– ಮಾಲಿನ್ಯ ಮುಕ್ತ ರಾಜಧಾನಿಗೆ ಮಾಸ್ಟರ್ ಪ್ಲಾನ್
– ಪೆಟ್ರೋಲ್ ಬೈಕ್‌ಗಳು, ಸಿಎನ್‌ಜಿ ವಾಹನಗಳು ಬ್ಯಾನ್
ನವದೆಹಲಿ: ದೇಶದ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಲು ಮತ್ತು ಹಸಿರು ಸಾರಿಗೆಯನ್ನು ಉತ್ತೇಜಿಸಲು ದೆಹಲಿ ಸರ್ಕಾರವು (Delhi Government) ಮಹತ್ವದ ಹೆಜ್ಜೆ ಇಟ್ಟಿದೆ. ಹೊಸ ಎಲೆಕ್ಟ್ರಿಕ್ ವಾಹನ ನೀತಿಗೆ (Electric Vehicle Policy) ಸರ್ಕಾರ ಅಧಿಕೃತ ಅನುಮೋದನೆ ನೀಡಿದ್ದು, ಇವಿ ಗ್ರಾಹಕರಿಗೆ ಬಂಪರ್ ಸಬ್ಸಿಡಿ ಹಾಗೂ ರಸ್ತೆ ತೆರಿಗೆ ವಿನಾಯಿತಿಗಳನ್ನು ಪ್ರಕಟಿಸಿದೆ.
30 ಲಕ್ಷ ರೂ.ವರೆಗಿನ ಎಲೆಕ್ಟ್ರಿಕ್ ಕಾರುಗಳಿಗೆ (Electric Car) ರಸ್ತೆ ತೆರಿಗೆ (Road Tax) ಮತ್ತು ನೋಂದಣಿ ಶುಲ್ಕದಿಂದ (Registration fees) ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಆದರೆ ಇಂಧನ ಮತ್ತು ಎಲೆಕ್ಟ್ರಿಕ್‌ನಿಂದ ಚಲಿಸುವ ಹೈಬ್ರಿಡ್ ವಾಹನಗಳಿಗೆ ಯಾವುದೇ ಸಬ್ಸಿಡಿ ಇರುವುದಿಲ್ಲ, ಕೇವಲ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.
ಇದರೊಂದಿಗೆ ಮುಂದಿನ ಕೆಲವು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ದ್ವಿಚಕ್ರ ವಾಹನಗಳ ನೋಂದಣಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನೇ ರಸ್ತೆಗಿಳಿಸುವ ದೃಢ ಸಂಕಲ್ಪವನ್ನು ಸರ್ಕಾರ ಮಾಡಿದೆ.

ಯಾವ ವಾಹನಗಳಿಗೆ ಎಷ್ಟು?
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು – ಮೊದಲ ವರ್ಷ 30,000 ರೂ., ಎರಡನೇ ವರ್ಷ 20,000 ರೂ., ಮತ್ತು ಮೂರನೇ ವರ್ಷ 10,000 ರೂ. ಸಬ್ಸಿಡಿ ಸಿಗಲಿದೆ.
ಎಲೆಕ್ಟ್ರಿಕ್ ತ್ರೀ-ವೀಲರ್‌ಗಳು – ಮೊದಲ ವರ್ಷ 50,000 ರೂ., ಎರಡನೇ ವರ್ಷ 40,000 ರೂ., ಮತ್ತು ಮೂರನೇ ವರ್ಷ 30,000 ರೂ. ಸಬ್ಸಿಡಿ ಸಿಗಲಿದೆ.
ಎಲೆಕ್ಟ್ರಿಕ್ ಟ್ರಕ್‌ಗಳು (N1 ಕ್ಯಾಟಗರಿ) – ಖರೀದಿಯ ಮೇಲೆ 1 ಲಕ್ಷ ರೂ.ವರೆಗೆ ಪ್ರೋತ್ಸಾಹಧನ ಸಿಗಲಿದೆ.
ಹಳೆಯ ವಾಹನಗಳ ಸ್ಕ್ರ್ಯಾಪಿಂಗ್ – BS-IV ಅಥವಾ ಅದಕ್ಕಿಂತ ಹಳೆಯದಾದ 4-ವೀಲರ್ ವಾಹನಗಳನ್ನು ಗುಜರಿಗೆ (Scrap) ಹಾಕಿ ಎಲೆಕ್ಟ್ರಿಕ್ ವಾಹನಕ್ಕೆ ಬದಲಾಯಿಸುವವರಿಗೆ 1 ಲಕ್ಷ ರೂ. ರೆಗೆ ಸ್ಕ್ರ್ಯಾಪಿಂಗ್ ಇನ್ಸೆಂಟಿವ್ ಸಿಗಲಿದೆ.
दिल्ली में नई EV Policy को आज कैबिनेट ने मंजूरी दे दी है। राजधानी में व्हीकल पॉल्यूशन पर प्रभावी नियंत्रण और स्वच्छ परिवहन को बढ़ावा देने की दिशा में यह एक ऐतिहासिक कदम है।
नई EV Policy 1 जुलाई 2026 से लागू होगी और 31 मार्च 2030 तक प्रभावी रहेगी।
नीति की प्रमुख विशेषताएं:
— Rekha Gupta (@gupta_rekha) June 29, 2026
ಪೆಟ್ರೋಲ್/ಡೀಸೆಲ್ ವಾಹನಗಳ ಮೇಲೆ ನಿರ್ಬಂಧ
ಜನವರಿ 1, 2027 ರಿಂದ ದೆಹಲಿಯಲ್ಲಿ ಕೇವಲ ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಮಾತ್ರ ನೋಂದಣಿ ಮಾಡಲಾಗುತ್ತದೆ. ಏಪ್ರಿಲ್ 1, 2028 ರಿಂದ ಹೊಸ ಪೆಟ್ರೋಲ್ ಮತ್ತು ಸಿಎನ್‌ಜಿ (CNG) ದ್ವಿಚಕ್ರ ವಾಹನಗಳ ನೋಂದಣಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು. ಕೇವಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ.
ಈ ಪಾಲಿಸಿಯನ್ನು ಜುಲೈ 1 ರಿಂದ ಜಾರಿಗೆ ತರಲು ಯೋಜಿಸಲಾಗಿದ್ದು, ಮಾರ್ಚ್ 31, 2030 ರವರೆಗೆ ಇದು ಚಾಲ್ತಿಯಲ್ಲಿರಲಿದೆ. ಮುಂಬರುವ 4 ವರ್ಷಗಳಲ್ಲಿ ಸರ್ಕಾರವು ಸುಮಾರು 15,000 ಕೋಟಿ ರೂ. ಹೂಡಿಕೆ ಮತ್ತು ಪ್ರಯೋಜನಗಳನ್ನು ನಿರೀಕ್ಷಿಸಿದೆ. ಇದರಲ್ಲಿ 7,000 ಕೋಟಿ ರೂ.ಯನ್ನು ಸಬ್ಸಿಡಿಗಾಗಿ ಮತ್ತು 8,000 ಕೋಟಿ ರೂ. ಚಾರ್ಜಿಂಗ್ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಳಸಲಾಗುತ್ತದೆ.ಇಡೀ ದೆಹಲಿಯಾದ್ಯಂತ 32,000 ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.
