕೂಡ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Modi) ಹೇಳಿದ್ದಾರೆ.
ಸೀಶೆಲ್ಸ್‌ನ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಸೀಶೆಲ್ಸ್ ನಡುವಿನ ಸಂಬಂಧದ ಬಗ್ಗೆ ವಿವರಿಸಿದರು. ಸೀಶೆಲ್ಸ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಸಮುದಾಯದ ಮೂಲಕ ಭಾರತದ ಆಹಾರ ಸಂಸ್ಕೃತಿ ಅಲ್ಲಿಗೂ ತಲುಪಿದೆ. ಚಟ್ನಿ ಮತ್ತು ಸಮೋಸಾದಂತಹ ಭಾರತೀಯ ಆಹಾರಗಳು ಎರಡೂ ದೇಶಗಳ ಹಂಚಿಕೊಂಡಿರುವ ಸಂಸ್ಕೃತಿ ಹಾಗೂ ಜನರ ನಡುವಿನ ಸ್ನೇಹದ ಸಂಕೇತವಾಗಿವೆ ಎಂದು ಹೇಳಿದರು.
ಭಾರತ ಮತ್ತು ಸೀಶೆಲ್ಸ್ ನಡುವೆ ಸಮುದ್ರ ಭದ್ರತೆ, ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಯೋಜನೆಗಳು, ಕೌಶಲ್ಯ ಅಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಹಕಾರವಿದೆ. ಮೂಲಸೌಕರ್ಯ ಅಭಿವೃದ್ಧಿ, ರಕ್ಷಣಾ ಸಹಕಾರ, ತಾಂತ್ರಿಕ ನೆರವು, ಸಾಲ ಸೌಲಭ್ಯ ಹಾಗೂ ಅನುದಾನದ ಮೂಲಕ ಭಾರತ, ಸೆಶೆಲ್ಸ್‌ನ ಪ್ರಮುಖ ಅಭಿವೃದ್ಧಿ ಪಾಲುದಾರ ದೇಶವಾಗಿದೆ.ಇದನ್ನೂ ಓದಿ: ಮುತ್ತಪ್ಪ ರೈ ನಂಟು, ದುಡ್ಡಿನ ಅಮಲು – ಡಿವಿಎಸ್ Vs ವಿಶ್ವನಾಥ್ ವಾಕ್ಸಮರ, ಬಿಜೆಪಿ ಭಿನ್ನಮತ ಸ್ಫೋಟ
ಎರಡೂ ದೇಶಗಳ ಸ್ನೇಹದಲ್ಲಿ ಭಾರತೀಯ ಸಮುದಾಯ, ಆಹಾರ ಪದ್ಧತಿ ಹಾಗೂ ಸಾಂಸ್ಕೃತಿಕ ಪರಂಪರೆ ಪ್ರಮುಖ ಸೇತುವೆಯಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತೀಯ ಮಹಾಸಾಗರ ಪ್ರದೇಶದ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತ ಕಾರ್ಯನಿರ್ವಹಿಸುತ್ತಿದ್ದು, ಸೀಶೆಲ್ಸ್ ಪ್ರಮುಖ ಕಾರ್ಯತಂತ್ರದ ಹಾಗೂ ಸಾಂಸ್ಕೃತಿಕ ಪಾಲುದಾರ ರಾಷ್ಟ್ರವಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ದೆಹಲಿಯಲ್ಲಿ ಹೊಸ ಇವಿ ಕಾರುಗಳಿಗೆ ಸಿಗಲಿದೆ 1 ಲಕ್ಷದವರೆಗೆ ರಿಯಾಯಿತಿ – ಗ್ರಾಹಕರಿಗೆ ಭರ್ಜರಿ ಸಬ್ಸಿಡಿ ಭಾಗ್ಯ!
