– SIR ವಿರುದ್ಧದ ಹೋರಾಟ ʻಸ್ವಾತಂತ್ರ್ಯದ 2ನೇ ಸಂಗ್ರಾಮʼ – ಖರ್ಗೆ ಬಣ್ಣನೆ
ಪಾಟ್ನಾ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಭಾಷಣ ಮಾಡುತ್ತಿದ್ದ ವೇದಿಕೆಯಲ್ಲೇ ವ್ಯಕ್ತಿಯೊಬ್ಬರ ವಿರುದ್ಧ ತಾಳ್ಮೆ ಕಳೆದುಕೊಂಡ ಘಟನೆ ಪಾಟ್ನಾದಲ್ಲಿ ನಡೆದಿದೆ.
ಇಂದು ಪಾಟ್ನಾದಲ್ಲಿ (Patna) ನಡೆದ ಶ್ರೀಕೃಷ್ಣ ಸಿಂಗ್ ಅವರ 139ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ತಮ್ಮ ಭಾಷಣಕ್ಕೆ ಅಡ್ಡಿಪಡಿಸಿದ ವ್ಯಕ್ತಿಯೊಬ್ಬರ ವಿರುದ್ಧ ಸಿಡಿಮಿಡಿಗೊಂಡ ಖರ್ಗೆ, ಪ್ರಧಾನಿ ವಿರುದ್ಧವೂ ಲೇವಡಿ ಮಾಡಿದ್ದಾರೆ.
किस तरह भाजपा ने वोट चोरी कर करोड़ों लोगों का वोटिंग का अधिकार छीना! ⤵️ https://t.co/rO54ruKAuw
— Mallikarjun Kharge (@kharge) October 25, 2026
ಖರ್ಗೆ ಅವರು ಭಾಷಣ ಮಾಡುತ್ತಿದ್ದ ವೇಳೆ ಸಭೀಕರಲ್ಲಿದ್ದ ವ್ಯಕ್ತಿಯೊಬ್ಬ ʻಮೋದಿ ಎಲ್ಲಿಗೂ ಹೋಗೋದಿಲ್ಲʼ ಅಂತಾ ಜೋರಾಗಿ ಕೂಗಿದ್ದಾರೆ, ಇದರಿಂದ ಸಿಟ್ಟಿಗೆದ್ದ ಖರ್ಗೆ ಅವರು, ಮೋದಿ (Modi) ಅವರಪ್ಪನೂ ಹೋಗ್ತಾರೆ (ಮೋದಿ ಕಾ ಬಾಪ್ ಭೀ ಜಾಯೇಗಾ) ಅಂತಾ ಲೇವಡಿ ಮಾಡಿದ್ದಾರೆ. ಖರ್ಗೆ ಅವರು ಹೇಳಿಕೆ ನೀಡಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.
ʻಕೈʼ ಕಾರ್ಯಕರ್ತರಿಂದ ವ್ಯಕ್ತಿ ಮೇಲೆ ಹಲ್ಲೆ
ಇದೇ ವೇಳೆ ಖರ್ಗೆ ಅವರ ಭಾಷಣಕ್ಕೆ ಅಡ್ಡಿಪಡಿಸಿದ ವ್ಯಕ್ತಿಯ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿ ಆತನನ್ನ ಸಭಾಂಗಣದಿಂದ ಹೊರಗೆ ಹಾಕಿದ್ದಾರೆ ಎಂದು ವರದಿಗಳು ತಿಳಿಸಿವೆ.
BJP ने ‘वोट चोरी’ कर सरकारें चोरी कर लीं।
पश्चिम बंगाल, हरियाणा, बिहार, महाराष्ट्र में चोरी की सरकार है। हम इन चोरों को सबक जरूर सिखाएंगे।
📍पटना, बिहार https://t.co/JbgS3zzyuB
— Mallikarjun Kharge (@kharge) October 25, 2026
2ನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರೆ
ಇದೇ ವೇಳೆ ಎಸ್ಐಆರ್ ಪ್ರತಿಭಟನೆಗಳನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯನ್ನ ರದ್ದುಗೊಳಿಸಬೇಕು. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಮತ್ತೆ ಬ್ಯಾಲೆಟ್ ಪೇಪರ್ಗಳನ್ನ (ಮತಪತ್ರ) ಬಳಸಬೇಕು. ಕಳೆದ ಎರಡು ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ ಅವರು, SIR ವಿರುದ್ಧದ ಹೋರಾಟವನ್ನ ʻಸ್ವಾತಂತ್ರ್ಯದ 2ನೇ ಸಂಗ್ರಾಮʼ ಎಂದು ಬಣ್ಣಿಸಿದರು.
ದೇಶದಲ್ಲಿ ವಿಭಜನೆಯನ್ನು ಹೆಚ್ಚಿಸುವ ಸಿದ್ಧಾಂತವನ್ನು ಆರ್ಎಸ್ಎಸ್ (RSS) ಮತ್ತು ಬಿಜೆಪಿ ಅನುಸರಿಸುತ್ತಿವೆ. ಆರ್ಎಸ್ಎಸ್ ಸಿದ್ಧಾಂತವನ್ನ ನಿರ್ಮೂಲನೆ ಮಾಡದ ಹೊರತು, ದೇಶದಲ್ಲಿ ಶಾಂತಿ ನೆಲೆಸುವುದಿಲ್ಲ ಎಂದು ಎಚ್ಚರಿಸಿದರು.
