Connect with us

ಮುಸ್ಲಿಂ ಧರ್ಮಗುರುವಿಗೆ ಕಾರ್ ಗಿಫ್ಟ್ ಕೊಟ್ಟ ಕೈ ಶಾಸಕ ವಿಜಯಾನಂದ ಕಾಶಪ್ಪನವರ್

ಮುಸ್ಲಿಂ ಧರ್ಮಗುರುವಿಗೆ ಕಾರ್ ಗಿಫ್ಟ್ ಕೊಟ್ಟ ಕೈ ಶಾಸಕ ವಿಜಯಾನಂದ ಕಾಶಪ್ಪನವರ್

ಬಾಗಲಕೋಟೆ: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು ಮತ ಸೆಳೆಯಲು ಒಂದಿಲ್ಲೊಂದು ಕಾರ್ಯತಂತ್ರ ರೂಪಿಸುತ್ತಾರೆ. ಹಾಗೆಯೇ ಬಾಗಲಕೋಟೆ ಜಿಲ್ಲೆ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ಮೌಲ್ವಿಯೊಬ್ಬರಿಗೆ ಕಾರು ಗಿಫ್ಟ್ ನೀಡಿದ್ದಾರೆ.

ಇಳಕಲ್ ನಗರದ ಹಜರತ್ ಖಾದ್ರಿ ಮುರ್ತುಜಾ ದರ್ಗಾದ ಮೌಲ್ವಿ ಹುಸೇನಿ ಪೃಷಲ್ ಪಾಷಾ ಅವರಿಗೆ 7.5 ಲಕ್ಷ ರೂ. ಮೌಲ್ಯದ ಟಾಟಾ ಟಿಯಾಗೊ ಕಾರ್ ಗಿಫ್ಟ್ ರೂಪದಲ್ಲಿ ನೀಡಿದ್ದಾರೆ.

ದರ್ಗಾದ ಉರುಸ್ ಕಾರ್ಯಕ್ರಮದ ಪ್ರಯುಕ್ತ ಕಾರ್ ಉಡುಗೊರೆ ನೀಡಿದ್ದು, ಮುಸ್ಲಿಂ ಮತ ಸೆಳೆಯಲು ಕಾರನ್ನು ಉಡುಗೊರೆ ನೀಡಿದ್ದಾರೆ ಎನ್ನುವ ಮಾತುಗಳು ಈಗ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Advertisement
Advertisement